ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹಿಂದುಗಳ ಮೇಲೆ ನಿಮ್ಮದೂ ನೈತಿಕ ಗೂಂಡಾಗಿರಿಯ : ಕಾಂಗ್ರೆಸ್ ಗೆ ಡಾ.ಭರತ್ ಶೆಟ್ಟಿ ವೈ ಪ್ರಶ್ನೆ

ಕಾಂಗ್ರೆಸ್ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಕೇಸು ಹಾಕಿಸುತ್ತಿದೆ.
05:23 PM Nov 29, 2023 IST | Ramya Bolantoor

ಕಾವೂರು: ಕಾಂಗ್ರೆಸ್ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಕೇಸು ಹಾಕಿಸುತ್ತಿದೆ. ಹಿಂದೂ ಯುವತಿಯ ಜತೆಗಿದ್ದವನನ್ನು ಕೇವಲ ವಿಚಾರಿಸಿದ ಮಾತ್ರಕ್ಕೆ ಕೇಸು ಹಾಕುದಾದ್ರೆ,ನಿಮ್ಮದೂ ಹಿಂದೂಗಳ ಮೇಲೆ ನೈತಿಕ ಪೊಲೀಸ್ ಗಿರಿಯೆ ಎಂದು ಕಾಂಗ್ರೆಸ್ ಆಡಳಿತವನ್ನು ಡಾ.ಭರತ್ ಶೆಟ್ಟಿ ವೈ ಪ್ರಶ್ನಿಸಿದ್ದಾರೆ.

Advertisement

ಮೈ ಕೈ ಮುಟ್ಟದೆ ಪ್ರಶ್ನಿಸಿದರೂ ಕೇಸು, ಹೊಡೆದರೂ ಕೇಸು ಹಾಕುದಾದ್ರೆ‌ ಹಿಂದೂ ಕಾರ್ಯಕರ್ತರಿಗೆ ನೀವೇ ಪರೋಕ್ಷವಾಗಿ ಪ್ರೇರಣೆ ನೀಡುತ್ತಿಧ್ದಿರಿ.

ಮಂಗಳೂರಿನ ಮಾರ್ಗನ್ಸ್ ಗೇಟ್ ಬಳಿ ಹಿಂದೂ ಯುವತಿಯನ್ನು ಅನ್ಯ ಮತೀಯ ಯುವಕ ಪುಸಲಾಯಿಸಿ ಕರೆದೊಯ್ದಾಗ ಯಾವುದೇ ಹಲ್ಲೆ ಅಥವಾ ನಿಂದನೆ ಮಾಡದೆ ವಿಚಾರಿಸಿದ್ದೇ ಮಹಾ ಅಪರಾಧ ಎಂಬಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಅವರ ಮೇಲೆ ಕೇಸು ದಾಖಲಿಸಿ ಯುವಕರ ಭವಿಷ್ಯ ಮುಸುಕಾಗಿಸುವ ಹುನ್ನಾರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ.

Advertisement

ಹಿಂದೂ ಸಮಾಜದ ಒಳಿತಿಗಾಗಿ,ನಮ್ಮ ಸಹೋದರಿಯರ ಮಾನ,ಪ್ರಾಣ ರಕ್ಷಣೆಗೆ ಮುಂದೆಯೂ ನಮ್ಮ ಪಕ್ಷ ,ನಮ್ಮ ಹಿಂದೂ ಸಂಘಟನೆಯ ಕಾರ್ಯಕರ್ತರು ಇಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ. ಗಡಿಪಾರು,ರೌಡಿ ಶೀಟರ್ ,ಅನೈತಿಕ ಪೊಲೀಸ್ ಗಿರಿಯಂತಹ ಸೆಕ್ಷನ್ ವಿಧಿಸಿ ಬೆದರಿಕೆಯ ಕೇಸ್ ಹಾಕಿದರೆ ಹೆದರಿ ಮೂಲೆ ಸೇರುತ್ತಾರೆ ಎಂಬುದು ನಿಮ್ಮ ಭ್ರಮೆ .ಅನ್ಯ ಮತೀಯರ ದುಷ್ಟ ಸಂಚನ್ನು ನಮ್ಮ ಕಾರ್ಯಕರ್ತರು ಮುಂದೆಯೂ ಬಯಲಿಗೆಳೆಯುತ್ತಾರೆ.ನಿಮ್ಮಿಂದ ಆಗುವುದಾದರೆ ತಡೆಯಿರಿ ಶಾಸಕರಾದ ಡಾ.ಭರತ್ ಶೆಟ್ಟಿ ಸವಾಲು ಹಾಕಿದ್ದಾರೆ.

Advertisement
Tags :
BJPCongressLatestNewsNewsKannadaPOLICEಭರತ್ ಶೆಟ್ಟಿಮಂಗಳೂರು
Advertisement
Next Article