ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಮಮಂದಿರ ಉದ್ಘಾಟನೆ; ನಾಗರೀಕ ಸಮಿತಿಯಿಂದ 8 ಸಾವಿರ ಜಿಲೇಬಿ ವಿತರಣೆ

ಅಯೋಧ್ಯೆಯ ಭಗವಾನ್ ಶ್ರೀ ರಾಮಲಲ್ಲಾ ದಿವ್ಯಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಸಿಟಿ ಬಸ್ಸು ನಿಲ್ದಾಣದ ಸನಿಹದ ಅಶ್ವತ್ಥಕಟ್ಟೆಯ ಬಳಿ ಜಿಲೇಬಿ ವಿತರಣಾ ಕಾರ್ಯಕ್ರಮವು ವಿಜ್ರಂಭಣೆಯಿಂದ ಜರುಗಿತು.
10:59 AM Jan 23, 2024 IST | Ramya Bolantoor

ಉಡುಪಿ: ಅಯೋಧ್ಯೆಯ ಭಗವಾನ್ ಶ್ರೀ ರಾಮಲಲ್ಲಾ ದಿವ್ಯಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಸಿಟಿ ಬಸ್ಸು ನಿಲ್ದಾಣದ ಸನಿಹದ ಅಶ್ವತ್ಥಕಟ್ಟೆಯ ಬಳಿ ಜಿಲೇಬಿ ವಿತರಣಾ ಕಾರ್ಯಕ್ರಮವು ವಿಜ್ರಂಭಣೆಯಿಂದ ಜರುಗಿತು. ಜಹಾಗೀರ್ ಭಟ್ ಉಡುಪಿ ಸ್ವೀಟ್ ಹೌಸಿನ ನುರಿತ ಸಿಹಿಖಾದ್ಯ ತಜ್ಞರು 8 ಸಾವಿರ ಜೀಲೆಬಿಗಳನ್ನು ಸ್ಥಳದಲ್ಲಿಯೇ ತಯಾರಿಸಿದ್ದರು. ಮತ್ತು ವೇದಾಂತ ಹೋಟೆಲಿನ ಮಾಲಿಕರು ಬೇಕಾದ ಪರಿಕರಗಳನ್ನು ನೀಡಿ ಸಹಕಾರ ನೀಡಿದ್ದರು. ಸಾರ್ವಜನಿಕರಿಗೆ ಬಿಸಿ ಬಿಸಿಯಾದ ಜಿಲೇಬಿಗಳನ್ನು ನಾಗರಿಕ ಸಮಿತಿಯ ಕಾರ್ಯಕರ್ತರು ಹಾಗೂ ಚಿಟ್ಪಾಡಿ ಚಂಡೆ ಬಳಗದ ಸದಸ್ಯರು ವಿತರಿಸಿದರು.

Advertisement

ಜಿಲೇಬಿ ವಿತರಣೆಗೆ ಉದ್ಯಮಿ ಉದಯ ಕುಮಾರ ಚಾಲನೆ ನೀಡಿದ್ದರು. ನಾಗರಿಕ ಸಮಿತಿಯ ಕಾರ್ಯಕರ್ತರಾದ ಕೆ ಬಾಲಗಂಗಾಧರ ರಾವ್, ತಾರಾನಾಥ ಮೇಸ್ತ ಶಿರೂರು, ಅನುಷಾ ದೇವಾಡಿಗ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement
Tags :
LatestNewsNewsKannadaಉಡುಪಿ
Advertisement
Next Article