For the best experience, open
https://m.newskannada.com
on your mobile browser.
Advertisement

ವುಮೆನ್ಸ್ ಪ್ರೀಮಿಯರ್ ಲೀಗ್​: ಇಂದು ಆರ್‌ಸಿಬಿ vs ಡಿಸಿ ಮುಖಾಮುಖಿ

ವುಮೆನ್ಸ್ ಪ್ರೀಮಿಯರ್ ಲೀಗ್​ನ 7ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ 3ನೇ ಮ್ಯಾಚ್ ಎಂಬುದು ವಿಶೇಷ. ಅಂದರೆ ಎರಡೂ ತಂಡಗಳು ಈಗಾಗಲೇ ತಲಾ 2 ಪಂದ್ಯಗಳನ್ನಾಡಿದೆ.
09:30 AM Feb 29, 2024 IST | Ashitha S
ವುಮೆನ್ಸ್ ಪ್ರೀಮಿಯರ್ ಲೀಗ್​  ಇಂದು ಆರ್‌ಸಿಬಿ vs ಡಿಸಿ ಮುಖಾಮುಖಿ

ಬೆಂಗಳೂರು: ವುಮೆನ್ಸ್ ಪ್ರೀಮಿಯರ್ ಲೀಗ್​ನ 7ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ 3ನೇ ಮ್ಯಾಚ್ ಎಂಬುದು ವಿಶೇಷ. ಅಂದರೆ ಎರಡೂ ತಂಡಗಳು ಈಗಾಗಲೇ ತಲಾ 2 ಪಂದ್ಯಗಳನ್ನಾಡಿದೆ.

Advertisement

ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು 2ನೇ ಪಂದ್ಯದದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಮತ್ತೊಂದೆಡೆ ಆರ್​ಸಿಬಿ ತಂಡವು ಎರಡೂ ಪಂದ್ಯಗಳಲ್ಲೂ ಜಯಭೇರಿ ಬಾರಿಸಿದೆ.

ಆರ್‌ಸಿಬಿ ಮತ್ತು ಡಿಸಿ ತಂಡಗಳು ಹೀಗಿವೆ:

Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ*, ಹೀದರ್ ನೈಟ್*, ಇಂದ್ರಾಣಿ ರಾಯ್, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್*, ಜಾರ್ಜಿಯಾ ವೇರ್ಹ್ಯಾಮ್*, ಏಕ್ತಾ ಬಿಶ್ತ್, ಕೇಟ್ ಕ್ರಾಸ್*, ಶುಭಾ ಸತೀಶ್, ಸಿಮ್ರಾನ್ ಬಹದ್ದೂರ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನಕ್ಸ್*.

ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ: ಆಲಿಸ್ ಕ್ಯಾಪ್ಸೆ*, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್*, ಲಾರಾ ಹ್ಯಾರಿಸ್*, ಮರಿಜಾನ್ನೆ ಕಪ್*, ಮೆಗ್ ಲ್ಯಾನಿಂಗ್ (ನಾಯಕಿ), ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ, ಟಿಟಾಸ್ ಸಾಧು, ಅನ್ನಾಬೆಲ್ ಸದರ್ಲ್ಯಾಂಡ್*, ಅಪರ್ಣಾ ಮೊಂಡಲ್, , ಅಶ್ವನಿ ಕುಮಾರಿ.

Advertisement
Tags :
Advertisement