ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಜ್​ಕುಮಾರ್ ಬರ್ತ್​ಡೇ ದಿನ ಮತ್ತೊಂದು ಸಿನಿಮಾ ಅನೌನ್ಸ್ ಮಾಡಲಿರುವ 'ಯುವ'

ಸಂತೋಷ್ ಆನಂದ್​ರಾಮ್ ನಿರ್ದೇಶನದಲ್ಲಿ ಮೂಡಿಬಂದ ‘ಯುವ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಯುವ ರಾಜ್​ಕುಮಾರ್ ಅವರಿಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿದೆ.
07:16 AM Apr 15, 2024 IST | Ashika S

ಬೆಂಗಳೂರು: ಸಂತೋಷ್ ಆನಂದ್​ರಾಮ್ ನಿರ್ದೇಶನದಲ್ಲಿ ಮೂಡಿಬಂದ ‘ಯುವ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಯುವ ರಾಜ್​ಕುಮಾರ್ ಅವರಿಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿದೆ.

Advertisement

ಈಗ ಯುವ ಎರಡನೇ ಸಿನಿಮಾ ಬಗ್ಗೆ ಅಪ್​ಡೇಟ್ ಸಿಕ್ಕಿದ್ದು, ರಾಜ್​ಕುಮಾರ್ ಜನ್ಮದಿನದಂದು ಅವರ ಹೊಸ ಸಿನಿಮಾ ಅನೌನ್ಸ್ ಆಗೋ ಸಾಧ್ಯತೆ ಇದೆಯಂತೆ.

‘ಯುವ’ ಸಿನಿಮಾ ತಂಡ ಇತ್ತೀಚೆಗೆ ಸಕ್ಸಸ್ ಮೀಟ್ ಆಚರಿಸಿಕೊಂಡಿದೆ. ಈ ವೇಳೆ ಅವರು ಮಾತಿಗೆ ಸಿಕ್ಕ ಯುವ, ‘ರಾಜ್​ಕುಮಾರ್ ಜನ್ಮದಿನದಂದು ನಿಮ್ಮ ಹೊಸ ಸಿನಿಮಾ ಅನೌನ್ಸ್ ಆಗಲಿದೆ ಅನ್ನೋ ಟಾಕ್ ಇದೆ. ಇದು ನಿಜವೇ’ ಎಂದು ಕೇಳಲಾಯಿತು. ಇದಕ್ಕೆ ಅವರು ನೇರವಾಗಿ ಉತ್ತರಿಸಿಲ್ಲ. ‘ಮಾತುಕತೆ ನಡೆಯುತ್ತಿದೆ. ಇನ್ನು ಉಳಿದಿರೋದು ಕೆಲವೇ ದಿನಗಳು, ನೋಡೋಣ’ ಎಂದರು ಯುವ ರಾಜ್​ಕುಮಾರ್.

Advertisement

ಪಿಆರ್​ಕೆ ಪ್ರೊಡಕ್ಷನ್ ಅಡಿಯಲ್ಲಿ ಕೆಲಸ ಮಾಡಬೇಕು ಎನ್ನುವ ಕನಸು ಪುನೀತ್ ಅವರದ್ದಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಯುವ ಅವರು ಹೋಂ ಬ್ಯಾನರ್​ನಲ್ಲಿ ನಟಿಸುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಹೌದು ಎಂದಿದ್ದಾರೆ ಅವರು. ‘ನಾನು ಪಿಆರ್​ಕೆ ಪ್ರೊಡಕ್ಷನ್ ಅಡಿಯಲ್ಲಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ. ವಿಶೇಷ ಎಂದರೆ ಈಗಾಗಲೇ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಯುವನಿಗಾಗಿ ಕಥೆ ಕೇಳುತ್ತಿದ್ದಾರೆ.

ರಾಜ್​ಕುಮಾರ್ ಅವರ  ಜನ್ಮದಿನದಂದೇ ಯುವ ಹೊಸ ಸಿನಿಮಾ ಅನೌನ್ಸ್ ಆಗಲಿದೆ ಅನ್ನೋದು ವಿಶೇಷ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Advertisement
Tags :
Dr. RajkumarfilmLatetsNewsNewsKarnatakayuvarajkumar
Advertisement
Next Article