ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

2ನೇ ಟೆಸ್ಟ್​ ಪಂದ್ಯ: ಬೃಹತ್ ರನ್ ಕಲೆ ಹಾಕಿದ ಟೀಮ್​ ಇಂಡಿಯಾ

ವಿಶಾಖಪಟ್ಟಣಂನ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದ 2ನೇ ದಿನಕ್ಕೆ ಟೀಮ್ ಇಂಡಿಯಾ 396 ರನ್​ಗಳಿಗೆ ಆಲೌಟ್ ಆಗಿದೆ.
11:39 AM Feb 03, 2024 IST | Ashika S

ವಿಶಾಖಪಟ್ಟಣಂ: ವಿಶಾಖಪಟ್ಟಣಂನ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದ 2ನೇ ದಿನಕ್ಕೆ ಟೀಮ್ ಇಂಡಿಯಾ 396 ರನ್​ಗಳಿಗೆ ಆಲೌಟ್ ಆಗಿದೆ.

Advertisement

ಭಾರತ ತಂಡದ ಕ್ಯಾಪ್ಟನ್​ ರೋಹಿತ್ ಶರ್ಮಾ ಟಾಸ್ ಗೆದ್ದು ಬೃಹತ್ ರನ್ ಕಲೆಹಾಕಲು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ್ದ ರೋಹಿತ್ ಶರ್ಮಾ ಮತ್ತು ಜೈಸ್ವಾಲ್ ಉತ್ತಮವಾದ ಬ್ಯಾಟಿಂಗ್ ಮಾಡುತ್ತಿದ್ದರು.

ಈ ವೇಳೆ ತಂಡದ ಮೊತ್ತ 40 ರನ್ ಇರುವಾಗ ರೋಹಿತ್ ಕ್ಯಾಚ್ ನೀಡಿ ಔಟ್ ಆದರು. ಗಿಲ್ 34, ಶ್ರೇಯಸ್ 27, ರಜತ್ ಪಾಟೀದರ್ 32, ಅಕ್ಷರ್ ಪಟೇಲ್ 27 ರನ್​. ಇವರಿಂದ ಉತ್ತಮ ಬ್ಯಾಟಿಂಗ್ ನಿರೀಕ್ಷೆ ಮಾಡಲು ಆಗಲಿಲ್ಲ.

Advertisement

ಇತ್ತ ಕ್ರೀಸ್​ಗೆ ಕಚ್ಚಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿಯಾಗಿ 209 ರನ್​ ಸಿಡಿಸಿ ತಂಡಕ್ಕೆ ನೆರವಾದರು. ಟೆಸ್ಟ್​ ವೃತ್ತಿ ಜೀವನದಲ್ಲಿ ಮೊಟ್ಟ ಮೊದಲ ದ್ವಿಶತಕ ಬಾರಿಸಿದರು.

ಭಾರತದ ಪರ ವಿಕೆಟ್ ಕೀಪರ್ ಶ್ರೀಕರ ಭರತ್ 17 ರನ್​ಗೆ ಔಟ್​ ಆಗಿ ಮತ್ತೊಮ್ಮೆ ಬ್ಯಾಟಿಂಗ್​​ನಲ್ಲಿ ವಿಫಲವಾದರು. ಆರ್ ಅಶ್ವಿನ್ 20, ಕುಲ್​ದೀಪ್​ 8, ಬೂಮ್ರಾ 6, ಮುಖೇಶ್ ಕುಮಾರ್ ಡಗೌಟ್​ ಆದರು. ಇಂಗ್ಲೆಂಡ್ ಪರ ಮಿಂಚಿನ ಬೌಲಿಂಗ್ ಮಾಡಿದ ಶೋಯೆಬ್ ಬಶೀರ್, ರೆಹಾನ್ ಅಹ್ಮದ್ ಹಾಗೂ ಜೇಮ್ಸ್ ಆಂಡರ್ಸನ್ ತಲಾ 3 ವಿಕೆಟ್​ಗಳನ್ನು ಕಬಳಿಸಿ ತಂಡಕ್ಕೆ ನೆರವಾದರು.

Advertisement
Tags :
LatetsNewsNewsKannadaಇಂಗ್ಲೆಂಡ್ರಾಜಶೇಖರ ರೆಡ್ಡಿವಿಶಾಖಪಟ್ಟಣಂಸ್ಟೇಡಿಯಂ
Advertisement
Next Article