For the best experience, open
https://m.newskannada.com
on your mobile browser.
Advertisement

ಡ್ಯಾನ್ಸ್ ಮಾಡುವ ವೇಳೆ ದೇಹ ತಾಗಿತು ಎಂಬ ಕಾರಣಕ್ಕೆ ಯುವಕನ ಕೊಲೆ

ಶಿವರಾತ್ರಿ  ಹಬ್ಬದ ಸಂಭ್ರಮದಲ್ಲಿ ಡ್ಯಾನ್ಸ್ ಮಾಡುವ ವೇಳೆ ದೇಹ ತಾಗಿತು ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಡಿದ ಘಟನೆ  ಗಿರಿನಗರದ ದೇವಸ್ಥಾನದ ಕಾರ್ಯಕ್ರಮದಲ್ಲಿ ನಡೆದಿದೆ.
04:34 PM Mar 09, 2024 IST | Ashika S
ಡ್ಯಾನ್ಸ್ ಮಾಡುವ ವೇಳೆ ದೇಹ ತಾಗಿತು ಎಂಬ ಕಾರಣಕ್ಕೆ ಯುವಕನ ಕೊಲೆ

ಬೆಂಗಳೂರು: ಶಿವರಾತ್ರಿ  ಹಬ್ಬದ ಸಂಭ್ರಮದಲ್ಲಿ ಡ್ಯಾನ್ಸ್ ಮಾಡುವ ವೇಳೆ ದೇಹ ತಾಗಿತು ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಡಿದ ಘಟನೆ  ಗಿರಿನಗರದ ದೇವಸ್ಥಾನದ ಕಾರ್ಯಕ್ರಮದಲ್ಲಿ ನಡೆದಿದೆ.

Advertisement

ಯೋಗೇಶ್ (23) ಕೊಲೆಯಾದ ಯುವಕನಾಗಿದ್ದಾನೆ.

ಬೈಕ್ ಸರ್ವೀಸ್ ಸೆಂಟರ್​ನಲ್ಲಿ ಯೋಗೇಶ್ ವಾಷಿಂಗ್ ಕೆಲಸ ಮಾಡುತ್ತಿದ್ದ. ನಿನ್ನೆ ಗಿರಿನಗರದ ದೇವಸ್ಥಾನದ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ದೇಹ ತಾಗಿತೆಂಬ ವಿಚಾರವಾಗಿ ಗಲಾಟೆ ನಡೆದಿದೆ.

Advertisement

ಬಳಿಕ ಡ್ಯಾನ್ಸ್ ಮುಗಿಸಿ ಶ್ರೀನಗರದ ತನ್ನ ಮನೆಗೆ ಬೈಕ್​ ಮೂಲಕ ಯೋಗೇಶ್ ಹೋಗುವಾಗ ನಾಲ್ವರು ಯುವಕರು ಹಿಂಬಾಲಿಸಿದ್ದಾರೆ. ಬಳಿಕ ದಾಳಿ ನಡೆಸಿದ ನಾಲ್ವರು, ಚಾಕುವಿನಿಂದ ಯೋಗೀಶ್​ಗೆ ಚುಚ್ಚಿದ್ದಾರೆ. ಹಂತಕರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯೋಗೇಶ್ ಮನೆಯೊಂದರ ಕಾಂಪೌಂಡ್ ಹಾರಿದ್ದ. ಅಗ ಕಾಂಪೌಂಡ್​ಗೆ ಹಾಕಿದ್ದ ಗ್ಲಾಸ್ ಚುಚ್ಚಿರಬಹುದು ಎಂದು ಕೆಲವರು ಭಾವಿಸಿದ್ದರು. ಆದರೆ ಪೊಲೀಸರು ತನಿಖೆ ಮಾಡಿದಾಗ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಠಾಣಾ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement
Tags :
Advertisement