For the best experience, open
https://m.newskannada.com
on your mobile browser.
Advertisement

ತಮ್ಮ ಮುಂದಿನ ಸಿನಿಮಾ ಕುರಿತು ಮಾತನಾಡಿದ ಯಶ್‌

ನಟ ಯಶ್‌ಗೆ ಕೆಜಿಎಫ್‌ ಬಹುದೊಡ್ಡ ಯಶಸ್ಸು ತಂದು ಕೊಟ್ಟ ಸಿನಿಮಾ. ಈ ಸಿನಿಮಾ ದೇಶ ವಿದೇಶಗಳಲ್ಲಿ ಅವರಿಗೆ ಖ್ಯಾತಿ ತಂದು ಕೊಟ್ಟಿದ್ದಲ್ಲದೆ ಸೌತ್‌ ಸಿನಿಮಾ ಇಂಡಸ್ಟ್ರಿಯನ್ನು ಬೇರೊಂದು ಲೆವೆಲ್‌ಗೆ ಕೊಂಡುಹೋಗಿದೆ ಎಂದರೆ ತಪ್ಪಾಗಲಾರದು.
04:27 PM Nov 23, 2023 IST | Ashika S
ತಮ್ಮ ಮುಂದಿನ ಸಿನಿಮಾ ಕುರಿತು ಮಾತನಾಡಿದ ಯಶ್‌

ಬೆಂಗಳೂರು: ನಟ ಯಶ್‌ಗೆ ಕೆಜಿಎಫ್‌ ಬಹುದೊಡ್ಡ ಯಶಸ್ಸು ತಂದು ಕೊಟ್ಟ ಸಿನಿಮಾ. ಈ ಸಿನಿಮಾ ದೇಶ ವಿದೇಶಗಳಲ್ಲಿ ಅವರಿಗೆ ಖ್ಯಾತಿ ತಂದು ಕೊಟ್ಟಿದ್ದಲ್ಲದೆ ಸೌತ್‌ ಸಿನಿಮಾ ಇಂಡಸ್ಟ್ರಿಯನ್ನು ಬೇರೊಂದು ಲೆವೆಲ್‌ಗೆ ಕೊಂಡುಹೋಗಿದೆ ಎಂದರೆ ತಪ್ಪಾಗಲಾರದು.

Advertisement

ಇದೀಗ ಯಶ್‌ ಅವರ ಮುಂದಿನ ಸಿನಿಮಾ ಯಾವುದು ಎಂದು ಎಲ್ಲರಿಗೂ ಕುತೂಹಲ ಮೂಡಿದೆ. ಈ ಕುರಿತು ಸ್ವತ ಯಶ್‌ ಮಾತನಾಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

‘‘ನನಗೆ ನಿಮ್ಮ ಕಾತರ ಅರ್ಥವಾಗುತ್ತದೆ. ನನ್ನನ್ನು ದೊಡ್ಡದಾಗಿ ಬೆನ್ನುತಟ್ಟಿದ್ದೀರ. ಆದರೆ ನಾನು ಸುಮ್ಮನೆ ಕೂತಿಲ್ಲ, ನಾನು ರಿಲ್ಯಾಕ್ಸ್ ಆಗುತ್ತಿಲ್ಲ, ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಜ್ಜಾಗುತ್ತಿದ್ದೇನೆ. ಸಾಧಾರಣವಾದ ಕೆಲಸ ಮಾಡಲು ನನಗೆ ಇಷ್ಟವಿಲ್ಲ, ಎಲ್ಲರೂ ಹೆಮ್ಮೆ ಪಡುವಂತಹಾ ಕೆಲಸವನ್ನೇ ಮಾಡುತ್ತೇನೆ’’ ಎಂದಿದ್ದಾರೆ.

Advertisement

‘‘ನಾನು ಯಾವತ್ತೂ ಸಿನಿಮಾ ಅನೌನ್ಸ್​ಮೆಂಟ್ ಎಂದು ಹೇಳಿಲ್ಲ. ಆದರೆ ಪ್ರತಿ ಹಬ್ಬ ಬಂದಾಗ, ಹುಟ್ಟುಹಬ್ಬ ಬಂದಾಗೆಲ್ಲ ಯಶ್ ಸಿನಿಮಾ ಘೋಷಣೆ ಎಂದು ಸುದ್ದಿ ಹಾಕ್ತಾರೆ ಇದರಿಂದ ಗೊಂದಲ ಸೃಷ್ಟಿಯಾಗಿದೆ. ಖಂಡಿತ ಸಿನಿಮಾ ಅಪ್​ಡೇಟ್ ಕೊಡುತ್ತೀನಿ, ಎಲ್ಲ ಊಟ ರೆಡಿಯಾದ ಮೇಲೆ ಬಡಿಸಿದರೇನೆ ಚೆಂದ. ಅರ್ಧಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆಯುವುದು ಸರಿ ಹೋಗುವುದಿಲ್ಲ. ನೀವೆಲ್ಲರೂ ಹೆಮ್ಮೆ ಪಡುವಂತಹಾ ಕೆಲಸ ಮಾಡುತ್ತೀನಿ’’ ಎಂದು ಯಶ್‌ ಹೇಳಿದ್ದಾರೆ.

Advertisement
Tags :
Advertisement