For the best experience, open
https://m.newskannada.com
on your mobile browser.
Advertisement

ಮೆಕ್ಸಿಕನ್ ಬ್ಯೂಟಿಯ ಮದುವೆಯಾದ ಜೊಮಾಟೊ ಸಿಇಒ

ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಎರಡನೇ ಮದುವೆ ಆಗಿದ್ದಾರೆ. ಅವರು ಮೆಕ್ಸಿಕನ್ ಮಾಡೆಲ್ ಗ್ರೇಸಿಯಾ ಮುನೋಜ್ ರನ್ನು ಮದುವೆಯಾಗಿದ್ದಾರೆ. ಮದುವೆ ಬೆನ್ನಲ್ಲೇ ಇವರಿಬ್ಬರು ಹನಿಮೂನ್‌ ಮುಗಿಸಿ ವಾಸಪ್ ಆಗಿದ್ದಾರೆ ಎಂದು ಸುದ್ದಿಯಾಗಿದೆ.
03:29 PM Mar 22, 2024 IST | Ashitha S
ಮೆಕ್ಸಿಕನ್ ಬ್ಯೂಟಿಯ ಮದುವೆಯಾದ ಜೊಮಾಟೊ ಸಿಇಒ

ದೆಹಲಿ: ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಎರಡನೇ ಮದುವೆ ಆಗಿದ್ದಾರೆ. ಅವರು ಮೆಕ್ಸಿಕನ್ ಮಾಡೆಲ್ ಗ್ರೇಸಿಯಾ ಮುನೋಜ್ ರನ್ನು ಮದುವೆಯಾಗಿದ್ದಾರೆ. ಮದುವೆ ಬೆನ್ನಲ್ಲೇ ಇವರಿಬ್ಬರು ಹನಿಮೂನ್‌ ಮುಗಿಸಿ ವಾಸಪ್ ಆಗಿದ್ದಾರೆ ಎಂದು ಸುದ್ದಿಯಾಗಿದೆ.

Advertisement

ಅಂದ್ಹಾಗೆ ಇವರಿಬ್ಬರ ಮದುವೆ ಕಳೆದ ಫೆಬ್ರವರಿಯಲ್ಲೇ ಆಗಿದೆ. ಗೋಯಲ್​ಗೆ ಇದು ಎರಡನೇ ಮದುವೆ. ದೆಹಲಿ ಮೂಲದ ಬಾಲ್ಯ ಸ್ನೇಹಿತೆ ಕಾಂಚನ್ ಜೋಶಿ ಜೊತೆ ಮೊದಲ ವಿವಾಹ ನಡೆದಿತ್ತು.

ಜನವರಿಯಲ್ಲಿ ಮುನೋಜ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ದೆಹಲಿಯಲ್ಲಿ ತನ್ನ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. 41ನೇ ವಯಸ್ಸಿನಲ್ಲಿ ದೀಪಿಂದರ್ ಗೋಯಲ್ ಅವರು ಜೊಮೆಟೊದ ಸಂಸ್ಥಾಪಕ ಮತ್ತು ಸಿಇಒ ಆಗಿ ವ್ಯಾಪಾರ ಜಗತ್ತಿನಲ್ಲಿ ಗಮನಾರ್ಹ ಛಾಪು ಮೂಡಿಸಿದ್ದಾರೆ.

Advertisement

ಗೋಯಲ್ ಅವರ ಸ್ವಂತ ಅಪಾರ್ಟ್‌ಮೆಂಟ್‌ನಿಂದ 2008 ರಲ್ಲಿ ಸಣ್ಣದಾಗಿ ಹುಟ್ಟಿಕೊಂಡ ಜೊಮೆಟೊ ಆಹಾರ ವಿತರಣಾ ಉದ್ಯಮದಲ್ಲಿ ಈಗ ಬೃಹತ್‌ ಮಟ್ಟದಲ್ಲಿ ಬೆಳೆದಿದೆ. ಇದು ಭಾರತದಾದ್ಯಂತ 1,000 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಹಸಿರು ಸಮವಸ್ತ್ರವನ್ನು ಧರಿಸಿರುವ ಪ್ರತ್ಯೇಕವಾಗಿ ಸಸ್ಯಾಹಾರಿ ಊಟವನ್ನು ವಿತರಿಸುವ ವಿತರಣಾ ಕಾರ್ಯನಿರ್ವಾಹಕರ 'ಶುದ್ಧ ವೆಜ್' ಫ್ಲೀಟ್‌ನ ಯೋಜನೆಗಳನ್ನು ಘೋಷಿಸಿದಾಗ ವಿವಾದ ಕೂಡಾ ಉಂಟಾಗಿತ್ತು.

Advertisement
Tags :
Advertisement