For the best experience, open
https://m.newskannada.com
on your mobile browser.
Advertisement

ವಿಶ್ವದ ಮೊದಲ ಮಿಸ್‌ ಎಐ ಸ್ಪರ್ಧೆ : ಇದು ಕೃತಕ ಸುಂದರಿಯರ ಸ್ಪರ್ಧೆ

ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಎಐ ಒಂದು ಹೆಜ್ಜೆ ಮುಂದೆ ಇಟ್ಟು ಸೌಂದರ್ಯ ಸ್ಪರ್ಧೆಯಲ್ಲು ತನ್ನ ಆಟವನ್ನು ತೋರಿಸಲು ನಿರ್ಧರಿಸಿದೆ. ಈಗಾಗಲೇ ಎಲ್ಲಡೆ ಎಐ ತನ್ನ ಜಾಲವನ್ನು ಸೃಷ್ಟಿ ಮಾಡಿದೆ.
04:00 PM Apr 18, 2024 IST | Nisarga K
ವಿಶ್ವದ ಮೊದಲ ಮಿಸ್‌ ಎಐ ಸ್ಪರ್ಧೆ   ಇದು ಕೃತಕ ಸುಂದರಿಯರ ಸ್ಪರ್ಧೆ
ವಿಶ್ವದ ಮೊದಲ ಮಿಸ್‌ ಎಐ ಸ್ಪರ್ಧೆ : ಇದು ಕೃತಕ ಸುಂದರಿಯರ ಸ್ಪರ್ಧೆ

ಸ್ಪೇನ್‌:  ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಎಐ ಒಂದು ಹೆಜ್ಜೆ ಮುಂದೆ ಇಟ್ಟು ಸೌಂದರ್ಯ ಸ್ಪರ್ಧೆಯಲ್ಲು ತನ್ನ ಆಟವನ್ನು ತೋರಿಸಲು ನಿರ್ಧರಿಸಿದೆ. ಈಗಾಗಲೇ ಎಲ್ಲಡೆ ಎಐ ತನ್ನ ಜಾಲವನ್ನು ಸೃಷ್ಟಿ ಮಾಡಿದೆ.

Advertisement

ಸಾಮಾನ್ಯವಾಗಿ ನಾವು ಮಿಸ್ ಇಂಡಿಯಾ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಎಂಬ ಮನುಷ್ಯರ ಸೌಂಧರ್ಯ ಸ್ಪರ್ಧೆಗಳನ್ನು ಕೇಳಿದ್ದೇವೆ ಇದೀಗ ಎಐ ಕೂಡ ಇದರಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಪ್ಲಾನ್‌ ಮಾಡಿದ್ದು ಮಿಸ್‌ ಎಐ ಸ್ಪರ್ಧೆಯನ್ನು ಆಯೋಜಿಸಿದೆ.

ಕೌಶಲ್ಯ, ಪ್ರತಿಭೆ, ಹಾವಭಾವ ಮುಂತಾದ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಕಂಪ್ಯೂಟರ್ ರಚಿತ ಸುಂದರಿಯರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.

Advertisement

ವರ್ಲ್ಡ್​​​ AI ಕ್ರಿಯೇಟರ್​​​​ ಅವಾರ್ಡ್ಸ್​​​​​​ ಆಯೋಜಿಸುತ್ತಿರುವ ಈ ಸೌಂದರ್ಯ ಸ್ಪರ್ಧೆಯನ್ನು ಟೆಕ್​​ ಪ್ರಪಂಚದ ‘ಆಸ್ಕರ್​​​​’ ಎಂದು ಕರೆಯಲಾಗುತ್ತಿದೆ. ವಿಷೇಶ ಏನೆಂದರೆ ಈ ಸ್ಪರ್ಧೆಯಲ್ಲಿ ಆರ್ಟಿಫಿಷಿಯಲ್‌ ಮಾಡೆಲ್‌ಗಳೇ ತೀರ್ಪುಗಾರರಾಗಿದ್ದಾರೆ. ಅದರಲ್ಲಿ ಸ್ಪೇನ್ ದೇಶದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಮಾಡೆಲ್ ಐಟಾನಾ ಲೋಪೆಜ್​ ಮತ್ತು ಮತ್ತೊಂದು ಪ್ರಭಾವಿ ಎಐ ಮಾಡೆಲ್​​ ಎಮಿಲಿ ಪೆಲ್ಲೆಗ್ರಿನಿ ಈ ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.

ಮುಖ್ಯವಾಗಿ ಈ ಎಐ ಸ್ಪರ್ಧೆಯಲ್ಲಿ ಗೆದ್ದ ಕೃತಕ ಬುದ್ಧಿಮತ್ತೆಯ ಸುಂದರಿಗೆ 15 ಲಕ್ಷ ಬಹುಮಾನವೂ ಸಿಗಲಿದೆ. ಏಪ್ರಿಲ್ 21 ರಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಸುಂದರಿಯರ ಅರ್ಜಿ ಆಹ್ವಾನಿಸಲಾಗುತ್ತಿದ್ದು, ಮೇ 10 ರಂದು ವಿಜೇತರನ್ನು ಘೋಷಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Advertisement
Tags :
Advertisement