For the best experience, open
https://m.newskannada.com
on your mobile browser.
Advertisement

ಯುವ ಸಂಸದೆ ರೌದ್ರವತಾರಕ್ಕೆ ವಿಶ್ವವೇ ಮೆಚ್ಚುಗೆ: ಸಂಸತ್ತಿನ ಭಾಷಣ ವೈರಲ್!

ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಬಹುತೇಕ ಕಡೆ ಯುವ ಸಮೂಹ ರಾಜಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ಇದೀಗ ನ್ಯೂಜಿಲೆಂಡ್ ಸಂಸತ್ತಿನ ಅತೀ ಕಿರಿಯ ಸಂಸದೆ ಹನ್ನಾ ಪೂರ್ವ ಮೈಪಿ ಕ್ಲಾರ್ಕ್ ಭಾರಿ ಜನಪ್ರಿಯವಾಗಿದ್ದಾರೆ.
04:42 PM Jan 05, 2024 IST | Ashitha S
ಯುವ ಸಂಸದೆ ರೌದ್ರವತಾರಕ್ಕೆ ವಿಶ್ವವೇ ಮೆಚ್ಚುಗೆ  ಸಂಸತ್ತಿನ ಭಾಷಣ ವೈರಲ್

ವೆಲ್ಲಿಂಗ್ಟನ್: ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಬಹುತೇಕ ಕಡೆ ಯುವ ಸಮೂಹ ರಾಜಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ಇದೀಗ ನ್ಯೂಜಿಲೆಂಡ್ ಸಂಸತ್ತಿನ ಅತೀ ಕಿರಿಯ ಸಂಸದೆ ಹನ್ನಾ ಪೂರ್ವ ಮೈಪಿ ಕ್ಲಾರ್ಕ್ ಭಾರಿ ಜನಪ್ರಿಯವಾಗಿದ್ದಾರೆ.

Advertisement

ಸಂಸತ್ತಿನಲ್ಲಿ ಮಾಡಿದ ಭಾಷಣ ಹಾಗೂ ಸ್ಥಳೀಯ ಭಾಷೆಯಲ್ಲಿ ಹಾಡಿದ ಅವೇಷಭರಿತ ಹಾಡಿನಿಂದ ಹನ್ನಾ ಇದೀಗ ವಿಶ್ವಾದ್ಯಂತ ಗುರುತಿಸಲ್ಪಟ್ಟಿದ್ದಾರೆ.

ಸಂಸದೆ ಹನ್ನಾ ಪೂರ್ವ ಮೈಪಿ ಕ್ಲಾರ್ಕ್ ತಮ್ಮ ತಮರಿಕಿ ಮಾವೋರಿ ಭಾಷೆಯಲ್ಲಿ ಮಾಡಿದ ಭಾಷಣ ಹಾಗೂ ತಮ್ಮ ಸಂಸ್ಕೃತಿ ಬಿಂಬಿಸುವ ಹಾಡನ್ನು ಸಂಸತ್ತಿನಲ್ಲಿ ಹಾಡಿದ್ದಾರೆ. ಇದೇ ವೇಳೆ ಸಂಸತ್ತಿನಲ್ಲಿ ಈಕೆಯ ಭಾಷಣ ಆಲಿಸಲು ಆಗಮಿಸಿದ ಪೋಷಕರು ಹಾಗೂ ಇದೇ ಸಮುದಾಯದ ಹಲವರು ಸಂಸದೆ ಹನ್ನಾ ಜೊತೆ ಧನಿಗೂಡಿಸಿದ್ದಾರೆ. ಸಂಸದೆ ಜೊತೆ ತಮ್ಮ ಸಂಸ್ಕೃತಿ ಹಾಡನ್ನು ಹಾಡುವ ಮೂಲಕ ತಮ್ಮ ಭಾಷೆ ಹಾಗೂ ಸಂಸ್ಕೃತಿ ಉಳಿವಿನ ಕುರಿತು ಜಾಗೃತಿ ಮೂಡಿಸಿದ್ದಾರೆ.

Advertisement

ನ್ಯೂಜಿಲೆಂಡ್ ಸಂಸತ್ತಿನ 170 ವರ್ಷದ ಇತಿಹಾಸದಲ್ಲಿ ಹನ್ನಾ ಪೂರ್ವ ಮೈಪಿ ಕ್ಲಾರ್ಕ್ ಅತ್ಯಂತ ಕಿರಿಯ ಸಂಸದೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 21 ವರ್ಷದ ಹನ್ನಾ, 2023ರ ಅಕ್ಟೋಬರ್ ತಿಂಗಳಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಹೌರಾಕಿ-ವೈಕಾಟೊ ಕ್ಷೇತ್ರದಿಂದ ಹನ್ನಾ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

2008ರಿಂದ ಇಲ್ಲೀವರೆಗೆ ಈ ಕ್ಷೇತ್ರದಿಂದ ಹಿರಿಯ ನಾಯಕರು, ಜನಪ್ರಿಯ ನಾಯಕರು ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದರು. ಇದೇ ಮೊದಲ ಬಾರಿಗೆ ಅತೀ ಕಿರಿಯ ನಾಯಕಿ ಹನ್ನಾ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದಾರೆ.

Advertisement
Tags :
Advertisement