For the best experience, open
https://m.newskannada.com
on your mobile browser.
Advertisement

ಗೋವಾದಲ್ಲಿ 54 ನೇ ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ ಗೆ ಚಾಲನೆ

ಗೋವಾ: 54ನೇ ಸಾಲಿನ ಅಂತಾರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್ ಗೋವಾದಲ್ಲಿ ಆರಂಭ ಆಗಿದೆ. ಸೋಮವಾರ ಪಣಜಿಯಲ್ಲಿರುವ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸಿನಿಮೋತ್ಸವಕ್ಕೆ ಚಾಲನೆ ದೊರೆಯಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು 9 ದಿನಗಳ ಸಿನಿಮೋತ್ಸವಕ್ಕೆ ಚಾಲನೆ ನೀಡಿದರು. ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಸಹಾಯಕ ಸಚಿವ ಡಾಕ್ಟರ್ ಎಲ್​. ಮುರುಗನ್, ನಟ ಹಾಗೂ ಸಂಸದ ಸನ್ನಿ ಡಿಯೋಲ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
07:58 PM Nov 21, 2023 IST | Umesha HS
ಗೋವಾದಲ್ಲಿ 54 ನೇ ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ ಗೆ ಚಾಲನೆ

ಗೋವಾ: 54ನೇ ಸಾಲಿನ ಅಂತಾರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್ ಗೋವಾದಲ್ಲಿ ಆರಂಭ ಆಗಿದೆ. ಸೋಮವಾರ ಪಣಜಿಯಲ್ಲಿರುವ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸಿನಿಮೋತ್ಸವಕ್ಕೆ ಚಾಲನೆ ದೊರೆಯಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು 9 ದಿನಗಳ ಸಿನಿಮೋತ್ಸವಕ್ಕೆ ಚಾಲನೆ ನೀಡಿದರು. ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್,  ಸಚಿವ ಡಾಕ್ಟರ್ ಎಲ್​. ಮುರುಗನ್, ನಟ ಹಾಗೂ ಸಂಸದ ಸನ್ನಿ ಡಿಯೋಲ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

Advertisement

‘54ನೇ ಫಿಲ್ಮ್​ ಫೆಸ್ಟಿವಲ್ ವೈವಿಧ್ಯ ಧ್ವನಿ, ಹಲವು ಸಂಸ್ಕೃತಿ, ವೈವಿಧ್ಯತೆ ಮತ್ತು ಸಂಪೂರ್ಣ ಸಿನಿಮೀಯ ಶ್ರೇಷ್ಠತೆಯ ಸಮ್ಮಿಳನವಾಗಿದೆ. ಈ ವರ್ಷ 270 ಸಿನಿಮಾಗಳು ಪ್ರದರ್ಶನ ಆಗಲಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಸಿನಿಮಾ ಸಂಖ್ಯೆ ಹೆಚ್ಚಿಸಲಾಗಿದೆ’ ಎಂದು ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಭಾರತದಲ್ಲಿ ನಿರ್ಮಾಣ ಆಗುವ ವಿದೇಶಿ ಸಿನಿಮಾಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ ಅನುರಾಗ್ ಸಿಂಗ್ ಠಾಕೂರ್. ‘ಭಾರತದಲ್ಲಿ ವಿದೇಶಿ ಭಾಷೆಯ ಸಿನಿಮಾ ನಿರ್ಮಾಣ ಮಾಡಿದರೆ ಒಟ್ಟು ಬಜೆಟ್​ನ ಶೇ.40 ಹಣವನ್ನು ಸರ್ಕಾರ ಮರುಪಾವತಿ ಮಾಡಲಿದೆ. ಇದರ ಗರಿಷ್ಟ ಮಿತಿ 30 ಕೋಟಿ ರೂಪಾಯಿ ಆಗಿದೆ. ಈ ಮೊದಲು ಇದರ ಮಿತಿ 2.5 ಕೋಟಿ ರೂಪಾಯಿ ಇತ್ತು’ ಎಂದು ಅನುರಾಗ್ ಸಿಂಗ್ ಹೇಳಿದ್ದಾರೆ.

Advertisement

Advertisement
Tags :
Advertisement