ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೂಡುಬಿದಿರೆಯಲ್ಲಿ ಸಶಸ್ತ್ರ ಮೀಸಲು ಪಡೆ ಪರೀಕ್ಷೆ; ಅಭ್ಯರ್ಥಿಗಳಿಗಾಗಿ ಕೆಲ ಸೂಚನೆಗಳು

ಸಶಸ್ತ್ರ ಮೀಸಲು ಪೋಲಿಸ್ ಪಡೆಯಲ್ಲಿ ಖಾಲಿ ಇರುವ (ಪುರುಷ & ತೃತೀಯ ಲಿಂಗ ಪುರುಷ) ೩೦೬೪ ಹುದ್ದೆಗಳಿಗೆ ಜ.೨೮ರಂದು ಲಿಖಿತ ಪರೀಕ್ಷೆ ನಡೆಯುತ್ತಿದ್ದು, ಮೂಡುಬಿದಿರೆಯಲ್ಲಿ ೮ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಭಾನುವಾರ ಬೆಳಗ್ಗೆ ೧೧ರಿಂದ ೧೨:೩೦ರ ತನಕ ನಡೆಯಲಿರುವ ಪರೀಕ್ಷೆಗೆ ಸುಮಾರು ೧೭೦೦೦ ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ.
08:01 PM Jan 24, 2024 IST | Maithri S

ಮಂಗಳೂರು: ಸಶಸ್ತ್ರ ಮೀಸಲು ಪೋಲಿಸ್ ಪಡೆಯಲ್ಲಿ ಖಾಲಿ ಇರುವ (ಪುರುಷ & ತೃತೀಯ ಲಿಂಗ ಪುರುಷ) ೩೦೬೪ ಹುದ್ದೆಗಳಿಗೆ ಜ.೨೮ರಂದು ಲಿಖಿತ ಪರೀಕ್ಷೆ ನಡೆಯುತ್ತಿದ್ದು, ಮೂಡುಬಿದಿರೆಯಲ್ಲಿ ೮ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಭಾನುವಾರ ಬೆಳಗ್ಗೆ ೧೧ರಿಂದ ೧೨:೩೦ರ ತನಕ ನಡೆಯಲಿರುವ ಪರೀಕ್ಷೆಗೆ ಸುಮಾರು ೧೭೦೦೦ ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ.

Advertisement

ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಕೆಲ ಸಾಮಾನ್ಯ ಸೂಚನೆಗಳನ್ನು ನೀಡಲಾಗಿದೆ.
೦ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ೧೨೦ ನಿಮಿಷಗಳ ಮುಂಚೆ, ಅಂದರೆ ೯ ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.

೦ ಇಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್, ಬ್ಲೂಟುತ್, ಪೇಪರ್ ತೊಂಡು, ಪುಸ್ತಕ, ನೋಟ್ ಇತ್ಯಾದಿಗಳನ್ನು ಕೊಠಡಿಯ ಒಳಗೆ ಒಯ್ಯುವಂತಿಲ್ಲ.

Advertisement

೦ಪ್ರವೇಶ ಪತ್ರದೊಂದಿಗೆ ಅಭ್ಯರ್ಥಿಗಳು ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಆಧಾರ್, ಪಾನ್ ಕಾರ್ಡ್, ಓಟರ್ ಐಡಿಗಳಂತಹ ಗುರುತಿನ ಚೀಟಿಗಳನ್ನು ಹೊಂದಿದ್ದರೆ ಮಾತ್ರ ಪ್ರವೇಶ.

೦ಪುರುಷ ಹಾಗು ತೃತಿಯ ಲಿಂಗ ಪುರುಷರು ಅರ್ಧ ತೋಳಿನ ಕಾಲರ್ ರಹಿತ ಶರ್ಟ್ ಗಳನ್ನು ಧರಿಸಬೇಕು. ಜಿಪ್ ಪಾಕೆಟ್, ದೊಡ್ಡ ಬಟನ್ ಇರುವ ಶರ್ಟ್ ಧರಿಸುವಂತಿಲ್ಲ.

೦ ಜೀನ್ಸ್ ಪ್ಯಾಂಟ್ ನಂತಹ ಹೆಚ್ಚಿನ ಜೇಬುಗಳಿರುವ ಪ್ಯಾಂಟ್ ಗಳನ್ನು ಧರಿಸುವಂತಿಲ್ಲ.

೦ಷೂಗಳಿಗೂ ನಿಷೇಧವಿದ್ದು, ತೆಳುವಾದ ಅಡಿಯುಳ್ಳ ಚಪ್ಪಲಿಗಳನ್ನು ಧರಿಸತಕ್ಕದ್ದು.

೦ಕೊರಳಿಗೆ ಹಾಗು ಕೈಗಳಿಗೆ ಲೋಹದ ಆಭರಣಗಳನ್ನು ಧರಿಸುವಂತಿಲ್ಲ. ಬೆಲೆಬಾಳುವ ವಸ್ತುಗಳನ್ನು ತರದಂತೆ ಸೂಚನೆ.

Advertisement
Tags :
Armed reserve forceEXAMINATIONKARNATAKALatestNewsNewsKannada
Advertisement
Next Article