For the best experience, open
https://m.newskannada.com
on your mobile browser.
Advertisement

ಮುದ್ದಾದ ಮಗುವಿನ ತಾಯಿಯಾದ ಯಾಮಿ ಗೌತಮ್; ಕಂದನಿಗೆ ಇಟ್ಟ ಹೆಸರೇನು ಗೊತ್ತಾ?

ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು ಮೇ 10 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ಯಾಮಿ ಗೌತಮ್ ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಸೋಶಿಯಲ್​​ ಮೀಡಿಯಾದಲ್ಲಿ ಈ ಸುದ್ದಿ ಹಂಚಿಕೊಳ್ಳುವ ಮೂಲಕವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
01:36 PM May 20, 2024 IST | Ashitha S
ಮುದ್ದಾದ ಮಗುವಿನ ತಾಯಿಯಾದ ಯಾಮಿ ಗೌತಮ್  ಕಂದನಿಗೆ ಇಟ್ಟ ಹೆಸರೇನು ಗೊತ್ತಾ

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು ಮೇ 10 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ಯಾಮಿ ಗೌತಮ್ ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಸೋಶಿಯಲ್​​ ಮೀಡಿಯಾದಲ್ಲಿ ಈ ಸುದ್ದಿ ಹಂಚಿಕೊಳ್ಳುವ ಮೂಲಕವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Advertisement

ಯಾಮಿ ಗೌತಮ್ , ಆದಿತ್ಯ ಧರ್ ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ಮಗನಿಗೆ ಜನ್ಮ ನೀಡಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ ತಮ್ಮ ಮಗನ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

ಯಾಮಿ ಪತಿ ಆದಿತ್ಯ ಧಾರ್ ಕೂಡ ಪೋಸ್ಟ್ ಮಾಡಿದ್ದು, ಅಕ್ಷಯ ತೃತೀಯ ದಿನದಂದು ತನ್ನ ಮಗ ಜನಿಸಿದ ಎಂದು ಹೇಳಿದ್ದಾರೆ.

Advertisement

ಇನ್ನು ಆದಿತ್ಯ-ಯಾಮಿ ತಮ್ಮ ಪುಟ್ಟ ಮಗನಿಗೆ ವೇದಗಳ ಹೆಸರಿಟ್ಟಿದ್ದಾರೆ. ದಂಪತಿ ಹೊಸ ಅತಿಥಿಗೆ "ವೇದವಿದ್" ಎಂದು ಹೆಸರಿಸಿದ್ದಾರೆ. ಇದು ಸಂಸ್ಕೃತದ ಹೆಸರು, ಇದನ್ನು ವೇದ ಮತ್ತು ವಿದ್ ಅನ್ನು ಸಂಯೋಜಿಸಿ ಈ ಹೆಸರನ್ನು ಇಡಲಾಗಿದೆ.
'ಸೂರ್ಯ ಆಸ್ಪತ್ರೆಯ ಅಸಾಧಾರಣ ಸಮರ್ಪಿತ ಮತ್ತು ಅದ್ಭುತ ವೈದ್ಯಕೀಯ ವೃತ್ತಿಪರರಿಗೆ, ವಿಶೇಷವಾಗಿ ಡಾ. ಭೂಪೇಂದ್ರ ಅವಸ್ಥಿ ಮತ್ತು ಡಾ. ರಂಜನಾ ಧನು ಅವರು ಉತ್ತಮ ಚಿಕಿತ್ಸೆ ನೀಡಿದ್ದಕ್ಕೆ ಧನ್ಯವಾದ. ಪೋಷಕರ ಈ ಸುಂದರ ಪ್ರಯಾಣವನ್ನು ನಾವು ಪ್ರಾರಂಭಿಸಿದಾಗ, ನಮ್ಮ ಮಗನ ಉಜ್ವಲ ಭವಿಷ್ಯಕ್ಕಾಗಿ ನಾವು ಕುತೂಹಲದಿಂದ ಎದುರು ನೋಡುತ್ತೇವೆ. ಅವರ ಪ್ರತಿಯೊಂದು ಸಾಧನೆಯೊಂದಿಗೆ, ಅವರು ನಮ್ಮ ಇಡೀ ಕುಟುಂಬಕ್ಕೆ ಮತ್ತು ನಮ್ಮ ಪ್ರೀತಿಯ ದೇಶಕ್ಕೆ ಹೆಮ್ಮೆಯ ಸಂಕೇತವಾಗುತ್ತಾರೆ ಎಂಬ ಭರವಸೆ ಮತ್ತು ವಿಶ್ವಾಸದಿಂದ ನಾವು ತುಂಬಿದ್ದೇವೆ ಎಂದು ಯಾಮಿ ಗೌಮತ್​​ ಬರೆದುಕೊಂಡಿದ್ದಾರೆ.

https://www.instagram.com/p/C7Lc8CFIjp2/

Advertisement
Tags :
Advertisement