For the best experience, open
https://m.newskannada.com
on your mobile browser.
Advertisement

ಬಿಗ್‌ಬಾಸ್‌ 16 ಸ್ಪರ್ಧಿ ʼಅಬ್ದು ರೋಝಿಕ್‌ʼಗೆ ಮದುವೆಯಂತೆ

ಬಿಗ್‌ಬಾಸ್‌ 16ನಲ್ಲಿ ಸ್ಪರ್ಧಿಸಿದ್ದ ಅಬ್ದು ರೋಝಿಕ್‌ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾನೀಗ ಪ್ರೀತಿಗೆ ಬಿದ್ದಿದ್ದು, ಜುಲೈ 7ರಂದು ಮನಮೆಚ್ಚಿದ ಹುಡುಗಿ ಜತೆ ವಿವಾಹವಾಗುತ್ತಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.
04:37 PM May 10, 2024 IST | Ashitha S
ಬಿಗ್‌ಬಾಸ್‌ 16 ಸ್ಪರ್ಧಿ ʼಅಬ್ದು ರೋಝಿಕ್‌ʼಗೆ ಮದುವೆಯಂತೆ

ಮುಂಬೈ: ಬಿಗ್‌ಬಾಸ್‌ 16ನಲ್ಲಿ ಸ್ಪರ್ಧಿಸಿದ್ದ ಅಬ್ದು ರೋಝಿಕ್‌ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾನೀಗ ಪ್ರೀತಿಗೆ ಬಿದ್ದಿದ್ದು, ಜುಲೈ 7ರಂದು ಮನಮೆಚ್ಚಿದ ಹುಡುಗಿ ಜತೆ ವಿವಾಹವಾಗುತ್ತಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement

ಈ ವಿಡಿಯೋದಲ್ಲಿ ತನ್ನ ಮದುವೆ ನಿಶ್ಚಿತಾರ್ಥದ ಉಂಗುರವನ್ನೂ ತೋರಿಸಿದ್ದಾರೆ. ಬಿಳಿ ಅಂಗಿ, ಕಪ್ಪು ಬ್ಲೇಜರ್‌ ಮತ್ತು ಅದಕ್ಕೆ ಮ್ಯಾಚಿಂಗ್‌ ಆಗುವ ಪ್ಯಾಂಟ್‌ ಧರಿಸಿ ಕ್ಯಾಮೆರಾದ ಮುಂದೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ʼಸ್ನೇಹಿತರೆ ನನಗೆ ಈಗ 20 ವರ್ಷ ಎಂದು ನಿಮಗೆ ತಿಳಿದಿದೆ. ನನ್ನನ್ನು ಗೌರವದಿಂದ ಕಾಣುವ, ನನ್ನನ್ನು ತುಂಬಾ ಪ್ರೀತಿಸುವ ಹುಡುಗಿಯನ್ನು ಪ್ರೀತಿಸಬೇಕೆಂದು ಕನಸು ಕಂಡಿದ್ದೆ. ಇದೀಗ ಆ ಹುಡುಗಿ ನನಗೆ ದೊರಕಿದ್ದಾಳೆ. ಆಕೆ ನನ್ನನ್ನು ತುಂಬಾ ಗೌರವಿಸುತ್ತಾಳೆ. ನನ್ನನ್ನು ತುಂಬಾ ಲವ್‌ ಮಾಡ್ತಾಳೆ. ನನಗೆ ತುಂಬಾ ಖುಷಿಯಾಗಿದೆ" ಎಂದು ಹೇಳಿದ ಅಬ್ದು ಉಂಗುರದ ಪೆಟ್ಟಿಗೆಯೊಳಗಿನ ಉಂಗುರ ತೋರಿಸಿದ್ದಾರೆ.

Advertisement

ಅಬ್ದು ಈ ವಿಡಿಯೋಗೆ ಹೀಗೆ ಕ್ಯಾಪ್ಷನ್‌ ಬರೆದಿದ್ದಾರೆ. "ನನ್ನ ಜೀವನದಲ್ಲಿ ಇಂತಹ ಸುಂದರವಾದ ದಿನ ಇಷ್ಟು ಬೇಗ ಬರುತ್ತದೆ ಎಂದು ಭಾವಿಸಿರಲಿಲ್ಲ. ಜುಲೈ 7ರಂದು ನನ್ನ ಮದುವೆ, ಈ ದಿನ ನೆನಪಿಟ್ಟುಕೊಳ್ಳಿ" ಎಂದು ಅವರು ಬರೆದುಕೊಂಡಿದ್ದಾರೆ

Advertisement
Tags :
Advertisement