For the best experience, open
https://m.newskannada.com
on your mobile browser.
Advertisement

ಮೆಟ್ರೋ ನಿಲ್ದಾಣಗಳಿಗೆ ನಟ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಲು ಯತ್ನಾಳ್‌ ಒತ್ತಾಯ

ಮೆಟ್ರೋ ನಿಲ್ದಾಣಗಳಿಗೆ ನಟ ಶಂಕರ್‌ ನಾಗ್‌ ಮತ್ತು ನಟಿ, ನಿರೂಪಕಿ ಅಪರ್ಣಾ ಹೆಸರು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಒತ್ತಾಯಿಸಿದ್ದಾರೆ.‌
01:27 PM Jul 14, 2024 IST | Ashitha S
ಮೆಟ್ರೋ ನಿಲ್ದಾಣಗಳಿಗೆ ನಟ ಶಂಕರ್‌ ನಾಗ್‌  ಅಪರ್ಣಾ ಹೆಸರಿಡಲು ಯತ್ನಾಳ್‌ ಒತ್ತಾಯ

ಬೆಂಗಳೂರು: ಮೆಟ್ರೋ ನಿಲ್ದಾಣಗಳಿಗೆ ನಟ ಶಂಕರ್‌ ನಾಗ್‌ ಮತ್ತು ನಟಿ, ನಿರೂಪಕಿ ಅಪರ್ಣಾ ಹೆಸರು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಒತ್ತಾಯಿಸಿದ್ದಾರೆ.‌

Advertisement

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಕನ್ನಡ ಚಿತ್ರರಂಗದ ಮೇರು ನಟ ಶಂಕರ್ ನಾಗ್ ಹಾಗೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಅಪರ್ಣಾ ಅವರ ಕೊಡುಗೆ ಕರ್ನಾಟಕಕ್ಕೆ ಹಾಗೂ ಕನ್ನಡಕ್ಕೆ ಅಪಾರವಾದುದು. ಶಂಕರ್ ನಾಗ್ ಹಾಗೂ ಅಪರ್ಣಾ ಅವರ ಹೆಸರುಗಳನ್ನು ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಸರ್ಕಾರ ನಾಮಕರಣ ಮಾಡಲಿ ಎಂದು ಎಂದು ಯತ್ನಾಳ್‌ ಬೇಡಿಕೆ ಇಟ್ಟಿದ್ದಾರೆ.

https://x.com/BasanagoudaBJP/status/1812042864798433350

Advertisement

Advertisement
Tags :
Advertisement