ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಟಿ ರೂಪಾ ಅಯ್ಯರ್‌ ಗೆ ಆನ್ ಲೈನ್ ನಲ್ಲಿ ವಂಚನೆ: ಹಣ ದೋಚೋಕೆ ಟ್ರೈ ಮಾಡಿದ ಕಳ್ಳರು

ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್ ಮಾಡಿದ್ದಾರೆ. 
07:16 PM May 10, 2024 IST | Ashika S

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್ ಮಾಡಿದ್ದಾರೆ.

Advertisement

ಕಳೆದ 2 ದಿನದ ಹಿಂದಷ್ಟೇ ನಾವು ಸಿಸಿಬಿ ಅಧಿಕಾರಿಗಳು ಎಂದು ಹೇಳಿ ರೂಪಾ ಅವರಿಗೆ ಕರೆ ಮಾಡಿದ್ದಾರೆ. ನಂತರ ಮಾತನಾಡುತ್ತಾ ಮನಿ ಲ್ಯಾಂಡ್ರಿಂಗ್‌ನಲ್ಲಿ ನಿಮ್ಮ ಫೋನ್ ನಂಬರ್‌, ಹೆಸರು ಕೇಳಿ ಬರುತ್ತಿದೆ ಎಂದು ಹೇಳಿದ್ದಾರೆ.

ರೂಪಾ ಅಯ್ಯರ್‌ ಅವರನ್ನು ಬೆದರಿಸಿರುವ ಸೈಬರ್ ಕಳ್ಳರು, ವಿಡಿಯೋ ಕಾಲ್ ಮಾಡಿ ಹಣ ದೋಚೋಕೆ ಮುಂದಾಗಿದ್ದಾರೆ. ಮುಂಬೈ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿದ್ದೇವೆ ಎನ್ನುತ್ತಾ 24 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. 24 ಗಂಟೆಗಳ ಕಾಲ ವಿಡಿಯೋ ಕಾಲ್‌ನಲ್ಲೇ ಇದ್ದು ಮನೆಯಿಂದ ಹೊರಗೆ ಬರದಂತೆ ತಡೆ ಹಿಡಿದಿದ್ದಾರೆ.

Advertisement

ನರೇಶ್ ಗೋಯಲ್ ಮನಿ ಲ್ಯಾಂಡ್ರಿಂಗ್ ಕೇಸ್‌ನಲ್ಲಿ ನಿಮ್ಮ ಹೆಸರು ಕೇಳಿದೆ. ದೇಶದಲ್ಲಿ 247 ಜನರನ್ನು ಗುರುತಿಸಲಾಗಿದೆ. ನಿಮ್ಮ ಸಿಮ್ ಬಳಸಿ ದೇಶದ್ರೋಹಿ ದಂಧೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ವಿಡಿಯೋ ಕಾಲ್‌ನಲ್ಲಿ ಕಾಟ ಕೊಟ್ಟ ಫೇಕ್ ಅಧಿಕಾರಿಗಳು ರೂಪಾ ಅಯ್ಯರ್‌ಗೆ 30 ಲಕ್ಷ ರೂಪಾಯಿ ನೀಡುವಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ನಂತರ ಎಚ್ಚೆತ್ತುಕೊಂಡ ರೂಪಾ ಅಯ್ಯರ್ ಅವರು ಇದು ಫೇಕ್ ಅಂತ ತಿಳಿದು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

Advertisement
Tags :
bengaluruLatestNewsMoneyNewsKarnatakaRoopa Iyer
Advertisement
Next Article