For the best experience, open
https://m.newskannada.com
on your mobile browser.
Advertisement

BAFT ಫಿಲ್ಮ್‌ ಅವಾರ್ಡ್ 2024: ನಿರೂಪಕಿಯಾಗಿ ಮಿಂಚಿದ ದೀಪಿಕಾ ಪಡುಕೋಣೆ

ಲಂಡನ್‌ನ ರಾಯಲ್‌ ಫೆಸ್ಟಿವಲ್‌ ಹಾಲ್‌ನಲ್ಲಿ ನಡೆದ BAFT ಫಿಲ್ಮ್ 2024 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಿಸ್ಟೋಫರ್‌ ನೋಲನ್‌ ಅವರ ಜೀವನ ಚರಿತ್ರೆ ಆಧರಿಸಿದ ಚಿತ್ರ 'ಓಪನ್‌ ಹೈಮರ್‌' ಏಳು ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
05:02 PM Feb 19, 2024 IST | Ashitha S
baft ಫಿಲ್ಮ್‌ ಅವಾರ್ಡ್ 2024  ನಿರೂಪಕಿಯಾಗಿ ಮಿಂಚಿದ ದೀಪಿಕಾ ಪಡುಕೋಣೆ

ಲಂಡನ್‌: ಲಂಡನ್‌ನ ರಾಯಲ್‌ ಫೆಸ್ಟಿವಲ್‌ ಹಾಲ್‌ನಲ್ಲಿ ನಡೆದ BAFT ಫಿಲ್ಮ್ 2024 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಿಸ್ಟೋಫರ್‌ ನೋಲನ್‌ ಅವರ ಜೀವನ ಚರಿತ್ರೆ ಆಧರಿಸಿದ ಚಿತ್ರ 'ಓಪನ್‌ ಹೈಮರ್‌' ಏಳು ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

Advertisement

ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಾಯಕ ನಟ ಸೇರಿದಂತೆ ಒಟ್ಟು ಏಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪೋರ್‌ ಥಿಂಗ್ಸ್‌  ಚಿತ್ರದಲ್ಲಿನ ನಟನೆಗಾಗಿ ಎಮ್ಮಾ ಸ್ಟೋನ್‌ ಅವರು ಶೇಷ್ಠ ನಟಿ ಪ್ರಶಸ್ತಿ ಗೆದ್ದಿದ್ದಾರೆ. ಇನ್ನುಳಿದಂತೆ, ಅತ್ಯುತ್ತಮ ಬ್ರಿಟಿಷ್‌ ಚಿತ್ರವಾಗಿ crab day ಹಾಗೂ ಕಿರು ಚಿತ್ರ- ಜೆಲ್ಲಿ ಫಿಶ್‌ ಮತ್ತು ಲ್ಯಾಬ್‌ಸ್ಟರ್‌ ಪ್ರಶಸ್ತಿ ಪಡೆದಿದೆ.

ಇನ್ನು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ, ಅದು ದೀಪಿಕಾ ಪಡುಕೋಣೆ. ಹೌದು. .  BAFT ಫಿಲ್ಮ್ 2024 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೊದಲ ಭಾರತೀಯ ತಾರೆ ಎನ್ನುವ ಹೆಗ್ಗಳಿಕೆ ದೀಪಿಕಾ ಪಡುಕೋಣೆ ಅವರ ಪಾಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ದೀಪಿಕಾ ಭಾಗಿಯಾಗಿದ್ದಾರೆ. ದೀಪಿಕಾ BAFTA ಕಾರ್ಯಕ್ರಮಕ್ಕೆ ಮೊದಲ ಬಾರಿ ಹೋದರೂ ತನ್ನ ನೆಚ್ಚಿನ ಡಿಸೈನರ್ ಸಬ್ಯಸಾಚಿ ಮುಖರ್ಜಿ ಅವರು ವಿನ್ಯಾಸಗೊಳಿಸಿದ ಸೀರೆಯನ್ನು ಧರಿಸಿ ಹೆಜ್ಜೆ ಹಾಕಿದ್ದಾರೆ. ನಿರೂಪಣೆ ವೇಳೆಯೂ ಸೀರೆ ಧರಿಸಿ ನಿಂತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Advertisement

Advertisement
Tags :
Advertisement