ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಯೆನೆಪೋಯ ಡೆಂಟಲ್ ಕಾಲೇಜಿನಲ್ಲಿ ಲಸಿಕಾ ಸಹಾಯವಾಣಿಯ ಉದ್ಘಾಟಣಾ ಸಮಾರಂಭ

ಇಂದು(ಏಪ್ರೀಲ್‌ ೦೪) ಬೆಳಿಗ್ಗೆ 10 ಗಂಟೆಗೆ ಯೆನೆಪೋಯ ಡೆಂಟಲ್ ಕಾಲೇಜಿನ ಸಭಾಂಗಣದಲ್ಲಿ ಮಕ್ಕಳ ವಿಭಾಗದಿಂದ ಮಕ್ಕಳ ಲಸಿಕಾ ಸಹಾಯವಾಣಿಯ ಉದ್ಘಾಟಣಾ ಸಮಾರಂಭವು ನಡೆಯಿತು.
05:45 PM Apr 04, 2024 IST | Nisarga K
ಯೆನೆಪೋಯ ಡೆಂಟಲ್ ಕಾಲೇಜಿನಲ್ಲಿ ಲಸಿಕಾ ಸಹಾಯವಾಣಿಯ ಉದ್ಘಾಟಣಾ ಸಮಾರಂಭ

ಮಂಗಳೂರು: ಇಂದು(ಏಪ್ರೀಲ್‌ ೦೪) ಬೆಳಿಗ್ಗೆ 10 ಗಂಟೆಗೆ ಯೆನೆಪೋಯ ಡೆಂಟಲ್ ಕಾಲೇಜಿನ ಸಭಾಂಗಣದಲ್ಲಿ ಮಕ್ಕಳ ವಿಭಾಗದಿಂದ ಮಕ್ಕಳ ಲಸಿಕಾ ಸಹಾಯವಾಣಿಯ ಉದ್ಘಾಟಣಾ ಸಮಾರಂಭವು ನಡೆಯಿತು.

Advertisement

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಹರ್ಷಿತ್ ಜಿ.ಸಿ., ಸರ್ವೆಲೆನ್ಸ್ ಮೆಡಿಕಲ್ ಆಫೀಸರ್ ಡಬ್ಲ್ಯು.ಎಚ್.ಒ., ಮಂಗಳೂರು ಆಗಮಿಸಿದ್ದರು. ಇವರು ಸಭೆಯನ್ನುದ್ದೇಶಿಸಿ ಮಾತನಾಡಿ, ಮಕ್ಕಳ ಲಸಿಕೆಯನ್ನು ಉತ್ತೇಜಿಸಲು ಯೆನಪೋಯ  ಕಾಲೇಜ್ ವತಿಯಿಂದ ಈ ಸಹಾಯವಾಣಿಯ ಪ್ರಾರಂಭವನ್ನು ಶ್ಲಾಘಿಸಿದರು. ಡಾ.ಎಮ್.ಎಸ್. ಮೂಸಬ್ಬ, ಪ್ರಾಂಶುಪಾಲರು, ಡಾ. ಪ್ರಕಾಶ್ ಆರ್.ಎಮ್. ಸಲ್ಡಾನ್ಹ, ಉಪಪ್ರಾಂಶುಪಾಲರು, ಡಾ.ಅಭಯ್ ನಿರ್ಗುಡೆ, ಯೆನಪೋಯ ವೈದ್ಯಕೀಯ ಮಹಾವಿದ್ಯಾಲಯದ ಮೆಡಿಸಿನ್ ವಿಭಾಗದ ಡೀನ್, ಡಾ.ಸಹನಾ ಕೆ.ಎಸ್., ಪ್ರಾದ್ಯಾಪಕಿ ಮತ್ತು ಮುಖ್ಯಸ್ಥರು. ಪೀಡಿಯಾಟ್ರಿಕ್ಸ್ ವಿಭಾಗ, ಡಾ. ಅನಿತಾ ಎಸ್. ಪ್ರಭು, ಪ್ರಾಧ್ಯಾಪಕರು, ಮಕ್ಕಳ ವಿಭಾಗ, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಹಾಯವಾಣಿಯ ಬಗ್ಗೆ ಡಾ. ಸಹನಾ ಕೆ.ಎಸ್. ಇವರು ಮಾತನಾಡಿ ಪೋಷಕರು ಲಸಿಕೆಗೆ ಸಂಬಂದ ಪಟ್ಟ ಹಾಗೆ ಯಾವುದೇ ಸಂದೇಹಗಳಿದ್ದರೆ ದೂರವಾಣಿಯ ಮೂಲಕ ಕರೆ ಮಾಡಿ ವೈದ್ಯರನ್ನು ಸಂಪರ್ಕಿಸಿ ತಮ್ಮ ಸಂದೇಹಗಳನ್ನು ಚರ್ಚಿಸಬಹುದು. ಇದರಿಂದ ಮಕ್ಕಳಿಗೆ ಅತ್ಯಗತ್ಯವಾದ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ನೀಡಲಿಕ್ಕೆ ಅನುಕೂಲವಾಗುತ್ತದೆ. ಪೋಷಕರು ತಮ್ಮ ಮಗುವಿಗೆ ಸಮಯಕ್ಕೆ ಅನುಗುಣವಾಗಿ ಯಾವುದಾದರೂ ಲಸಿಕೆಗಳನ್ನು ಕೊಡಿಸಲು ಮರೆತು ಹೋದಲ್ಲಿ / ತಪ್ಪಿ ಹೋದಲ್ಲಿ ಅಥವಾ ಹೊಸ ಲಸಿಕೆಗಳ / ಐಛಿಕ ಲಸಿಕೆಗಳ ಬಗ್ಗೆ ಸಂದೇಹವಿದ್ದಲ್ಲಿ ಮಕ್ಕಳ ತಜ್ಞರ ಜೊತೆ ಕರೆ ಮಾಡಿ ನಿವಾರಿಸಿಕೊಳ್ಳಬಹುದು.

Advertisement

ಬೇರೆ ದೇಶಗಳಿಗೆ ಹೋಗುವುದಾದರೆ ಅಥವಾ ಬೇರೆ ದೇಶದಿಂದ ಇಲ್ಲಿಗೆ ಬಂದು ನೆಲೆಸುವುದಾದರೆ ಮಕ್ಕಳ ಲಸಿಕೆಯ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಬಹುದು. ಆದನೆಲ್ಲಾ ಕರೆಮಾಡಿ ವಿಚಾರಿಸಿ ಸರಿಯಾದ ರೀತಿಯಲ್ಲಿ ಲಸಿಕೆಗಳನ್ನು ಹಾಕಿಸಲು ಈ ಸಹಾಯವಾಣಿಯನ್ನು ಉಪಯೋಗಿಸಬಹುದು. ಇಷ್ಟೆ ಅಲ್ಲದೆ ನಾಯಿ ಅಥವಾ ಬೇರೆ ಪ್ರಾಣಿ ಕಚ್ಚಿದಾಗ ಯಾವ ಲಸಿಕೆ ನೀಡಬಹುದು ಎಂಬುದನ್ನು ಕೂಡಲೇ ಕರೆಮಾಡಿ ತಿಳಿದುಕೊಳ್ಳಬಹುದು. ಇದಲ್ಲದೆ ಕಬ್ಬಿಣದ ಯಾವುದಾದರು ವಸ್ತು ತಗುಲಿದಾಗ ಪೆÇೀಷಕರಲ್ಲಿ ಬಹಳ ಸಲ ಟಿಟಿ ಚುಚ್ಚುಮದ್ದಿನ ಬಗ್ಗೆ ಗೊಂದಲ ಮೂಡುತ್ತದೆ. ಆದನ್ನು ಕೂಡ ದೂರವಾಣಿ ಕರೆ ಮಾಡಿ ಕೇಳಿಕೊಳ್ಳಬಹುದು. ಆದಲ್ಲದೆ ಲಸಿಕೆಯ ಬಗ್ಗೆ ಹಾಗೂ ಲಸಿಕೆಯಿಂದ ಉಂಟಾಗುವ ಅಡ್ಡ ಪರಿಣಾಮದ ಬಗ್ಗೆ ಯಾವುದೇ ರೀತಿಯ ಸಣ್ಣ ಪುಟ್ಟ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ಕೊಟ್ಟರು.

ಯೆನೆಪೋಯ ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಈ ಸಹಾಯವಾಣಿಯ ಮೂಲ ಉದ್ದೇಶ ಮಕ್ಕಳ ಲಸಿಕೆಯ ಬಗ್ಗೆ ಪೆÇೀಷಕರ ಸಂದೇಹಗಳನ್ನು ನಿವಾರಿಸುವುದು ಮತ್ತು ಎಲ್ಲಾ ಮಕ್ಕಳು ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ಹಾಕಿಸಿಕೊಳ್ಳಲು ಪೆÇ್ರೀತ್ಸಾಹಿಸಿ ಕಾಯಿಲೆಯಿಂದ ರಕ್ಷಣೆ ಪಡೆಯುವುದು ಎಂದು ವಿವರಿಸಿದರು.

ಈ ಸಹಾಯವಾಣಿಯು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಕಾರ್ಯನಿರತವಾಗಿರುತ್ತದೆ. ಯೇನೆಪೆÇೀಯ ಮೆಡಿಕಲ್ ಕಾಲೇಜಿನ ಮಕ್ಕಳ ತಜ್ಞರು ಈ ಕರೆಗಳನ್ನು ಸ್ವೀಕರಿಸಿ ಪೆÇೀಷಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಸಹಾಯವಾಣಿ ಸಂಖ್ಯೆ 8904181943

ಯೇನೆಪೆÇೀಯ ಮಹಾವಿದ್ಯಾಲಯದ 25 ವರ್ಷಗಳ ಆಚರಣೆಯ ಅಂಗವಾಗಿ ಮಕ್ಕಳ ವಿಭಾಗವು ಎಲ್ಲಾ ಮಕ್ಕಳಿಗೆ ಲಸಿಕೆಯನ್ನು ಉತ್ತೇಜಿಸಲು ಮತ್ತು ಅವರನ್ನು ರೋಗಗಳಿಂದ ರಕ್ಷಿಸಲು ಈ ಕ್ರಮವನ್ನು ಕೈಗೊಂಡಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

Advertisement
Tags :
CHILDRENScollegedentalINAUGRATIONLatestNewsmangaluruNewsKarnatakapulsepolioYENAPOYA
Advertisement
Next Article