ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಾಲಿವುಡ್‍ನ ಬಿಗ್‍ಬಾಸ್‍ಗೆ ಭಾಲ್ಕಿ ಯುವಕ ಆಯ್ಕೆ

ಬಾಲಿವುಡ್‍ನ ಬಿಗ್ ಬಾಸ್‍ಗೆ ಜಿಲ್ಲೆಯ ಯುವಕ ಆಯ್ಕೆಯಾಗಿ ಗಮನ ಸೆಳೆದಿದ್ದಾನೆ. ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ ನಿವಾಸಿ ಅರುಣ ಬಾಬುರಾವ ಮಶೆಟ್ಟಿ ಬಿಗ್ ಬಾಸ್‍ಗೆ ಆಯ್ಕೆಯಾಗಿ, ಇದೀಗ ಫೈನಲ್ ಹಂತದಲ್ಲಿದ್ದಾನೆ.
07:24 PM Jan 27, 2024 IST | Ashika S

ಬೀದರ್: ಬಾಲಿವುಡ್‍ನ ಬಿಗ್ ಬಾಸ್‍ಗೆ ಜಿಲ್ಲೆಯ ಯುವಕ ಆಯ್ಕೆಯಾಗಿ ಗಮನ ಸೆಳೆದಿದ್ದಾನೆ. ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ ನಿವಾಸಿ ಅರುಣ ಬಾಬುರಾವ ಮಶೆಟ್ಟಿ ಬಿಗ್ ಬಾಸ್‍ಗೆ ಆಯ್ಕೆಯಾಗಿ, ಇದೀಗ ಫೈನಲ್ ಹಂತದಲ್ಲಿದ್ದಾನೆ.

Advertisement

ಮೂಲತಃ ಯೂಟ್ಯೂಬರ್ ಆಗಿರುವ ಅರುಣ ಬಿಗ್‍ಬಾಸ್‍ಗೆ ಆಯ್ಕೆಯಾಗಿ ವಿವಿಧ ಹಂತದಲ್ಲಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಟಾಪ್ ಐದರಲ್ಲಿ ಅರುಣ ಇದ್ದಾರೆ. ಚಿನ್ನದ ವ್ಯಾಪಾರಕ್ಕಾಗಿ ಹೈದರಾಬಾದ್‍ಗೆ ತೆರಳಿದ್ದ ಅರುಣ ಕುಟುಂಬ ಇದೀಗ ಅಲ್ಲಿಯೇ ನೆಲೆಸಿದೆ.

ವಿಶೇಷ ಪೂಜೆ: ಬಿಗ್‍ಬಾಸ್‍ನ ಅಂತಿಮ ಹಂತದಲ್ಲಿರುವ ಅರುಣ ಮಾಶೆಟ್ಟಿ ವಿಜೇತರಾಗಬೇಕು ಎಂದು ಪ್ರಾರ್ಥಿಸಿ ಬೆಂಬಲಿಗರು ನಗರದ ಪಾಪನಾಶ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿಸಿದರು. ಮಲ್ಲಿಕನಾಥ ಮಡಗೆ ನೇತೃತ್ವದಲ್ಲಿ ಪಾಪನಾಶ ಲಿಂಗಕ್ಕೆ ಪೂಜೆ ನೆರವೇರಿಸಲಾಯಿತು.

Advertisement

ಜಿಲ್ಲೆಯವರಾದ ಅರುಣ ಮಾಶೆಟ್ಟಿ ಬಿಗ್‍ಬಾಸ್‍ನ ಎಲ್ಲ ಹಂತಗಳನ್ನು ಉತ್ತಮವಾಗಿ ಆಡಿ ಇದೀಗ ಅಂತಿಮ ಹಂತದಲ್ಲಿದ್ದಾರೆ. ಇವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವ ಮೂಲಕ ಕನ್ನಡಿಗನಿಗೆ ಬೆಂಬಲಿಸಬೇಕು ಎಂದು ಮಡಗೆ ಕೋರಿದ್ದಾರೆ. ನಾಗರಾಜ ಜೋಗಿ, ಪಿಲೀಪ್, ಬ್ಲ್ಯಾಂಡಿ, ರಾಹುಲ್, ಅಜಯ, ಸೋನು, ಅಭಿನವ್, ಆಕಾಶ, ಸಚಿನ್, ವಿಲ್ಸನ್ ಇತರರಿದ್ದರು.

Advertisement
Tags :
LatetsNewsNewsKannadaಫೈನಲ್ ಹಂತಬಾಲಿವುಡ್ಬಿಗ್ ಬಾಸ್ಯುವಕ
Advertisement
Next Article