For the best experience, open
https://m.newskannada.com
on your mobile browser.
Advertisement

ರೀಲ್ಸ್‌ ಲೈಕ್‌ಗಾಗಿ 2 ವರ್ಷದ ಮಗಳನ್ನು ಕಾರಿನಲ್ಲಿ ಲಾಕ್ ಮಾಡಿದ ದಂಪತಿ

ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋಗಳನ್ನು ಮಾಡುವುದು ಮತ್ತು ಅವುಗಳನ್ನು ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರಸಿದ್ಧರಾಗುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿದೆ.
02:45 PM Jul 07, 2024 IST | Ashitha S
ರೀಲ್ಸ್‌ ಲೈಕ್‌ಗಾಗಿ 2 ವರ್ಷದ ಮಗಳನ್ನು ಕಾರಿನಲ್ಲಿ ಲಾಕ್ ಮಾಡಿದ ದಂಪತಿ

ಜಪಾನ್​​: ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋಗಳನ್ನು ಮಾಡುವುದು ಮತ್ತು ಅವುಗಳನ್ನು ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರಸಿದ್ಧರಾಗುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿದೆ.

Advertisement

ಕೆಲವರು ವೀಡಿಯೋ ಮಾಡುವ ಮೂಲಕ ತಮ್ಮ ಜೀವವನ್ನು ಮತ್ತು ಕುಟುಂಬವನ್ನು ಅಪಾಯಕ್ಕೆ ಸಿಲುಕಿಸುತ್ತಾರೆ.

ಜಪಾನಿನ ದಂಪತಿ ತಮ್ಮ ಎರಡು ವರ್ಷದ ಮಗಳನ್ನು ಬಿಸಿಲಿನ ಶಾಖದಲ್ಲಿ ಕಾರಿನಲ್ಲಿ ಕೂರಿಸಿ ಲಾಕ್ ಮಾಡಿದ್ದಾರೆ. ಬಾಲಕಿ ಅಳುತ್ತಾ ಕಿರುಚುತ್ತಲೇ ಇದ್ದಳು.. ಆದರೆ ಮಗುವನ್ನು ಕಾರಿನಿಂದ ಹೊರತೆಗೆಯುವ ಬದಲು ದಂಪತಿ ಮಗು ಅಳುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡುತ್ತಿದ್ದರು.

Advertisement

'ನನ್ನ 2 ವರ್ಷದ ಮಗಳು ಕಾರಿನಲ್ಲಿ ಲಾಕ್ ಆಗಿದ್ದಾಳೆ' ಎಂಬ ಶೀರ್ಷಿಕೆಯ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ತಂದೆ ತನ್ನ ಎರಡು ವರ್ಷದ ಮಗಳ ವಿಡಿಯೋವನ್ನು ರೆಕಾರ್ಡ್ ಮಾಡುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಸುಮಾರು 30 ನಿಮಿಷಗಳ ಕಾಲ ಬಾಲಕಿ ಅಳುತ್ತಿರುವುದನ್ನು ಆ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿ ನಂತರ ಸಹಾಯಕ್ಕಾಗಿ ಯಾರಿಗೋ ಕರೆ ಮಾಡಿದ್ದಾನೆ.

ನಂತರ ಲಾಕ್​​ ಓಪನ್​ ಮಾಡಿ ಕಾರಿನ ಬಾಗಿಲು ತೆರೆದು ಹುಡುಗಿಯನ್ನು ಹೊರಗೆ ಕರೆದೊಯ್ದನು. ತಂದೆ ಸಂತೋಷದಿಂದ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದರು, ಆದರೆ ಜನರು ಅವನನ್ನು ಟೀಕಿಸಲು ಪ್ರಾರಂಭಿಸಿದ ನಂತರ ಅವರು ವೀಡಿಯೊವನ್ನು ಅಳಿಸಿದ್ದಾರೆ. ಹಣ ಮಾಡುವುದಕ್ಕಾಗಿ ತಮ್ಮ ಮಕ್ಕಳ ಪ್ರಾಣವನ್ನೇ ಪಣಕ್ಕಿಡುವ ಜನ ಜಗತ್ತಿನಲ್ಲಿ ಸಾಕಷ್ಟು ಮಂದಿ ಇದ್ದಾರೆ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.

Advertisement
Tags :
Advertisement