For the best experience, open
https://m.newskannada.com
on your mobile browser.
Advertisement

ಖ್ಯಾತ ತಮಿಳು ಚಲನಚಿತ್ರ ನಟ, ರಾಜಕಾರಣಿ ನಿಧನ

ಖ್ಯಾತ ತಮಿಳು ಚಲನಚಿತ್ರ ನಟ, ರಾಜಕಾರಣಿ ಅರುಳ್‌ಮಣಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 65 ವರ್ಷದ ನಟ ಕಮ್​​ ರಾಜಕಾರಣಿ ಅವರು ಬಿಸಿಲಿನ ತಾಪಕ್ಕೆ ಏಕಾಏಕಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.
08:09 PM Apr 12, 2024 IST | Ashitha S
ಖ್ಯಾತ ತಮಿಳು ಚಲನಚಿತ್ರ ನಟ  ರಾಜಕಾರಣಿ ನಿಧನ

ಚೆನ್ನೈ: ಖ್ಯಾತ ತಮಿಳು ಚಲನಚಿತ್ರ ನಟ, ರಾಜಕಾರಣಿ ಅರುಳ್‌ಮಣಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 65 ವರ್ಷದ ನಟ ಕಮ್​​ ರಾಜಕಾರಣಿ ಅವರು ಬಿಸಿಲಿನ ತಾಪಕ್ಕೆ ಏಕಾಏಕಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.

Advertisement

ಕಳೆದ ಹತ್ತು ದಿನಗಳಿಂದ ಅರುಳ್‌ಮಣಿಯವರು ಎಐಎಡಿಎಂಕೆ ಪರವಾಗಿ ಪ್ರಚಾರ ನಡೆಸುತ್ತಿದ್ದರು. ಬಿಸಿಲಿನ ತೀವ್ರ ತಾಪಕ್ಕೆ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.

ಇನ್ನು, ಖ್ಯಾತ​ ನಟನ ದಿಢೀರ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸಿಂಗಂ 2, ಲಿಂಗಾ, ತೆಂಡ್ರಾಲ್ ಸೇರಿದಂತೆ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.

Advertisement

Advertisement
Tags :
Advertisement