For the best experience, open
https://m.newskannada.com
on your mobile browser.
Advertisement

"ಬಿಗ್‌ಬಾಸ್ ಶೃತಿ.. ಮೀಟೂ ಶೃತಿ" ಎನ್ನುತ ಸಂಕಷ್ಟಕ್ಕೆ ಸಿಲುಕಿದರೇ ಜಗ್ಗೇಶ್‌ ?

'ರಂಗನಾಯಕ' ಎನ್ನುವ ಕನ್ನಡದ ಹೊಸ ಸಿನಿಮಾದಲ್ಲಿ ಮಠ ಡೈರೆಕ್ಟರ್​ ಗುರುಪ್ರಸಾದ್​ ಹಾಗೂ ಜಗ್ಗೇಶ್ ಜೋಡಿ ಬ್ಯುಸಿಯಾಗಿದೆ. ಇದರ ಮಧ್ಯೆ ಇದೇ ಸಿನಿಮಾದ ಸಾಂಗ್ ಹೊಸ ವಿವಾದದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ರಂಗನಾಯಕ ಸಿನಿಮಾದಲ್ಲಿ ಬರೋ ಗಾಳಿ ತಂಗಾಳಿ ಕನ್ನಡ ಮಾತಾಡೋ ಎಂಬ ಮೊದಲ ಹಾಡು ಬಿಡುಗಡೆ ಆಗಿದ್ದು ವಿವಾದದ ಬಿರುಗಾಳಿ ಸೃಷ್ಟಿಸಿದೆ.
05:41 PM Feb 02, 2024 IST | Ashitha S
 ಬಿಗ್‌ಬಾಸ್ ಶೃತಿ   ಮೀಟೂ ಶೃತಿ  ಎನ್ನುತ ಸಂಕಷ್ಟಕ್ಕೆ ಸಿಲುಕಿದರೇ ಜಗ್ಗೇಶ್‌

ಬೆಂಗಳೂರು: "ರಂಗನಾಯಕ" ಎನ್ನುವ ಕನ್ನಡದ ಹೊಸ ಸಿನಿಮಾದಲ್ಲಿ ಮಠ ಡೈರೆಕ್ಟರ್​ ಗುರುಪ್ರಸಾದ್​ ಹಾಗೂ ಜಗ್ಗೇಶ್ ಜೋಡಿ ಬ್ಯುಸಿಯಾಗಿದೆ. ಇದರ ಮಧ್ಯೆ ಇದೇ ಸಿನಿಮಾದ ಸಾಂಗ್ ಹೊಸ ವಿವಾದದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ರಂಗನಾಯಕ ಸಿನಿಮಾದಲ್ಲಿ ಬರೋ ಗಾಳಿ ತಂಗಾಳಿ ಕನ್ನಡ ಮಾತಾಡೋ ಎಂಬ ಮೊದಲ ಹಾಡು ಬಿಡುಗಡೆ ಆಗಿದ್ದು ವಿವಾದದ ಬಿರುಗಾಳಿ ಸೃಷ್ಟಿಸಿದೆ.

Advertisement

ಈ ಹಾಡಿನಲ್ಲಿ ನಟ ಜಗ್ಗೇಶ್ ಬಾಯಲ್ಲಿ ಬಿಗ್ ಬಾಸ್ ಶೃತಿ ಮಿಟೋ ಶೃತಿ ಎಂದು ಹೇಳಿದ್ದಾರೆ. ಇದೀಗ ಆ ಹಾಡಿನ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಕಾಂಟ್ರವರ್ಸಿ​ ಆಗುತ್ತಿದೆ.

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿರ್ದೇಶಕ ಗುರುಪ್ರಸಾದ್, ಶೃತಿ ಅನ್ನೋದು ಸಂಗೀತ ಭಾಷೆ ಅದ್ರು ನಾನು ಬೇಕಂತ ಆ ಸಾಹಿತ್ಯ ಬರೆದಿದ್ದೀನಿ. ಶೃತಿ ಹರಿಹರನ್ ಕನ್ನಡದವರಲ್ಲ ಎಲ್ಲಿಂದಲೋ ಬಂದು ಇಲ್ಲಿ ಗಬ್ಬೆಬ್ಬಿಸಿದ್ರು. ನಾನು ಪತಿವ್ರತೆ ಅಂತ ಫ್ರೂ ಮಾಡೋಕೆ ಆಯಮ್ಮ ಹೊರಟಿದ್ರು. ಮೀಟೂನೂ ಇಲ್ಲ ಯಾವುದೂ ಇಲ್ಲ ಸ್ವಾಮಿ. ಅಷ್ಟಕ್ಕೂ ಕಿರುಕುಳ ಆದಾಗ ದೂರು ನೀಡಬೇಕಿತ್ತು. ಆರು ವರ್ಷಗಳ ನಂತರ ಬಂದು ದೂರು ನೀಡಿದ್ರೆ ಏನ್ ಪ್ರಯೋಜನ.

Advertisement

ಕೈ ಚೀಲ ಕಳ್ಕೊಂಡಾಗ ಕಂಪ್ಲೇಂಟ್ ಕೊಡೋದು ತಡವಾಗಿ ಕೊಟ್ರೆ ಏನ್ ಯೂಸ್. ಇದು ಚೀಲದ ವಿಚಾರ ಅಲ್ಲ ಶೀಲದ ವಿಚಾರ ಅಂತ ಶೃತಿ ಹರಿಹರನ್ ವಿರುದ್ಧ ಗುರುಪ್ರಸಾದ್ ಗುಡುಗಿದ್ದಾರೆ.

Advertisement
Tags :
Advertisement