For the best experience, open
https://m.newskannada.com
on your mobile browser.
Advertisement

ಹೂತ ಹೆಣಗಳ ಬಗೆಯುತ್ತಿರುವ ಯುವಕರು: ಸ್ಮಶಾನಗಳಲ್ಲಿ ಪೋಲೀಸ್ ಕಾವಲು

ಪಶ್ಚಿಮ ಆಫ್ರಿಕಾದ ದೇಶ ಸಿಯೆರಾ ಲಿಯೋನ್‌ನಲ್ಲಿ ಪೋಲೀಸರು ಸ್ಮಶಾನಗಳ ಕಾವಲು ಕಾಯುತ್ತಾ ನಿಂತಿದ್ದಾರೆ. ಯಾಕೆಂದರೇ ಇಲ್ಲಿನ ಯುವಜನರು ಸ್ಮಶಾನಗಳಲ್ಲಿ ಹೂಳಿದ ಹೆಣಗಳನ್ನು ಬಗೆದು, ಅವುಗಳ ಮೂಳೆಗಳನ್ನು ಸಂಗ್ರಹಿಸುತ್ತಾರೆ. ಹೀಗಾಗಿ ಪೊಲೀಸರು ಸ್ಮಶಾನ ಕಾಯುತ್ತಾರೆ.
04:23 PM Apr 07, 2024 IST | Ashitha S
ಹೂತ ಹೆಣಗಳ ಬಗೆಯುತ್ತಿರುವ ಯುವಕರು  ಸ್ಮಶಾನಗಳಲ್ಲಿ ಪೋಲೀಸ್ ಕಾವಲು

ಪಶ್ಚಿಮ ಆಫ್ರಿಕಾದ ದೇಶ ಸಿಯೆರಾ ಲಿಯೋನ್‌ನಲ್ಲಿ ಪೋಲೀಸರು ಸ್ಮಶಾನಗಳ ಕಾವಲು ಕಾಯುತ್ತಾ ನಿಂತಿದ್ದಾರೆ. ಯಾಕೆಂದರೇ ಇಲ್ಲಿನ ಯುವಜನರು ಸ್ಮಶಾನಗಳಲ್ಲಿ ಹೂಳಿದ ಹೆಣಗಳನ್ನು ಬಗೆದು, ಅವುಗಳ ಮೂಳೆಗಳನ್ನು ಸಂಗ್ರಹಿಸುತ್ತಾರೆ. ಹೀಗಾಗಿ ಪೊಲೀಸರು ಸ್ಮಶಾನ ಕಾಯುತ್ತಾರೆ.

Advertisement

ಇವರು ಮೂಳೆಗಳನ್ನು ಕದಿಯಲು ಕಾರಣವೆಂದರೇ, ಮಾನವ ಮೂಳೆಗಳ ಪುಡಿ ಸೇರಿದಂತೆ ವಿವಿಧ ವಿಷಕಾರಿ ವಸ್ತುಗಳ ಮಿಶ್ರಣದಿಂದ ಇವರೊಂದು ಡ್ರಗ್ಸ್ ತಯಾರಿಸುತ್ತಾರೆ. ಕುಶ್ ಎಂದು ಕರೆಯಲ್ಪಡುವ ಸೈಕೋಆಕ್ಟಿವ್ ವಸ್ತು ಹಲವು ಗಂಟೆಗಳ ಕಾಲ ವ್ಯಕ್ತಿಗಳನ್ನು ಸಮ್ಮೋಹನ ಸ್ಥಿತಿಯಲ್ಲಿಡುತ್ತಂತೆ. ಇದನ್ನು ಜೊಂಬಿ ಡ್ರಗ್ ಎಂದು ಕೂಡಾ ಹೇಳಲಾಗುತ್ತದೆ.

ಈ ಡ್ರಗ್ಸ್ ವ್ಯಸನ ದೇಶದ ಯುವಜನರಲ್ಲಿ ಹೆಚ್ಚುತ್ತಿದ್ದು, ಇದರ ಪೂರೈಕೆಗಾಗಿ ಮಾನವ ಮೂಳೆಗಳು ಅಗತ್ಯವಿದೆ. ಈ ಮೂಳೆಗಳಲ್ಲಿರು ಗಂಧಕವು ಡ್ರಗ್ಸ್‌ಗೆ ಹೆಚ್ಚಿನ ಸಮ್ಮೋಹನ ಶಕ್ತಿ ನೀಡುತ್ತದೆ. ಅದನ್ನು ಸಂಗ್ರಹಿಸಲು ಸ್ಮಶಾನಗಳಿಗೆ ಎಡತಾಕುತ್ತಿರುವ ಹಾದಿ ತಪ್ಪಿದ ಯುವಜನರ ಹಾವಳಿ ತಪ್ಪಿಸಲು ಸ್ಮಶಾನಗಳಿಗೆ ಪೋಲೀಸ್ ಕಾವಲು ಇಡಲಾಗಿದೆ.

Advertisement

ಇನ್ನು ಸಿಯೆರಾ ಲಿಯೋನ್‌ನ ಅಧ್ಯಕ್ಷ ಜೂಲಿಯಸ್ ಮಾದಾ ಬಯೋ ಈ ಪರಿಸ್ಥಿತಿಯನ್ನು ಮಾದಕ ದ್ರವ್ಯಗಳು ಮತ್ತು ಇತರ ವಸ್ತುಗಳ ವ್ಯಾಪಕ ಬಳಕೆಯಿಂದ ತಂದಿರುವ 'ಅಸ್ತಿತ್ವದ ಬೆದರಿಕೆ' ಎಂದು ವಿವರಿಸಿದ್ದಾರೆ. 'ಕುಶ್' - ಗಾಂಜಾ, ಫೆಂಟನಿಲ್, ಟ್ರಮಾಡಾಲ್ ಮತ್ತು ಫಾರ್ಮಾಲ್ಡಿಹೈಡ್‌ನಿಂದ ಮಾಡಲ್ಪಟ್ಟ ಹೆಚ್ಚು ವ್ಯಸನಕಾರಿ ಡ್ರಗ್ ಕಾಕ್‌ಟೈಲ್‌ನ ದುರುಪಯೋಗದ ಸಾಂಕ್ರಾಮಿಕ ರೋಗದ ಬಗ್ಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ನಿರ್ದಿಷ್ಟವಾಗಿ ಕುಶ್‌ನ ಹಾನಿಕಾರಕ ಪರಿಣಾಮಗಳನ್ನು ಒತ್ತಿ ಹೇಳಿದ್ದಾರೆ. ದೇಶದ ಅನೇಕ ಪ್ರದೇಶಗಳಲ್ಲಿ ಈಗ ಈ ವ್ಯಸನಿಗಳಿಗಾಗಿ ಪುನರ್ವಸತಿ ಸೌಲಭ್ಯಗಳನ್ನು ತೆರೆಯಲು ಉಪಕ್ರಮಗಳು ಚಾಲನೆಯಲ್ಲಿವೆ.

Advertisement
Tags :
Advertisement