For the best experience, open
https://m.newskannada.com
on your mobile browser.
Advertisement

6 ವರ್ಷದ ಬಾಲಕಿ‌ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

6 ವರ್ಷದ ಬಾಲಕಿ‌ ಮೇಲೆ  ಅತ್ಯಾಚಾರವೆಸಗಿದ ಪೈಶಾಚಿಕ ಕೃತ್ಯ ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿಯಲ್ಲಿ  ನಡೆದಿದೆ.
01:27 PM Apr 22, 2024 IST | Ashika S
6 ವರ್ಷದ ಬಾಲಕಿ‌ ಮೇಲೆ ಅತ್ಯಾಚಾರ  ಆರೋಪಿಯ ಬಂಧನ

ಬೆಂಗಳೂರು:  6 ವರ್ಷದ ಬಾಲಕಿ‌ ಮೇಲೆ  ಅತ್ಯಾಚಾರವೆಸಗಿದ ಪೈಶಾಚಿಕ ಕೃತ್ಯ ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿಯಲ್ಲಿ  ನಡೆದಿದೆ.

Advertisement

ಪಶ್ಚಿಮ ಬಂಗಾಳ‌ ಮೂಲದ ಮಮಜನ್ ಎಂಬಾತನಿಂದ ಈ ಕೃತ್ಯ ನಡೆದಿದೆ.

ಸಂತ್ರಸ್ತ ಬಾಲಕಿ‌ ಕುಟುಂಬ ಹಾಗೂ ಆರೋಪಿ ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ಬಾಲಕಿ ತಂದೆ ಹಾಲು ತರಲು ಹೊರಗೆ ಹೋಗಿದ್ದರು. ಈ ವೇಳೆ ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಯಾರು ಇಲ್ಲದಿರುವುದು ತಿಳಿಯುತ್ತಿದ್ದಂತೆ ಮಮಜನ್‌ ಮನೆಯೊಳಗೆ ನುಗ್ಗಿ ಬಾಲಕಿ‌ ಮೇಲೆ ಲೈಂಗಿಕ‌ ದೌರ್ಜನ್ಯವೆಸಗಿದ್ದಾನೆ.

Advertisement

ಪೋಷಕರು ಮನೆಗೆ ವಾಪಸ್‌ ಬಂದಾಗ  ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಕಂಡು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಗ ಕೃತ್ಯ ಬೆಳಕಿಗೆ ಬಂದಿದೆ.

ಕೂಡಲೇ ಸಂತ್ರಸ್ತೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Advertisement
Tags :
Advertisement