For the best experience, open
https://m.newskannada.com
on your mobile browser.
Advertisement

ಚಾರಣಕ್ಕೆ ತೆರಳಿದ್ದ ಯುವಕ ನಾಲ್ಕು ದಿನಗಳ ಬಳಿಕ ಶವವಾಗಿ ಪತ್ತೆ

ರಾಮನಗರ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದುಹೋಗಿದೆ. ಸ್ನೇಹಿತರ ಜೊತೆ ಚಾರಣಕ್ಕೆ ಹೋಗಿದ್ದಾಗ ದಾರಿ ತಪ್ಪಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಗಗನ್ ದೀಪಕ್ ಸಿಂಗ್ (30)ಮೃತ ದುರ್ದೈವಿ.
06:01 PM Dec 28, 2023 IST | Gayathri SG
ಚಾರಣಕ್ಕೆ ತೆರಳಿದ್ದ ಯುವಕ ನಾಲ್ಕು ದಿನಗಳ ಬಳಿಕ ಶವವಾಗಿ ಪತ್ತೆ

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದುಹೋಗಿದೆ. ಸ್ನೇಹಿತರ ಜೊತೆ ಚಾರಣಕ್ಕೆ ಹೋಗಿದ್ದಾಗ ದಾರಿ ತಪ್ಪಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಗಗನ್ ದೀಪಕ್ ಸಿಂಗ್ (30)ಮೃತ ದುರ್ದೈವಿ.

Advertisement

ಉತ್ತರಪ್ರದೇಶ ಮೂಲದ ಮೃತ ಯುವಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಲೆಸಿದ್ದ. ಕಳೆದ ಶನಿವಾರ ಸ್ನೇಹಿತನ ಜೊತೆ ರಾಮನಗರದ ಸಾವನದುರ್ಗ ಚಾರಣಕ್ಕೆ ತೆರಳಿ ಬಳಿಕ ನಾಪತ್ತೆಯಾಗಿದ್ದ. ಇದೀಗ ಸಾವನದುರ್ಗ ಬೆಟ್ಟದ ಎಮ್ಮೆಬೀಡು ಪ್ರದೇಶದಲ್ಲಿ ಗಗನ್ ದೀಪಕ್ ಸಿಂಗ್ ಶವ ಪತ್ತೆಯಾಗಿದೆ.

ಕಳೆದ ಶನಿವಾರ ಗೆಳೆಯರೊಂದಿಗೆ ರಾಮನಗರದ ಸಾವನದುರ್ಗ ಏಕಶಿಲಾ ಬೆಟ್ಟಕ್ಕೆ ಚಾರಣ ಬಂದಿದ್ದ. ಸ್ನೇಹಿತನ ಜೊತೆ ಚಾರಣಕ್ಕೆ ಬಂದ ವೇಳೆ ದಾರಿ ತಪ್ಪಿ ಕಾಣೆಯಾಗಿದ್ದ. ಬಳಿಕ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲಿಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ನಾಲ್ಕು ದಿನಗಳಿಂದ ಯುವಕನಿಗಾಗಿ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಬಳಿಕ ಥರ್ಮಲ್ ಡ್ರೋನ್, ಶ್ವಾನದಳ ಸೇರಿ ಎಸ್‌ಡಿಆರ್‌ಎಫ್‌ ತಂಡದಿಂದ ಶೋಧಕಾರ್ಯ ಮುಂದುವರಿಸಿದ್ದರು. ಸತತ 100 ಗಂಟೆಗಳ ಕಾರ್ಯಾಚರಣೆ ಬಳಿಕ ಯುವಕನ ಶವ ಪತ್ತೆಯಾಗಿದೆ.

Advertisement

Advertisement
Tags :
Advertisement