For the best experience, open
https://m.newskannada.com
on your mobile browser.
Advertisement

ದೇಶಾದ್ಯಂತ X ಸೇವೆ ಡೌನ್; ಬಳಕೆದಾರರ ಆಕ್ರೋಶ!

ಭಾರತದಲ್ಲಿ ಹಲವು X (ಟ್ವಿಟರ್) ಬಳಕೆದಾರರು ಪರದಾಡುವಂತಾಗಿದೆ. ದೇಶಾದ್ಯಂತ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಇದರ ನಡುವೆ ಎಕ್ಸ್ ಸೇವೆ ಡೌನ್ ಆಗಿರುವುದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದಲ್ಲಿ ಹಲವು ಬಳಕೆದಾರರು ಎಕ್ಸ್ ಸೇವೆ ಡೌನ್ ಆಗಿರುವ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ವೇಳೆ ಡೌನ್‌ಡಿಟೆಕ್ಟರ್ ಈ ಕುರಿತು ವರದಿ ಮಾಡಿದೆ.
05:41 PM Apr 26, 2024 IST | Ashitha S
ದೇಶಾದ್ಯಂತ x ಸೇವೆ ಡೌನ್  ಬಳಕೆದಾರರ ಆಕ್ರೋಶ

ನವದೆಹಲಿ: ಭಾರತದಲ್ಲಿ ಹಲವು X (ಟ್ವಿಟರ್) ಬಳಕೆದಾರರು ಪರದಾಡುವಂತಾಗಿದೆ. ದೇಶಾದ್ಯಂತ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಇದರ ನಡುವೆ ಎಕ್ಸ್ ಸೇವೆ ಡೌನ್ ಆಗಿರುವುದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದಲ್ಲಿ ಹಲವು ಬಳಕೆದಾರರು ಎಕ್ಸ್ ಸೇವೆ ಡೌನ್ ಆಗಿರುವ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ವೇಳೆ ಡೌನ್‌ಡಿಟೆಕ್ಟರ್ ಈ ಕುರಿತು ವರದಿ ಮಾಡಿದೆ.

Advertisement

ಡೌನ್‌ಡಿಟೆಕ್ಟರ್ ವರದಿ ಪ್ರಕಾರ, ಎಕ್ಸ್ ವೆಬ್‌ಸೈಟ್ ಹಾಗೂ ಆ್ಯಪ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ಮಾಡಿದೆ. ಮಧ್ಯಾಹ್ನ ಸುಮಾರು 1.15ರ ಹೊತ್ತಿಗೆ ಸಮಸ್ಯೆ ಕಾಣಿಸಿಕೊಂಡಿರುವ ಕುರಿತು 145ಕ್ಕೂ ಅಧಿಕ ಬಳಕೆದಾರರು ದೂರು ನೀಡಿದ್ದರು ಎಂದಿದೆ.

ಶೇಕಡಾ 57 ರಷ್ಟು ಬಳಕೆದಾರರು ಸರ್ವರ್ ಸಮಸ್ಯೆ ಎದುರಿಸಿದ್ದಾರೆ ಎಂದು ವರದಿ ಮಾಡಿದೆ. ಇನ್ನು ಶಕೇಡಾ 36 ರಷ್ಟು ಬಳಕೆದಾರರು ಎಕ್ಸ್ ಆ್ಯಪ್‌ನಿಂದ ಸಮಸ್ಯೆಯಾಗಿದೆ ಎಂದು ವರದಿ ಮಾಡಿದ್ದಾರೆ. ಇನ್ನು ಶೇಕಡಾ 7 ರಷ್ಟು ಬಳಕೆದಾರರು ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ. ಬಳಕೆದಾರರು ಇತರ ಸಾಮಾಜಿಕ ಮಾಧ್ಯಮದಲ್ಲೂ ಈ ಕುರಿತು ಆಕ್ರೋಶ ಹೊರಹಾಕಿದ್ದಾರೆ.

Advertisement

Advertisement
Tags :
Advertisement