For the best experience, open
https://m.newskannada.com
on your mobile browser.
Advertisement

ಧ್ರುವ ಸರ್ಜಾ ನಿವಾಸದಲ್ಲಿ ಅಶ್ವಗ್ರೀವ ಚಿತ್ರದ ಶೀರ್ಷಿಕೆ ಅನಾವರಣ

ಧ್ರುವ ಸರ್ಜಾ ನಿವಾಸದಲ್ಲಿ ಅಶ್ವಗ್ರೀವ ಶೀರ್ಷಿಕೆ ಅನಾವರಣ
02:15 PM May 13, 2024 IST | Chaitra Kulal
ಧ್ರುವ ಸರ್ಜಾ ನಿವಾಸದಲ್ಲಿ ಅಶ್ವಗ್ರೀವ ಚಿತ್ರದ ಶೀರ್ಷಿಕೆ ಅನಾವರಣ

ಹೊಸಬರ ತಂಡವೊಂದು ನಿನ್ನೆ ತಮ್ಮ ಹೊಸ ಚಿತ್ರ ಅಶ್ವಗ್ರೀವದ ಶೀರ್ಷಿಕೆ ಅನಾವರಣವನ್ನು ಶ್ರೀ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರವರ ನಿವಾಸದಲ್ಲಿ ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು.

Advertisement

ಇದು ನೃತ್ಯ ನಿರ್ದೇಶಕರಾದ ನಾಗಭೂಷಣ್(CTA) ರವರ ಚೊಚ್ಚಲ ನಿರ್ದೇಶನವಾಗಿದ್ದು, ಜೊತೆಯಲ್ಲಿ ನಾಯಕ ನಟನಾಗಿಯೂ ಪ್ರದಾರ್ಪಣೆ ಮಾಡುತ್ತಿದ್ದಾರೆ, ಚಿತ್ರದಲ್ಲಿ ಮತೊಬ್ಬ ಉದಯೋನ್ಮುಖ ಹಿಂದಿ ಕಿರುತೆರೆಯಲ್ಲಿ ಹಾಗೂ ಸಾಕಷ್ಟು ಕನ್ನಡದ ಕಿರುತೆರೆಯಲ್ಲೂ ತಮ್ಮ ನಟನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ, ಅಭಿಜಿತ್ ಸಿಂಗ್ ರವರೂ ಸಹ ನಾಯಕ ನಟನಾಗಿ ಚೊಚ್ಚಲ ಚಿತ್ರಕ್ಕಾಗಿ ಪಾದರ್ಪಣೆ ಮಾಡುತ್ತಿದ್ದಾರೆ.

ಚಿತ್ರಕ್ಕೆ ಅಯಾಂಕ್ ರವರ ಛಾಯಾಗ್ರಾಹಣ, ಸುಪ್ರೀತ್ ಫಲ್ಘುಣ, ಎ. ಟಿ ರವೀಶ್ ಸಂಗೀತ, ಸಚಿನ್ ಬಾಡ ರವರ ಸಾಹಿತ್ಯದ ಜೊತೆಗೆ ವಿನಯ್ ಕೊಪ್ಪರವರ ಸಂಭಾಷಣೆ, ಸಂಕಲನಕಾರರಾಗಿ ಪ್ರವೀಣ್ ರಾಜ್ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂಡ ಹೊಸತೇ ಆದರೂ ಅನುಭವಉಳ್ಳವರ ಹಾಗೇ ಶೀರ್ಷಿಕೆ ಅದ್ಭುತವಾಗಿ ಮೂಡಿ ಬಂದಿದೆ. ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಹೆಸರಾಂತ ಕಲಾವಿದರು ಸಾಥ್ ನೀಡುವ ಭರವಸೆಯನ್ನು ಚಿತ್ರತಂಡ ತಿಳಿಸಿದೆ.

Advertisement

Advertisement
Tags :
Advertisement