For the best experience, open
https://m.newskannada.com
on your mobile browser.
Advertisement

ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ'

ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್ ಅವರು ಮುಖ್ಯ ಭೂಮಿಕೆ ನಿಭಾಯಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.  ಅಭಿಮಾನಿಗಳ ನಿರೀಕ್ಷೆಯನ್ನು ‘SIDE B’ ಸಿನಿಮಾ ಸುಳ್ಳು ಮಾಡಲಿಲ್ಲ. ಸೈಡ್​ ಎ ರೀತಿಯೇ ಸೈಡ್​ ಬಿ ಕೂಡ ಪ್ರಶಂಸೆ ಗಿಟ್ಟಿಸಿತು. 
10:30 PM Mar 22, 2024 IST | Ashika S
ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ

ಬೆಂಗಳೂರು: ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್ ಅವರು ಮುಖ್ಯ ಭೂಮಿಕೆ ನಿಭಾಯಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.  ಅಭಿಮಾನಿಗಳ ನಿರೀಕ್ಷೆಯನ್ನು ‘SIDE B’ ಸಿನಿಮಾ ಸುಳ್ಳು ಮಾಡಲಿಲ್ಲ. ಸೈಡ್​ ಎ ರೀತಿಯೇ ಸೈಡ್​ ಬಿ ಕೂಡ ಪ್ರಶಂಸೆ ಗಿಟ್ಟಿಸಿತು.

Advertisement

ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರವನ್ನು ಮಿಸ್​ ಮಾಡಿಕೊಂಡವರು ಈಗ ‘ಜೀ ಕನ್ನಡ’ದಲ್ಲಿ ವೀಕ್ಷಿಸುವ ಸಮಯ ಬಂದಿದೆ.

ಹೌದು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾ ಕಿರುತೆರೆಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ. ‘ಜೀ ಕನ್ನಡ’  ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ. ಇದೇ ಭಾನುವಾರ, ಅಂದರೆ ಮಾರ್ಚ್ 24ರಂದು ಸಂಜೆ 7.30 ಕ್ಕೆ ಈ ಸಿನಿಮಾದ ವರ್ಲ್ಡ್​ ಟಿಲಿವಿಷನ್​ ಪ್ರೀಮಿಯರ್​ ಆಗಲಿದೆ.

Advertisement

ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ, ಅದ್ವೈತ್​ ಗುರುಮೂರ್ತಿ ಅವರ ಛಾಯಾಗ್ರಹಣ ಹೈಲೈಟ್​ ಆಗಿದೆ. ರಕ್ಷಿತ್ ಶೆಟ್ಟಿ, ಚೈತ್ರಾ ಜೆ. ಆಚಾರ್​, ರುಕ್ಮಿಣಿ ವಸಂತ್​ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Advertisement
Tags :
Advertisement