ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಾಲ್ಡೀವ್ಸ್ ಫೋಟೋ ಹಾಕಿ ನೆಟ್ಟಿಗರಿಗೆ ಆಹಾರವಾದ ಬಿಪಾಶಾ ಬಸು

ಮಾಲ್ಡೀವ್ಸ್‌ನ ಕೆಲವು ಸಚಿವರು ಲಕ್ಷದ್ವೀಪ ದ್ವೀಪಗಳ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಪ್ರಧಾನಿ ಮೋದಿ ಮತ್ತು ಭಾರತೀಯ ಸೆಲಬ್ರಿಟಿಗಳ ಮೇಲೆ ದ್ವೇಷಪೂರಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. 
02:55 PM Jan 09, 2024 IST | Ashitha S

ಮುಂಬೈ: ಮಾಲ್ಡೀವ್ಸ್‌ನ ಕೆಲವು ಸಚಿವರು ಲಕ್ಷದ್ವೀಪ ದ್ವೀಪಗಳ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಪ್ರಧಾನಿ ಮೋದಿ ಮತ್ತು ಭಾರತೀಯ ಸೆಲಬ್ರಿಟಿಗಳ ಮೇಲೆ ದ್ವೇಷಪೂರಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು.

Advertisement

ಇದಾದ ನಂತರ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಮಾಲ್ಡೀವ್ಸ್ ಖ್ಯಾತೆ ತೆಗೆದಿದೆ. ಈ ವಿವಾದ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಹೀಗಾಗಿ ಬಾಲಿವುಡ್ ಸೆಲೆಬ್ರೆಟಿಗಳು, ಕ್ರಿಕೆಟಿಗರು ಹಾಗೂ ಬಹುತೇಕ ಭಾರತೀಯರು ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಕರೆ ನೀಡಿದ್ದಾರೆ. ಆನೇಕರು ಮಾಲ್ಡೀವ್ಸ್‌ ಬಾಯ್ಕಟ್‌ ಟ್ರೆಂಡ್‌ ಗೆ ಸಪೋರ್ಟ್‌ ಮಾಡಿದ್ದಾರೆ. ಇದರ ನಡುವೆ ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಇದರಿಂದ ಟ್ರೋಲರ್‌ಗಳಿಗೆ ಸಕತ್ ಕಂಟೆಂಟ್ ನೀಡುತ್ತಿದ್ದಾರೆ. ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ತನ್ನ ಪತಿ ಕರಣ್ ಸಿಂಗ್ ಗ್ರೋವರ್ ಮತ್ತು ಮಗಳು ದೇವಿ ಜೊತೆಗೆ ಜನವರಿ 7 ರಂದು ತನ್ನ 45 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಾಲ್ಡೀವ್ಸ್ ಬೀಚ್‌ಗಳಲ್ಲಿ ಸಕತ್ ಏಂಜಾಯ್ ಮಾಡುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Advertisement

ಈ ವಿಡಿಯೋ ಮತ್ತು ಫೋಟೋಗಳಿಗೆ ನೆಟಿಜನ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಲ್ಡಿವ್ಸ್ ಸಚಿವರು ಪ್ರಧಾನಿ ಮೋದಿ ಮತ್ತು ಭಾರತಕ್ಕೆ ಮಾಡಿದ ಅವಮಾನದ ನಂತರವೂ ತಮ್ಮ ಪ್ರವಾಸಕ್ಕೆ ಮಾಲ್ಡೀವ್ಸ್ ಅನ್ನು ಆಯ್ಕೆ ಮಾಡಿದ್ದಕ್ಕಾಗಿ ನಟಿಯನ್ನು ಟ್ರೋಲ್ ಮಾಡಿದ್ದಾರೆ.

ಇಂಟರ್‌ನೆಟ್ ಬಳಕೆದಾರರು, "ದಯವಿಟ್ಟು ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಿ. ತಿಳುವಳಿಕೆಯುಳ್ಳ ನಾಗರಿಕರಾಗಿರಿ ಮತ್ತು ನಿಮ್ಮ ಸ್ವಂತ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಿ" ಎಂದು ಕಾಮೆಂಟ್ ಮಾಡಿದ್ದಾರೆ.

Advertisement
Tags :
LatestNewsNewsKannadaನವದೆಹಲಿಬಾಲಿವುಡ್ಬಿಪಾಶಾ ಬಸುಮಾಲ್ಡೀವ್ಸ್ಲಕ್ಷದ್ವೀಪ
Advertisement
Next Article