ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಾವನದುರ್ಗಕ್ಕೆ ಚಾರಣ ಬಂದಿದ್ದ ಯುವಕ ನಾಪತ್ತೆ

ಕ್ರಿಸ್‌ಮಸ್‌ ಸೇರಿದಂತೆ ಸಾಲು ಸಾಲು ರಜೆಯ ಕಾರಣಕ್ಕೆ ಬೆಂಗಳೂರಿನಿಂದ ರಾಜ್ಯದ ವಿವಿಧ ಟ್ರೆಕ್ಕಿಂಗ್‌ ತಾಣಗಳಿಗೆ ಚಾರಣ ಹೋಗುವ ಯುವಕರ ಸಂಖ್ಯೆ ಹೆಚ್ಚಿದೆ. ಅದೇ ರೀತಿ ಸ್ನೇಹಿತರ ಜೊತೆ ಚಾರಣಕ್ಕೆ ಬಂದಿದ್ದ ಉತ್ತರ ಪ್ರದೇಶ ಮೂಲದ ಯುವಕ ನಾಪತ್ತೆ ಆಗಿರುವ ಘಟನೆ ಮಾಗಡಿ ತಾಲೂಕು ಸಾವನದುರ್ಗದಲ್ಲಿ ನಡೆದಿದೆ.
09:43 PM Dec 25, 2023 IST | Ashitha S

ರಾಮನಗರ: ಕ್ರಿಸ್‌ಮಸ್‌ ಸೇರಿದಂತೆ ಸಾಲು ಸಾಲು ರಜೆಯ ಕಾರಣಕ್ಕೆ ಬೆಂಗಳೂರಿನಿಂದ ರಾಜ್ಯದ ವಿವಿಧ ಟ್ರೆಕ್ಕಿಂಗ್‌ ತಾಣಗಳಿಗೆ ಚಾರಣ ಹೋಗುವ ಯುವಕರ ಸಂಖ್ಯೆ ಹೆಚ್ಚಿದೆ. ಅದೇ ರೀತಿ ಸ್ನೇಹಿತರ ಜೊತೆ ಚಾರಣಕ್ಕೆ ಬಂದಿದ್ದ ಉತ್ತರ ಪ್ರದೇಶ ಮೂಲದ ಯುವಕ ನಾಪತ್ತೆ ಆಗಿರುವ ಘಟನೆ ಮಾಗಡಿ ತಾಲೂಕು ಸಾವನದುರ್ಗದಲ್ಲಿ ನಡೆದಿದೆ.

Advertisement

ಏಕಶಿಲಾ ಬೆಟ್ಟ ಸಾವನದುರ್ಗ ಚಾರಣಿಗರ ಪಾಲಿಗೆ ಸ್ವರ್ಗವಾಗಿದ್ದು, ಸಾಲು ಸಾಲು ರಜೆ ಇದ್ದ ಕಾರಣ ಭಾನುವಾರ ಸ್ನೇಹಿತನೊಂದಿಗೆ ಉತ್ತರ ಪ್ರದೇಶ ಮೂಲದ ಗಗನ್‌ದೀಪ್ ಸಿಂಗ್ (30) ಚಾರಣಕ್ಕೆ ಬಂದಿದ್ದಾರೆ. ಈ ವೇಳೆ ನಾಪತ್ತೆಯಾಗಿದ್ದು, ಗಗನ್ ಸ್ನೇಹಿತ ಬೆಟ್ಟದಿಂದ ಇಳಿದು ಬಂದು ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗೆ ನಾಪತ್ತೆ ಸಂಬಂಧ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಗಗನ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಭಾನುವಾರ ಮಧ್ಯಾಹ್ನದಿಂದಲೂ ನಾಪತ್ತೆ ಆಗಿರುವ ಗಗನ್‌ಗಾಗಿ ಹುಡುಕಾಟ ನಡೆದಿದ್ದು, ಈವರೆಗೂ ಸುಳಿವು ಪತ್ತೆ ಆಗಿಲ್ಲ.

Advertisement

Advertisement
Tags :
COVID 19indiaLatestNewsNewsKannadaನವದೆಹಲಿಪ್ರಧಾನಿ ನರೇಂದ್ರ ಮೋದಿಬೆಂಗಳೂರುಸಾವನದುರ್ಗ
Advertisement
Next Article