For the best experience, open
https://m.newskannada.com
on your mobile browser.
Advertisement

ಸಾಕಿ ಸಲಹಿದ ಮೃಗಾಲಯ ಸಿಬ್ಬಂದಿಯನ್ನು ಕೊಂದ ಸಿಂಹಕ್ಕೆ ದಯಾಮರಣ

ನೈಜೀರಿಯಾದ ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯದ ಆವರಣದಲ್ಲಿರುವ ಝೂನಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಸಿಂಹ ಒಂದು ಹುಟ್ಟಿದಾಗಿನಿಂದಲೂ ತನ್ನ ಸಾಕಿ ಸಲಹಿದ ಮೃಗಾಲಯ ಸಿಬ್ಬಂದಿಯೋರ್ವನನ್ನು ಕೊಂದು ಹಾಕಿದೆ.
03:12 PM Feb 21, 2024 IST | Gayathri SG
ಸಾಕಿ ಸಲಹಿದ ಮೃಗಾಲಯ ಸಿಬ್ಬಂದಿಯನ್ನು ಕೊಂದ ಸಿಂಹಕ್ಕೆ ದಯಾಮರಣ

ನೈಜೀರಿಯಾ: ನೈಜೀರಿಯಾದ ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯದ ಆವರಣದಲ್ಲಿರುವ ಝೂನಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಸಿಂಹ ಒಂದು ಹುಟ್ಟಿದಾಗಿನಿಂದಲೂ ತನ್ನ ಸಾಕಿ ಸಲಹಿದ ಮೃಗಾಲಯ ಸಿಬ್ಬಂದಿಯೋರ್ವನನ್ನು ಕೊಂದು ಹಾಕಿದೆ.

Advertisement

ಈ ಮೃತ ವ್ಯಕ್ತಿಯನ್ನು ಒಲಬೊಡೆ ಒಲವುಯಿ ಎಂದು ಗುರುತಿಸಲಾಗಿದೆ. ಈತನನ್ನು ಹತ್ಯೆ ಮಾಡಿದ ಸಿಂಹಕ್ಕೆ 9 ವರ್ಷ ಇದು ಹುಟ್ಟಿದಾಗಿನಿಂದ ಈತನೆ ಸಾಕುತ್ತಿದ್ದ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಘಟನೆ ನಡೆಯುವ ವೇಳೆ ಒಲಬೊಡೆ ಒಲವುಯಿ ಸಿಂಹಕ್ಕೆ ಆಹಾರ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಇದೇ ವೇಳೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೃಗಾಲಯದ ಇನ್ನೊಬ್ಬರು ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಒಲಬೊಡೆ ಒಲವುಯಿ ಅವರನ್ನು ಸಿಂಹದ ದಾಳಿಯಿಂದ ಉಳಿಸಲು ಅವರ ಸಹೋದ್ಯೋಗಿಗಳು ಯತ್ನಿಸಿದ್ದರಾದು ಅಷ್ಟರಲ್ಲಾಗಲೇ ಅವರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಒಎಯು ಸಿಬ್ಬಂದಿ ಹೇಳಿಕೆ ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ. ಹೀಗೆ ಮೃಗಾಲಯದ ಸಿಬ್ಬಂದಿ ಮೇಲೆಯೇ ದಾಳಿ ಮಾಡಿದ ಸಿಂಹಕ್ಕೆ ದಯಾಮರಣ ನೀಡಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

Advertisement

Advertisement
Tags :
Advertisement