ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಶ್ವ ಭೂಮಿ ದಿನ: ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಭೂಮಿಗೆ ಕಂಟಕವಾಗಿರುವುದು ಮನುಷ್ಯ

ಪ್ರತಿ ವರ್ಷ ನಾವು ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನಾಗಿ ಆಚರಿಸುತ್ತೇವೆ. ಈ ಭೂಮಿಯಲ್ಲಿ ಮನುಷ್ಯ ಮಾತ್ರವಲ್ಲ ಎಷ್ಟೋ ಜೀವ ಸಂಕುಲಗಳು, ಸೂಕ್ಷಾಣುಗಳು, ಸಸ್ಯಗಳು ಹೀಗೆ ಭೂಮಿ ತನ್ನ ಒಡಲಿನಲ್ಲಿ ಎಲ್ಲವನ್ನು ತುಂಬಿಕೊಂಡು ಜೀವ ರಾಶಿಗಳನ್ನು ಸಾಕಿ ಸಲುಹುತ್ತಿದೆ. ಆದರೆ ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಭೂಮಿಗೆ ಕಂಟಕವಾಗಿರುವುದು ಮನುಷ್ಯ ಮಾತ್ರ.
12:41 PM Apr 22, 2024 IST | Ashitha S

ಪ್ರತಿ ವರ್ಷ ನಾವು ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನಾಗಿ ಆಚರಿಸುತ್ತೇವೆ. ಈ ಭೂಮಿಯಲ್ಲಿ ಮನುಷ್ಯ ಮಾತ್ರವಲ್ಲ ಎಷ್ಟೋ ಜೀವ ಸಂಕುಲಗಳು, ಸೂಕ್ಷಾಣುಗಳು, ಸಸ್ಯಗಳು ಹೀಗೆ ಭೂಮಿ ತನ್ನ ಒಡಲಿನಲ್ಲಿ ಎಲ್ಲವನ್ನು ತುಂಬಿಕೊಂಡು ಜೀವ ರಾಶಿಗಳನ್ನು ಸಾಕಿ ಸಲುಹುತ್ತಿದೆ. ಆದರೆ ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಭೂಮಿಗೆ ಕಂಟಕವಾಗಿರುವುದು ಮನುಷ್ಯ ಮಾತ್ರ.

Advertisement

ಆದರೆ ಭೂಮಿಗೆ ಹಲವು ರೀತಿಯ ಆತಂಕಗಳು ಎದುರಾಗಿವೆ. ಅದರಲ್ಲಿ ಪ್ಲಾಸ್ಟಿಕ್ ಬಳಕೆ, ತಾಪಮಾನ ಏರಿಕೆ, ಮರಳುಗಾಡು ನಿರ್ಮಾಣವಾಗುತ್ತಿರುವುದು, ಜನಸಂಖ್ಯೆ, ಕಾಡು ನಾಶ ಹೀಗೆ ಇದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದ್ರೆ ನಾವೆಂದು ಭೂಮಿ ಉಳಿಸುವ ಕಡೆಗೆ ಇಂದಿಗೂ ಯೋಚಿಸಿಯೇ ಇಲ್ಲ.

ಭೂಮಿಯ ಮೇಲಿನ ಒಟ್ಟು ಆಹಾರಗಳಲ್ಲಿ ಶೇ.35ರಷ್ಟು ಮನುಷ್ಯನೊಬ್ಬನೇ ಭಕ್ಷಿಸುತ್ತಿದ್ದಾನೆ. ಮಿತಿಮೀರಿದ ಸೇವನೆಯಲ್ಲದೆ, ಹೆಚ್ಚು ಆಹಾರ ತ್ಯಾಜ್ಯಗಳು ಹುಟ್ಟುತ್ತಿರುವುದು ಮನುಷ್ಯನಿಂದಲೇ. ಕೈಗಾರಿಕೆ, ಯಂತ್ರೋಪಕರಣದ ಕಾಲಘಟ್ಟದಲ್ಲಿವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ಶೇ.33ರಷ್ಟು ಹೆಚ್ಚಾಗಿದೆ. 1950ರಿಂದ ಈಚೆಗೆ ಕೇವಲ 70 ವರ್ಷಗಳಲ್ಲಿ ಶೇ.10ರಷ್ಟು ಅಂದರೆ, 900ಕ್ಕೂ ಹೆಚ್ಚು ಜೀವಸಂಕುಲಗಳು ಹವಾಮಾನ ವೈಪರೀತ್ಯದಿಂದ ಕಣ್ಮರೆಯಾಗಿವೆ.

Advertisement

ಭೂಮಿಯನ್ನು ಉಳಿಸುವ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿರುವ ಕಾರಣ ಈ ದಿನವನ್ನು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಶಾಲೆಗಳ ಅವಧಿಯಲ್ಲಿ ನಡೆಸಲು ನೆರವಾಗುವಂತೆ ಏಪ್ರಿಲ್ 22ರಂದು ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಭಾರತದಲ್ಲಿ ಈ ವೇಳೆ ಬಹುತೇಕ ಕಡೆ ರಜಾ ದಿನಗಳಾಗಿವೆ. ಇನ್ನು ಮೊದಲ ಭೂಮಿ ದಿನವನ್ನು 1970ರಲ್ಲಿ ಆಚರಿಸಲಾಗಿತ್ತು.

ಪ್ರತಿ ವರ್ಷ ಭೂಮಿಯ ದಿನದಂದು ಒಂದೊಂದು ಥೀಮ್‌ ಘೋಷಿಸಲಾಗುತ್ತದೆ. ಭೂಮಿಯನ್ನು ಮುಂದಿನ ಪೀಳಿಗೆ ಉಳಿಸುವ ಕುರಿತಂತೆ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ತುರ್ತಾಗಿ ನೀಡಬೇಕಾದ ಎಲ್ಲಾ ನೆರವು ಸೇರಿದಂತೆ ವಿವಿಧ ವಿಚಾರಗಳು ಚರ್ಚೆಗೆ ಬರುತ್ತವೆ.

ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೊಸ ಥೀಮ್ ಮೂಲಕ ಭೂಮಿ ದಿನ ಆಚರಿಸಲು ಮುಂದಾಗಲಾಗಿದೆ. ಈ ವರ್ಷ, ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ ಎಂಬ ಥೀಮ್ ಇಟ್ಟುಕೊಳ್ಳಲಾಗಿದೆ. 2040 ರ ವೇಳೆಗೆ ಪ್ಲಾಸ್ಟಿಕ್ ಬಳಕೆಯನ್ನು ಶೇ.60ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಭೂಮಿಯು ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾದಂತೆಯೇ. ಹೀಗಾಗಿ ಭೂಮಿಯಲ್ಲಿ ಪರಿಸರವು ಮುಖ್ಯವಾಗಿರುವ ಕಾರಣ, ಭೂಮಿ ಹಾಗೂ ಪ್ರಕೃತಿ ಇವರೆಡನ್ನು ರಕ್ಷಿಸುವ ಬಗ್ಗೆ ಪ್ರಪಂಚದಾದ್ಯಂತ ಜಾಗೃತಿ ಮೂಡಿಸಲು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ.

ಈ ದಿನದ ಆಚರಣೆಯ ಅಂಗವಾಗಿ ದ್ವಜಾರೋಹಣೆ ಸಹ ನೆರವೇರಲಿದೆ. ಇದಕ್ಕಾಗಿ ವಿಶೇಷ ಧ್ವಜ ಸಹ ಇದೆ. ಅಪೊಲೊ 17 ಸಿಬ್ಬಂದಿ 1972 ರಲ್ಲಿ ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಭೂಮಿಯ ಪ್ರಸಿದ್ಧ ಛಾಯಾಚಿತ್ರ ಈ ಧ್ವಜದಲ್ಲಿ ಇರಲಿದೆ.

ಇನ್ನು ಈ ದಿನವನ್ನು ಗೂಗಲ್ ವಿಶೇಷವಾಗಿ ಆಚರಣೆ ಮಾಡಿಕೊಳ್ಳುತ್ತಿದೆ. ಗೂಗಲ್​​ ಯಾವುದೇ ಪ್ರಮುಖ ಆಚರಣೆಗಳಿದ್ದರು. ಅದಕ್ಕೆ ವಿಶೇಷ ಡೂಡಲ್​​​ ಮೂಲಕ ಶುಭಾಶಯಗಳನ್ನು ತಿಳಿಸುತ್ತದೆ. ಈ ಬಾರಿಯ ಪರಿಸರ ದಿನಕ್ಕೆ ಸ್ವಲ್ಪ ಡಿಫರೆಂಟ್​​ ಆಗಿ ಶುಭಾಶಯಗಳನ್ನು ತಿಳಿಸಿದೆ. ಹವಾಮಾನ ಬದಲಾವಣೆಯ ಮೇಲೆ ಗಮನ ಸೆಳೆಯಲು ಪ್ರಪಂಚದಾದ್ಯಂತದ ನೈಸರ್ಗಿಕ ಭೂದೃಶ್ಯಗಳ ಬಿಗಿ ವಾತಾವರಣವನ್ನು ವೈಮಾನಿಕ ಚಿತ್ರಣ ಒಳಗೊಂಡ ವಿಶೇಷ ಡೂಡಲ್​​ನ್ನು ಗೂಗಲ್ ಅನಾವರಣಗೊಳಿಸಿದೆ.

ಈ ಡೂಡಲ್ ಭೂಮಿಯ ಪರಿಸರ ವ್ಯವಸ್ಥೆಗಳ ಸೌಂದರ್ಯದತ್ತ ಗಮನ ಸೆಳೆಯುತ್ತಿದೆ ಹಾಗೂ ಪರಿಸರವನ್ನು ಸಂರಕ್ಷಿಸುವ ಜಾಗತಿಕ ಬದ್ಧತೆಯನ್ನು ಒತ್ತಿ ಹೇಳುತ್ತಿದೆ.

 

 

Advertisement
Tags :
indiaKARNATAKALifestyleNewsKarnatakaSpecailWorld Earth Day
Advertisement
Next Article