For the best experience, open
https://m.newskannada.com
on your mobile browser.
Advertisement

ಇಂದು ಝಿಂಬಾಬ್ವೆ ಮತ್ತು ಭಾರತ 2 ಮತ್ತೆ ಮುಖಾಮುಖಿ : ಸಂಜೆ 4.30ಕ್ಕೆ ವೀಕ್ಷಿಸಿ

ನೆನ್ನೆ ನಡೆದ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಫೈಟ್‌ಕೊಟ್ಟರು ಕೊನೆಗೆ ಹಿನಾಯ ಸೋಲುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡವು 20 ಓವರ್​ಗಳಲ್ಲಿ 115 ರನ್ ಕಲೆಹಾಕಿದರೆ
08:22 AM Jul 07, 2024 IST | Nisarga K
ಇಂದು ಝಿಂಬಾಬ್ವೆ ಮತ್ತು ಭಾರತ 2 ಮತ್ತೆ ಮುಖಾಮುಖಿ   ಸಂಜೆ 4 30ಕ್ಕೆ ವೀಕ್ಷಿಸಿ
ಇಂದು ಝಿಂಬಾಬ್ವೆ ಮತ್ತು ಭಾರತ 2 ಮತ್ತೆ ಮುಖಾಮುಖಿ : ಸಂಜೆ 4.30ಕ್ಕೆ ವೀಕ್ಷಿಸಿ

ನೆನ್ನೆ ನಡೆದ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಫೈಟ್‌ಕೊಟ್ಟರು ಕೊನೆಗೆ ಹಿನಾಯ ಸೋಲುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡವು 20 ಓವರ್​ಗಳಲ್ಲಿ 115 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.5 ಓವರ್​ಗಳಲ್ಲಿ 102 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಝಿಂಬಾಬ್ವೆ 13 ರನ್​ಗಳ ಜಯ ಸಾಧಿಸಿದೆ. ಇದೀಗ ಈ ಸರಣಿಯ 2ನೇ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದೆ.

Advertisement

ಭಾನುವಾರ ನಡೆಯಲಿರುವ ಈ ಪಂದ್ಯ ಕೂಡ ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲೇ ಜರುಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಅತ್ತ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಝಿಂಬಾಬ್ವೆ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳುವ ತವಕದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?
ಭಾರತ ಮತ್ತು ಝಿಂಬಾಬ್ವೆ ಸರಣಿಯನ್ನು ಸೋನಿ ಸ್ಪೋರ್ಟ್ಸ್ ಚಾನೆಲ್​ನಲ್ಲಿ ವೀಕ್ಷಿಸಬಹುದು. ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲೂ ಈ ಪಂದ್ಯದ ನೇರ ಪ್ರಸಾರ ಇರಲಿದೆ. ಈ ಪಂದ್ಯವು ಸಂಜೆ 4.30 ರಿಂದ ಶುರುವಾಗಲಿದೆ.

Advertisement

Advertisement
Tags :
Advertisement