ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂದು ಪ್ಲೇಆಫ್‌ ಪಂದ್ಯ: ಆರ್‌ಸಿಬಿ -ಮುಂಬೈ ಇಂಡಿಯನ್ಸ್ ಮುಖಾಮುಖಿ

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು(ಮಾ.15) ನಡೆಯಲಿರುವ ಮಹಿಳಾ ಪ್ರೀಮಿಯರ್‌ ಲೀಗ್‌ನ ಪ್ಲೇ ಆಫ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿಗೆ ಇದು ಮೊದಲ ಪ್ಲೇ ಆಫ್‌ ಪಂದ್ಯವಾಗಿದ್ದು ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
10:46 AM Mar 15, 2024 IST | Ashitha S

ವದೆಹಲಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು(ಮಾ.15) ನಡೆಯಲಿರುವ ಮಹಿಳಾ ಪ್ರೀಮಿಯರ್‌ ಲೀಗ್‌ನ ಪ್ಲೇ ಆಫ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿಗೆ ಇದು ಮೊದಲ ಪ್ಲೇ ಆಫ್‌ ಪಂದ್ಯವಾಗಿದ್ದು ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

Advertisement

ಐದು ತಂಡಗಳ ಲೀಗ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಮುಂಬೈ ಎರಡನೇ ಮತ್ತು ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿ ಮೂರನೇ ಸ್ಥಾನ ಪಡೆದು ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದವು. ಈ ಪಂದ್ಯದ ವಿಜೇತ ತಂಡವು ಭಾನುವಾರ , ಲೀಗ್‌ನಲ್ಲಿ ಮೊದಲ ಸ್ಥಾನ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಭಾನುವಾರ ನಡೆಯುವ ಫೈನಲ್‌ನಲ್ಲಿ ಎದುರಿಸಲಿದೆ.

ಗಾಯಗೊಂಡು ಒಂದು ಪಂದ್ಯ ಕಳೆದುಕೊಂಡಿದ್ದ ಯಷ್ಟಿಕಾ ಭಾಟಿಯಾ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳಲಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಸ್ಮೃತಿ ಮಂದಾನ, ರಿಚಾ ಘೋಷ್‌ ಮತ್ತು ಎಲ್ಲಿಸ್ ಪೆರಿ ಅವರಿಂದ ಆರ್‌ಸಿಬಿ ಆತ್ಮವಿಶ್ವಾಸದಲ್ಲಿದೆ. ಅದರಲ್ಲೂ ಪೆರಿ, ಮುಂಬೈ ವಿರುದ್ಧ ಪಂದ್ಯದಲ್ಲಿ ಅಮೋಘ ಆಲ್‌ರೌಂಡ್‌ ಆಟವಾಡಿದ್ದರು.

Advertisement

Advertisement
Tags :
GOVERNMENTindiaKARNATAKALatestNewsMINewsKannadaRCBWPL2024ನವದೆಹಲಿಮುಂಬೈ ಇಂಡಿಯನ್ಸ್
Advertisement
Next Article