For the best experience, open
https://m.newskannada.com
on your mobile browser.
Advertisement

ಆಸ್ಟ್ರೇಲಿಯಾದ ಕಸದ ಬುಟ್ಟಿಯಲ್ಲಿ ಭಾರತದ ಶ್ವೇತಾ ಮದಘನಿ ಶವ ಪತ್ತೆ !

ಗಂಡ, ಹೆಂಡೆತಿ, ಮಗು.. ಒಂದು ಸುಂದರ ಕುಟುಂಬ ಜೊತೆ ಹೈದಾರಬಾದಿನ ಚೈತನ್ಯ ಶ್ವೇತಾ ಮದಘನಿ ಹಲವು ವರ್ಷಗಳಿಂದ ಗಂಡನ ಜೊತೆ ಆಸ್ಟ್ರೇಲಿಯಾದಲ್ಲಿ ನೆಲಿಸಿದ್ರು. ಆದ್ರೆ ಏಕಾಏಕಿ ಶ್ವೇತಾಳ ಕೊಲೆಯಾಗಿದೆ.
12:21 PM Mar 11, 2024 IST | Ashitha S
ಆಸ್ಟ್ರೇಲಿಯಾದ ಕಸದ ಬುಟ್ಟಿಯಲ್ಲಿ ಭಾರತದ ಶ್ವೇತಾ ಮದಘನಿ ಶವ ಪತ್ತೆ

ನವದೆಹಲಿ: ಗಂಡ, ಹೆಂಡೆತಿ, ಮಗು.. ಒಂದು ಸುಂದರ ಕುಟುಂಬ ಜೊತೆ ಹೈದಾರಬಾದಿನ ಚೈತನ್ಯ ಶ್ವೇತಾ ಮದಘನಿ ಹಲವು ವರ್ಷಗಳಿಂದ ಗಂಡನ ಜೊತೆ ಆಸ್ಟ್ರೇಲಿಯಾದಲ್ಲಿ ನೆಲಿಸಿದ್ರು. ಆದ್ರೆ ಏಕಾಏಕಿ ಶ್ವೇತಾಳ ಕೊಲೆಯಾಗಿದೆ.

Advertisement

ಶ್ವೇತಾ ಮೂಲತಃ ಆಂಧ್ರಪ್ರದೇಶದ ಹೈದ್ರಾಬಾದ್​ನ ಎ.ಎಸ್​.ರಾವ್​ ನಗರದ ನಿವಾಸಿ. ಮದುವೆಯಾದ ಬಳಿಕ ಗಂಡ ಅಶೋಕ್​ ಜೊತೆ ಆಸ್ಟ್ರೇಲಿಯಾದ ಪಾಯಿಂಟ್​ ಕುಕ್ಕ್​ ಎಂಬಲ್ಲಿ ನೆಲೆಸಿದ್ರು. ಇವರಿಬ್ಬರ ಸಂಸಾರದ ಸಾಕ್ಷಿಯಾಗಿ ಒಂದು ಮುದ್ದಾದ ಗಂಡು ಮಗು ಇದೆ. ವಿಧಿಯಾಟವೋ ಏನೋ ಶ್ವೇತಾ ಬದುಕಿನ ಪುಟವೇ ಅಂತ್ಯವಾಗಿದೆ.

ಆಸ್ಟ್ರೇಲಿಯಾದಲ್ಲಿ ಪಾಯಿಂಟ್​ ಕುಕ್ಕ್​ ಎಂಬ ಪ್ರದೇಶದಲ್ಲಿದ್ದ ಕಸದ ಬುಟ್ಟಿಯಲ್ಲಿ ಶ್ವೇತಾಳ ಮೃತದೇಹ ಪತ್ತೆಯಾಗಿದೆ.. ಇದೀಗ ಅಲ್ಲಿನ ಪೊಲೀಸರು ಆಕೆಯ ಮೃತದೇಹವನ್ನ ಪತ್ತೆ ಹಚ್ಚಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಶ್ವೇತಾಳ ಗಂಡ ಅಶೋಕನೇ ಕೊಲೆ ಮಾಡಿರಬಹುದು ಎನ್ನಲಾಗ್ತಿದೆ.. ಆತ ಪತ್ನಿಯನ್ನ ಮನೆಯಲ್ಲಿ ಕೊಲೆ ಮಾಡಿ, ಕಸದ ಬುಟ್ಟಿಯಲ್ಲಿ ಹಾಕಿ, ಬಳಿಕ ಯಾರಿಗೂ ಅನುಮಾನ ಬರದ ರೀತಿ ಮಗು ಜೊತೆ ಭಾರತಕ್ಕೆ ಓಡಿ ಬಂದು ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗ್ತಿದೆ. ಅತ್ತ, ಮಗಳ ಸಾವಿನ ವಿಷಯ ತಿಳಿದು ಶ್ವೇತಾ ಕುಟುಂಬಸ್ಥರು ಆಘಾತಕ್ಕೀಡಾಗಿದ್ದಾರೆ.. ಅದಲ್ಲದೇ, ಗಂಡ ಅಶೋಕನ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.

Advertisement

Advertisement
Tags :
Advertisement