For the best experience, open
https://m.newskannada.com
on your mobile browser.
Advertisement

ಆಪ್ತ ಸಹಾಯಕನ ಮನೆಗೆ ಸರ್ಪ್ರೈಸ್ ಎಂಟ್ರಿ: ಮಗುವಿಗೆ ದುಬಾರಿ ಗಿಫ್ಟ್ ಕೊಟ್ಟ ಯಶ್

ರಾಕಿಂಗ್ ಸ್ಟಾರ್ ಯಶ್ ಸದ್ಯ ಟಾಕ್ಸಿಕ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡಿರುವ ನಟ ಯಶ್ ಆಪ್ತ ಸಹಾಯಕನ ಮನೆಗೆ ಪತ್ನಿ ರಾಧಿಕಾ ಜೊತೆ ಸರ್ಪ್ರೈಸ್ ವಿಸೀಟ್ ನೀಡಿದ್ದಾರೆ. ಚೇತನ್ ಎಂಬುವವರು ಕಳೆದ 10 ವರ್ಷಗಳಿಂದ ಯಶ್‌ಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ.
08:02 PM Feb 12, 2024 IST | Ashitha S
ಆಪ್ತ ಸಹಾಯಕನ ಮನೆಗೆ ಸರ್ಪ್ರೈಸ್ ಎಂಟ್ರಿ  ಮಗುವಿಗೆ ದುಬಾರಿ ಗಿಫ್ಟ್ ಕೊಟ್ಟ ಯಶ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸದ್ಯ ಟಾಕ್ಸಿಕ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡಿರುವ ನಟ ಯಶ್ ಆಪ್ತ ಸಹಾಯಕನ ಮನೆಗೆ ಪತ್ನಿ ರಾಧಿಕಾ ಜೊತೆ ಸರ್ಪ್ರೈಸ್ ವಿಸೀಟ್ ನೀಡಿದ್ದಾರೆ. ಚೇತನ್ ಎಂಬುವವರು ಕಳೆದ 10 ವರ್ಷಗಳಿಂದ ಯಶ್‌ಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ.

Advertisement

ಇತ್ತೀಚೆಗೆ ಚೇತನ್ ತಂದೆಯಾಗಿದ್ದು, ಇದೇ ಕಾರಣಕ್ಕೆ ಪತ್ನಿಯ ಜೊತೆ ಸಹಾಯಕನ ಮನೆಗೆ ಆಗಮಿಸಿ ಶುಭಹಾರೈಸಿದ್ದಾರೆ.

ದೀಡಿರ್ ಆಗಿ ಯಶ್ ಮನೆಗೆ ಭೇಟಿ ನೀಡಿದ್ದು ನೋಡಿ ಚೇತನ್ ಫುಲ್ ಖುಷಿಯಾಗಿದ್ದಾರೆ. ಈ ವೇಳ ಯಶ್ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡಿದ್ದು ಮಗುವಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.ಅಷ್ಟೇ ಅಲ್ಲದೇ ತಾನೇ ಮಗುವಿಗೆ ಚಿನ್ನದ ಚೈನ್ ಹಾಕಿದ್ದಾರೆ. ಈ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisement

Advertisement
Tags :
Advertisement