ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪರಶುರಾಮ ಪ್ರತಿಮೆಯ ಅರ್ಧ ಭಾಗ ನಾಪತ್ತೆ ವಿಚಾರ: ಎಮ್‌ಎಲ್ ಸಿ ಮಂಜುನಾಥ್‌ ಪ್ರತಿಕ್ರಿಯೆ

ಕಾರ್ಕಳ ಪರಶುರಾಮನ ಪ್ರತಿಮೆಯ ಅರ್ಧ ಭಾಗ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಎಮ್‌ ಎಲ್‌ ಸಿ ಮಂಜುನಾಥ್ ಭಂಡಾರಿ ಅವರು ಪ್ರತಿಕ್ರಿಯಸಿದ್ದಾರೆ.
10:39 AM Nov 01, 2023 IST | Ramya Bolantoor

ಕಾರ್ಕಳ: ಕಾರ್ಕಳ ಪರಶುರಾಮನ ಪ್ರತಿಮೆಯ ಅರ್ಧ ಭಾಗ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಎಮ್‌ ಎಲ್‌ ಸಿ ಮಂಜುನಾಥ್ ಭಂಡಾರಿ ಅವರು ಪ್ರತಿಕ್ರಿಯಸಿದ್ದಾರೆ.
"ಪರಶುರಾಮನ ಪ್ರತಿಮೆಯ ಮೂರ್ತಿಯನ್ನು ಸರಕಾರದ ಗಮನಕ್ಕೆ ತರದೇ ತೆರವು ಮಾಡಿದ್ದಾರೆ. ಸ್ಥಳಕ್ಕೆ ಹೋಗೋ ಮುನ್ನವೇ ಮೂರ್ತಿಯ ಅರ್ಧ ಭಾಗವನ್ನ ಜಿಲ್ಲಾಡಳಿತ ತೆರವುಗೊಳಿಸಿದ್ದಾರೆ ಎಂದಿದ್ದಾರೆ.

Advertisement

ಮಾಧ್ಯಮದವರೂಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ, ನಿರ್ಮಿತಿ ಕೇಂದ್ರ ನಮ್ಮ ಗಮನಕ್ಕೆ ತರದೇ ಈ ಕೆಲಸ ಮಾಡಿದ್ದಾರೆ. ಪ್ರತಿಮೆಗೆ ಬಲ ತುಂಬುವ ನಿಟ್ಟಿನಲ್ಲಿ ಅರ್ಧ ಪ್ರತಿಮೆಯನ್ನ ತೆರವುಗೊಳಿಸಲಾಗಿದೆ.

ಹಾಗಾದ್ರೆ ನಿರ್ಮಿತಿ ಕೇಂದ್ರದ ಮೇಲೇ ಸರಕಾರಕ್ಕೆ ನಿಯಂತ್ರಣ ಇಲ್ವಾ..?, ನಿರ್ಮಿತಿ ಕೇಂದ್ರ ಸರಕಾರಿ ಸಂಸ್ಥೆಯಲ್ವಾ..? ಅಷ್ಟಕ್ಕೂ ನಕಲಿ ಮೂರ್ತಿ ಎಲ್ಲಿಗೆ ಹೋಯ್ತು..?ಅತೀ ದೊಡ್ಡ ಅಪವಾದವಿರುವಾಗ ಸರಕಾರದ ಗಮನಕ್ಕೆ ತರದೇ ಏಕಾ ಏಕಿ ಪ್ರತಿಮೆ ತೆರವು ಎಷ್ಟು ಸರಿ..?ಇಲ್ಲಿ ಜಿಲ್ಲಾಡಳಿತ ಹಾಗೂ ನಿರ್ಮಿತಿ ಕೇಂದ್ರದಿಂದ ವಂಚನೆ ಮುಚ್ಚಿ ಹಾಕೋ ಪ್ರಯತ್ನ ಆಗಿದೆ. ಸತ್ಯ ಬಯಲು ಮಾಡದೆ,ಈ ಕಣ್ಣಾ ಮುಚ್ಚಾಲೆ ಆಟ ಯಾಕೆ..? ಕಾಂಗ್ರೆಸ್ ಸರಕಾರದ ತನಿಖೆಯಿಂದ ಬಯಲಾದ ಸತ್ಯಗಳೇನು..? ಪರಶುರಾಮನ ಪ್ರತಿಮೆ ನಕಲಿನ ಅಸಲಿನ ಅನ್ನೋ ಪ್ರಶ್ನೆಗೆ ಉತ್ತರ ಸಿಗೋದು ಯಾವಾಗ. ಮುಂದೆ ಥೀಮ್ ಪಾರ್ಕ್ನಲ್ಲಿ ಅಸಲಿ ಪರಶುರಾಮ ಪ್ರತಿಮೆ ಪ್ರತಿಷ್ಠಾಪನೆಯಾಗುತ್ತಾ ? ಎಂದೆಲ್ಲಾ ಪರಶುರಾಮ ಪ್ರತಿಮೆ ನಾಪತ್ತೆ ಬಗ್ಗೆ ಎಮ್‌ಎಲ್‌ಸಿ ಮಂಜುನಾಥ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.

Advertisement

Advertisement
Tags :
District AdministrationLatestNewsmediaNewsKannadaಎಮ್‌ಎಲ್ಸಿ ಮಂಜುನಾಥ್‌ಕಾರ್ಕಳ
Advertisement
Next Article