For the best experience, open
https://m.newskannada.com
on your mobile browser.
Advertisement

ವಿಶ್ವದ ಅತ್ಯಂತ ಕಲುಷಿತ ನಗರ ಎನ್ನುವ ಹಣೆಪಟ್ಟಿ ಹೊತ್ತ ದೆಹಲಿ !

ದೆಹಲಿ ಮತ್ತೊಮ್ಮೆ ವಿಶ್ವದ ಅತ್ಯಂತ ಕಲುಷಿತ ನಗರ ಎನಿಸಿಕೊಂಡಿದೆ.ಹೌದು ಸತತ ಆರನೇ ಬಾರಿಗೆ ಈ ಹಣೆಪಟ್ಟಿಯನ್ನು ದೆಹಲಿ ಹೊತ್ತುಕೊಂಡಿದೆ. ಹೊಸ ವರದಿಯ ಪ್ರಕಾರ ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿ ಹೊರಹೊಮ್ಮಿದೆ, ಆದರೆ ದೆಹಲಿಯು ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟ ಹೊಂದಿರುವ ನಗರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.
08:21 AM Mar 19, 2024 IST | Ashitha S
ವಿಶ್ವದ ಅತ್ಯಂತ ಕಲುಷಿತ ನಗರ ಎನ್ನುವ ಹಣೆಪಟ್ಟಿ ಹೊತ್ತ ದೆಹಲಿ

ದೆಹಲಿ: ದೆಹಲಿ ಮತ್ತೊಮ್ಮೆ ವಿಶ್ವದ ಅತ್ಯಂತ ಕಲುಷಿತ ನಗರ ಎನಿಸಿಕೊಂಡಿದೆ.ಹೌದು ಸತತ ಆರನೇ ಬಾರಿಗೆ ಈ ಹಣೆಪಟ್ಟಿಯನ್ನು ದೆಹಲಿ ಹೊತ್ತುಕೊಂಡಿದೆ. ಹೊಸ ವರದಿಯ ಪ್ರಕಾರ ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿ ಹೊರಹೊಮ್ಮಿದೆ, ಆದರೆ ದೆಹಲಿಯು ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟ ಹೊಂದಿರುವ ನಗರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.

Advertisement

ಸಾಮಾನ್ಯವಾಗಿ ಚಳಿಗಾಲದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯನ್ನ ನರಕ ಎಂದು ಕರೆಯುವುದು ಮಾಮೂಲು. ಏಕೆಂದರೆ ಅಲ್ಲಿ ಹೊಗೆ, ಮಂಜು ದೆಹಲಿ ಜನರನ್ನ ಇನ್ನಿಲ್ಲದ ರೀತಿ ಬಾಧಿಸುತ್ತದೆ.

ಸ್ವಿಸ್ ಸಂಸ್ಥೆ IQAir 2023ನೇ ಸಾಲಿನ ವಿಶ್ವ ವಾಯು ಗುಣಮಟ್ಟ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಎಲ್ಲಾ ಅಂಶಗಳಿವೆ. 2022 ರಲ್ಲಿ, ಪ್ರತಿ ಘನ ಮೀಟರ್‌ಗೆ ಸರಾಸರಿ 53.3 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಭಾರತವು ಎಂಟನೇ ಅತ್ಯಂತ ಕಲುಷಿತ ರಾಷ್ಟ್ರವಾಗಿತ್ತು.

Advertisement

ಬೇಗುಸರಾಯ್ ಪ್ರತಿ ಘನ ಮೀಟರ್‌ಗೆ ಸರಾಸರಿ 118.9 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಜಾಗತಿಕವಾಗಿ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿದೆ. ನಗರವು 2022 ರ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿಲ್ಲ.

ಪಿಎಂ2.5 ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಅಸ್ತಮಾ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಶ್ವಾಸಕೋಶದ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ.

Advertisement
Tags :
Advertisement