For the best experience, open
https://m.newskannada.com
on your mobile browser.
Advertisement

ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಬೇಗ ಕೊಡದ ಯುವಕನಿಗೆ ಸ್ನೇಹಿತರಿಂದ ಚೂರಿ ಇರಿತ

ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಬೇಗ ಕೊಡದ ಯುವಕನಿಗೆ ಸ್ನೇಹಿತರೇ ಚಾಕು ಇರಿದ ಘಟನೆ ಬೆಂಗಳೂರು  ಹೊರವಲಯದ ಆನೇಕಲ್ ಬಳಿಯ ನಾರಾಯಣಪುರದಲ್ಲಿ ನಡೆದಿದೆ.
07:09 AM Feb 22, 2024 IST | Ashika S
ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಬೇಗ ಕೊಡದ ಯುವಕನಿಗೆ ಸ್ನೇಹಿತರಿಂದ ಚೂರಿ ಇರಿತ

ಆನೇಕಲ್:  ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಬೇಗ ಕೊಡದ ಯುವಕನಿಗೆ ಸ್ನೇಹಿತರೇ ಚಾಕು ಇರಿದ ಘಟನೆ ಬೆಂಗಳೂರು  ಹೊರವಲಯದ ಆನೇಕಲ್ ಬಳಿಯ ನಾರಾಯಣಪುರದಲ್ಲಿ ನಡೆದಿದೆ.

Advertisement

ನಾರಾಯಣಪುರ ನಿವಾಸಿ ಮುರುಗೇಶ್ (42) ಇರಿತಕ್ಕೊಳಗಾದ ವ್ಯಕ್ತಿ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ಊರಿನ ನಿವಾಸಿಗಳಾದ ಸತೀಶ್ ಮತ್ತು ನವೀನ್ ಎಂಬುವವರು ಚಾಕು ಇರಿದ ಆರೋಪಿಗಳಾಗಿದ್ದಾರೆ.

Advertisement

ನಾರಾಯಣಪುರ ಸಮೀಪದ ಗುಲ್ಲಣ್ಣ ಲೇವೇಟ್ ಬಡಾವಣೆಯೊಂದರಲ್ಲಿ ಆರೋಪಿಗಳು ರಾತ್ರಿ ವೇಳೆ ಎಣ್ಣೆ ಪಾರ್ಟಿ ನಡೆಸುತ್ತಿದ್ದರು. ರಾತ್ರಿ 12:30ರ ಸುಮಾರಿಗೆ ನೀರಿಗಾಗಿ ಮುರುಗೇಶ್ ಮನೆ ಬಾಗಿಲು ತಟ್ಟಿದ್ದಾರೆ. ಆದರೆ ನೀರು ಬೇಗ ಕೊಡಲಿಲ್ಲ ಎಂಬ ಕಾರಣಕ್ಕೆ ಆರೋಪಿಗಳು ಚಾಕುವಿನಿಂದ ತಲೆ, ಮುಖದ ಭಾಗಕ್ಕೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಗಾಯಾಳುವಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement