For the best experience, open
https://m.newskannada.com
on your mobile browser.
Advertisement

ನ್ಯೂ ಇಯರ್ ಪಾರ್ಟಿ ಮತ್ತಲ್ಲಿ ಭಾರತೀಯರು ನೀಡಿದ ಟಿಪ್ಸ್ ಎಷ್ಟು ಲಕ್ಷ ಗೊತ್ತಾ ?

ಹೊಸವರ್ಷದಂದು ರಾತ್ರಿಯೆಲ್ಲಾ ಪಾರ್ಟಿಯಲ್ಲಿ ತೊಡಗಿದ್ದ ಜನ ಅಡುಗೆ ಮಾಡಿದ್ದಕ್ಕಿಂತ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದೇ ಹೆಚ್ಚು.ಅಷ್ಟೇ ಅಲ್ಲ. . ಆಹಾರ ಪೂರೈಕೆ ಮಾಡಿದ ಡೆಲಿವರಿ ಬಾಯ್ಸ್‌ಗೆ ಜನ ಹೊಸವರ್ಷದಂದು ಭರ್ಜರಿಯಾಗಿಯೇ ಟಿಪ್ಸ್ ನೀಡಿದ್ದಾರೆ. ಇದಕ್ಕೆ ಆನ್‌ಲೈನ್ ಆಹಾರ ಪೂರೈಕೆ ಮಾಡುವ ಝೊಮ್ಯಾಟೋ ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್‌ ಸಂತಸ ವ್ಯಕ್ತಪಡಿಸಿದ್ದು, ಭಾರತೀಯರಿಗೆ ಧನ್ಯವಾದ ತಿಳಿಸಿದ್ದಾರೆ.
02:02 PM Jan 03, 2024 IST | Ashitha S
ನ್ಯೂ ಇಯರ್ ಪಾರ್ಟಿ ಮತ್ತಲ್ಲಿ ಭಾರತೀಯರು ನೀಡಿದ ಟಿಪ್ಸ್ ಎಷ್ಟು ಲಕ್ಷ ಗೊತ್ತಾ

ದೆಹಲಿ: ಹೊಸವರ್ಷದಂದು ರಾತ್ರಿಯೆಲ್ಲಾ ಪಾರ್ಟಿಯಲ್ಲಿ ತೊಡಗಿದ್ದ ಜನ ಅಡುಗೆ ಮಾಡಿದ್ದಕ್ಕಿಂತ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದೇ ಹೆಚ್ಚು.ಅಷ್ಟೇ ಅಲ್ಲ. . ಆಹಾರ ಪೂರೈಕೆ ಮಾಡಿದ ಡೆಲಿವರಿ ಬಾಯ್ಸ್‌ಗೆ ಜನ ಹೊಸವರ್ಷದಂದು ಭರ್ಜರಿಯಾಗಿಯೇ ಟಿಪ್ಸ್ ನೀಡಿದ್ದಾರೆ. ಇದಕ್ಕೆ ಆನ್‌ಲೈನ್ ಆಹಾರ ಪೂರೈಕೆ ಮಾಡುವ ಝೊಮ್ಯಾಟೋ ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್‌ ಸಂತಸ ವ್ಯಕ್ತಪಡಿಸಿದ್ದು, ಭಾರತೀಯರಿಗೆ ಧನ್ಯವಾದ ತಿಳಿಸಿದ್ದಾರೆ.

Advertisement

ಜೊತೆಗೆ ತಮ್ಮ ಸಂಸ್ಥೆಯ ಡೆಲಿವರಿ ಪಾರ್ಟನರ್‌ಗಳಿಗೆ ಎಷ್ಟು ಮೊತ್ತದ ಹಣ ಸಿಕ್ಕಿದೆ ಎಂಬ ವಿಚಾರವನ್ನು ಹೇಳಿಕೊಂಡಿರುವ ದೀಪೇಂದರ್ ಸ್ವತಃ ಟ್ವಿಟ್ಟರ್‌ನಲ್ಲಿ ಈ ವಿಚಾರ ತಿಳಿಸಿದ್ದಾರೆ.

ಸಿಇಒ ದೀಪಿಂದರ್ ಗೊಯಲ್ ಅವರು ನ್ಯೂ ಇಯರ್ ಹಿಂದಿನ ರಾತ್ರಿ ಭಾರತೀಯರು 97 ಲಕ್ಷಕ್ಕೂ ಅಧಿಕ ಹಣವನ್ನು ಡೆಲಿವರಿ ಪಾರ್ಟನರ್‌ಗಳಿಗೆ ಟಿಪ್ಸ್‌ ಆಗಿ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಅವವರು ಲವ್ ಯೂ ಇಂಡಿಯಾ, ನೀವು ನಮಗೆ 97 ಲಕ್ಷಕ್ಕೂ ಅಧಿಕ ಹಣವನ್ನು ಟಿಪ್ಸ್‌ ಆಗಿ ನೀಡಿದ್ದೀರಿ ಎಂದು ಬರೆದುಕೊಂಡಿದ್ದಾರೆ.

Advertisement

ಇದಕ್ಕೆ ಬಳಕೆದಾರರು ಕೂಡ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ ಪ್ರತಿ ಆರ್ಡರ್‌ಗೆ ಎಷ್ಟು ಟಿಪ್ಸ್ ನೀಡುತ್ತಾರೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಅವರು ಇದಕ್ಕೆ ಅರ್ಹರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಗ್ರೇಟ್ ತುಂಬಾ ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇದು ಒಳ್ಳೆಯ ಸುದ್ದಿ ಈ ಹಣದಲ್ಲಿ ಡೆಲಿವರಿ ಪಾಲುದಾರರಿಗೆ ಪಾಲು ನೀಡುತ್ತೀರಾ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

Advertisement
Tags :
Advertisement