ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಾಹನ ದಟ್ಟಣೆ ರಸ್ತೆಯಲ್ಲಿ ಯುವತಿಯ ನೃತ್ಯ ; ವಿಡಿಯೋ ವೈರಲ್

 ಟ್ರಾಫಿಕ್ ಸಿಗ್ನಲ್ ಬಳಿ ವಾಹನ ಸ್ಥಗಿತದ ಸಮಯದಲ್ಲಿ ರಸ್ತೆಯ ಮಧ್ಯದಲ್ಲಿ ಹುಡುಗಿಯೊಬ್ಬಳು ನೃತ್ಯ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳ್ಲಿ ವೈರಲ್‌ ಆಗಿದೆ. 
07:50 AM Dec 26, 2023 IST | Ramya Bolantoor

 ಟ್ರಾಫಿಕ್ ಸಿಗ್ನಲ್ ಬಳಿ ವಾಹನ ಸ್ಥಗಿತದ ಸಮಯದಲ್ಲಿ ರಸ್ತೆಯ ಮಧ್ಯದಲ್ಲಿ ಹುಡುಗಿಯೊಬ್ಬಳು ನೃತ್ಯ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳ್ಲಿ ವೈರಲ್‌ ಆಗಿದೆ.    ಈ ವೀಡಿಯೊ  ನೋಡೊ ಕೆಲವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಸುರಕ್ಷತೆಯ ಬಗ್ಗೆ ಯುವತಿ ತೋರಿರುವ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ.

Advertisement

ರಾಜಾ ಬಾಬು ಎಂಬುವವರು ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಯುವತಿ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ. ದ್ವಿಚಕ್ರ ವಾಹನಗಳು ಮತ್ತು ಆಟೋ ರಿಕ್ಷಾಗಳು ಸಾಗುತ್ತಿರುವ ರಸ್ತೆಯಲ್ಲಿ ತನ್ನ ಬ್ಯಾಗ್ ಎಸೆದು ರಸ್ತೆಯ ಮೇಲೆ ನೃತ್ಯ  ಮಾಡಿದ್ದಾಳೆ.

ಟ್ರಾಫಿಕ್ ನಿಲುಗಡೆ ಸಮಯದಲ್ಲಿ ವಾಹನಗಳು ನಿಂತಂತೆ ಯುವತಿ ನೃತ್ಯವನ್ನು ಮುಂದುವರೆಸುತ್ತಾಳೆ. ವೀಡಿಯೊ ಚಿತ್ರೀಕರಣಗೊಂಡ ಸ್ಥಳ ಇನ್ನೂ ತಿಳಿದಿಲ್ಲ. ಆದರೆ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

Advertisement

ಹಲವರು  ಇದು ಹುಚ್ಚುತನ, ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ತೊಂದರೆ ಮಾಡುವ ಕೃತ್ಯ, ಸಂಚಾರದ ಅಡಚಣೆಗೆ ದಂಡ ವಿಧಿಸಲು ಕಾನೂನು ಇರಬೇಕು  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Tags :
LatestNewsNewsKannadaVideoViral
Advertisement
Next Article