ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರಾಧ್ಯಾಪಕರಿಂದ ಲೈಂಗಿಕ ದೌರ್ಜನ್ಯ: 500 ವಿದ್ಯಾರ್ಥಿನಿಯರಿಂದ ಮೋದಿ ಗೆ ಪತ್ರ

ಹರ್ಯಾಣದ ಸಿರ್ಸಾದ ಚೌಧರಿ ದೇವಿ ಲಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಈ ಪ್ರಾಧ್ಯಾಪಕರನ್ನು ಅಮಾನತು ಮಾಡಬೇಕು ಹಾಗೂ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆಗ್ರಹಿಸಿ ಸಿರ್ಸಾದ 500 ಮಹಿಳಾ ಕಾಲೇಜು ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಮತ್ತು ಸಿಎಂ ಮನೋಹರ್ ಲಾಲ್‌ ಖಟ್ಟರ್‌ಗೆ ಪತ್ರ ಬರೆದಿದ್ದಾರೆ.
10:04 PM Jan 08, 2024 IST | Ashitha S

ಚಂಡೀಗಢ: ಹರ್ಯಾಣದ ಸಿರ್ಸಾದ ಚೌಧರಿ ದೇವಿ ಲಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಈ ಪ್ರಾಧ್ಯಾಪಕರನ್ನು ಅಮಾನತು ಮಾಡಬೇಕು ಹಾಗೂ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆಗ್ರಹಿಸಿ ಸಿರ್ಸಾದ 500 ಮಹಿಳಾ ಕಾಲೇಜು ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಮತ್ತು ಸಿಎಂ ಮನೋಹರ್ ಲಾಲ್‌ ಖಟ್ಟರ್‌ಗೆ ಪತ್ರ ಬರೆದಿದ್ದಾರೆ.

Advertisement

ಅಲ್ಲದೆ, ವಿದ್ಯಾರ್ಥಿನಿಯರ ಪತ್ರದ ಪ್ರತಿಗಳನ್ನು ಉಪಕುಲಪತಿ ಡಾ. ಅಜ್ಮೀರ್ ಸಿಂಗ್ ಮಲಿಕ್, ಹರ್ಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹಾಗೂ ಹಿರಿಯ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಆಯ್ದ ಮಾಧ್ಯಮ ಸಂಸ್ಥೆಗಳಿಗೂ ಕಳುಹಿಸಲಾಗಿದೆ.

ಈ ಪತ್ರದಲ್ಲಿ ಪ್ರೊಫೆಸರ್ ವಿರುದ್ಧ ಕೊಳಕು ಮತ್ತು ಅಶ್ಲೀಲ ಕೃತ್ಯಗಳನ್ನು ನಡೆಸಿರುವ ಬಗ್ಗೆ ಆರೋಪಿಸಲಾಗಿದೆ. ಪ್ರಾಧ್ಯಾಪಕರು ಹುಡುಗಿಯರನ್ನು ತನ್ನ ಕಚೇರಿಗೆ ಕರೆದು, ಸ್ನಾನಗೃಹಕ್ಕೆ ಕರೆದುಕೊಂಡು ಹೋಗುತ್ತಾರೆ ಮತ್ತು ಖಾಸಗಿ ಭಾಗಗಳನ್ನು ಮುಟ್ಟುತ್ತಾರೆ ಹಾಗೂ ನಮ್ಮೊಂದಿಗೆ ಅಶ್ಲೀಲ ಕೆಲಸಗಳನ್ನು ಮಾಡುತ್ತಾರೆ ಎಂದು ಆರೋಪಿಸಲಾಗಿದೆ.

Advertisement

ಅಲ್ಲದೆ, ಇದನ್ನು ಪ್ರತಿಭಟಿಸಿದರೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಯಿತು ಎಂದೂ ವಿದ್ಯಾರ್ಥಿನಿಯರು ಹೇಳಿದ್ದಾರೆ. ಈ ಕೃತ್ಯಗಳು ಹಲವು ತಿಂಗಳುಗಳಿಂದ ನಡೆಯುತ್ತಿದೆ ಎಂದು ಹೇಳಲಾಗಿದೆ.

ಈ ಮಧ್ಯೆ, ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ರಾಜೇಶ್ ಕುಮಾರ್ ಬನ್ಸಾಲ್ ಪತ್ರದ ಸ್ವೀಕೃತಿಯನ್ನು ಖಚಿತಪಡಿಸಿದ್ದಾರೆ. ಹಾಗೂ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಶ್ವವಿದ್ಯಾನಿಲಯವು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ತನ್ನದೇ ಆದ ಸಮಿತಿಯನ್ನು ಹೊಂದಿದೆ. ಇದು ಗಂಭೀರ ಆರೋಪವಾಗಿದೆ. ಪತ್ರದಲ್ಲಿ ಯಾವುದೇ ಹೆಸರಿಲ್ಲ, ಆದರೆ ನಾವು ಇದನ್ನು ತನಿಖೆ ಮಾಡುತ್ತೇವೆ ಎಂದೂ ಹೇಳಿದರು.

ಹಾಗೂ, ತನಿಖೆಯ ಬಳಿಕವಷ್ಟೇ ಕ್ರಮ ಕೈಗೊಳ್ಳಲಾಗುವುದು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಿಡುವುದಿಲ್ಲ. ಆದರೆ, ಯಾರಾದರೂ ನಿರಪರಾಧಿಗಳಾಗಿದ್ದರೆ, ಅವರ ಹೆಸರು ಹಾಳಾಗಬಾರದು ಎಂದೂ ರಿಜಿಸ್ಟ್ರಾರ್‌ ತಿಳಿಸಿದ್ದಾರೆ.

 

Advertisement
Tags :
crimeLatestNewsNewsKannadaPOLICEನವದೆಹಲಿಪ್ರಾಧ್ಯಾಪಕಪ್ರಿನ್ಸಿಪಾಲ್ಮೋದಿ ಗೆ ಪತ್ರಲೈಂಗಿಕ ದೌರ್ಜನ್ಯ
Advertisement
Next Article