For the best experience, open
https://m.newskannada.com
on your mobile browser.
Advertisement

ಇಂದು ಸರ್ವಶ್ರೇಷ್ಠ ನಟಿಯ ಪುಣ್ಯಸ್ಮರಣೆ: ಸಾಯುವ ಸಮಯದಲ್ಲಿ ಗರ್ಭಿಣಿಯಾಗಿದ್ದ ಸೌಂದರ್ಯ

2004 ಏಪ್ರಿಲ್ 17.. ಅಂದರೆ ಇವತ್ತಿಗೆ ಬರೋಬ್ಬರಿ 20 ವರ್ಷಗಳ ಹಿಂದೆ. ಚಿತ್ರರಂಗದ ಪಾಲಿಗೆ ಕರಾಳ ದಿನ. ಭಾರತೀಯ ಚಿತ್ರರಂಗ ಕಂಡ ಟ್ಯಾಲೆಂಟೆಡ್‌ ನಟಿ ಸೌಂದರ್ಯ ದುರಂತ ಸಾವು ಕಂಡ ದಿನವಿದು. ತೆಲಂಗಾಣದ ಕರೀಂನಗರಕ್ಕೆ ಚುನಾವಣಾ ಪ್ರಚಾರಕ್ಕೆಂದು ಸೌಂದರ್ಯ ಅವರು ತಮ್ಮ ಸಹೋದರ ಅಮರನಾಥರೊಂದಿಗೆ ಬೆಂಗಳೂರಿನ ಮನೆಯಿಂದ ಹೊರಟಾಗ ವಿಮಾನ ದುರಂತ ಸಂಭವಿಸಿ ಮೃತಪಟ್ಟರು.
01:37 PM Apr 17, 2024 IST | Ashitha S
ಇಂದು ಸರ್ವಶ್ರೇಷ್ಠ ನಟಿಯ ಪುಣ್ಯಸ್ಮರಣೆ  ಸಾಯುವ ಸಮಯದಲ್ಲಿ ಗರ್ಭಿಣಿಯಾಗಿದ್ದ ಸೌಂದರ್ಯ

ಬೆಂಗಳೂರು: 2004 ಏಪ್ರಿಲ್ 17.. ಅಂದರೆ ಇವತ್ತಿಗೆ ಬರೋಬ್ಬರಿ 20 ವರ್ಷಗಳ ಹಿಂದೆ. ಚಿತ್ರರಂಗದ ಪಾಲಿಗೆ ಕರಾಳ ದಿನ. ಭಾರತೀಯ ಚಿತ್ರರಂಗ ಕಂಡ ಟ್ಯಾಲೆಂಟೆಡ್‌ ನಟಿ ಸೌಂದರ್ಯ ದುರಂತ ಸಾವು ಕಂಡ ದಿನವಿದು. ತೆಲಂಗಾಣದ ಕರೀಂನಗರಕ್ಕೆ ಚುನಾವಣಾ ಪ್ರಚಾರಕ್ಕೆಂದು ಸೌಂದರ್ಯ ಅವರು ತಮ್ಮ ಸಹೋದರ ಅಮರನಾಥರೊಂದಿಗೆ ಬೆಂಗಳೂರಿನ ಮನೆಯಿಂದ ಹೊರಟಾಗ ವಿಮಾನ ದುರಂತ ಸಂಭವಿಸಿ ಮೃತಪಟ್ಟರು.

Advertisement

ಆ ಸಂದರ್ಭದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದರು ಈಕೆ, ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೋದರು. ಇದು ಅವರ ಅಭಿಮಾನಿಗಳಿಗೂ ಕರಾಳ ದಿನ. ಹೆಸರಿಗೆ ತಕ್ಕಂತೆ ಸೌಂದರ್ಯದ ಘನಿಯಾಗಿದ್ದ ನಟಿ, ಅದ್ಭುತ ನಟನೆಗೆ ಹೆಸರುವಾಸಿಯಾದವರು.

ಈ ಅಪಘಾತದ ಒಂದು ದಿನದ ಮೊದಲು ಸೌಂದರ್ಯ ಅವರು ತಮಿಳು ನಿರ್ದೇಶಕ ಆರ್‌ವಿ ಉದಯಕುಮಾರ್ ಅವರೊಂದಿಗೆ ಒಂದು ಗಂಟೆ ಕಾಲ ಕರೆ ಮಾಡಿ ಮಾತನ್ನಾಡಿದರು. ಸೌಂದರ್ಯ ಅವರಿಗೆ ಒಳ್ಳೆಯ ಸುದ್ದಿಯನ್ನು ನೀಡುತ್ತಾ, ತಾನು ತಾಯಿಯಾಗಲಿದ್ದೇನೆ ಮತ್ತು ಈಗ ಚಿತ್ರರಂಗದಿಂದ ಹೊರಬರಲು ಬಯಸುತ್ತೇನೆ ಎಂದು ಹೇಳಿದ್ದರಂತೆ ಹೇಳಲಾಗಿದೆ.

Advertisement

100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಮುಂಚೂಣಿಯಲ್ಲಿದ್ದ ಕಲಾವಿದೆ. ಸೌಂದರ್ಯ ಎಂದಾಕ್ಷಣ ನೆನಪಾಗುವುದು ಆಪ್ತಮಿತ್ರ ಚಿತ್ರ. ವಿಭಜಿತ ವ್ಯಕ್ತಿತ್ವ ನಟನೆಯಿಂದ ಮೋಡಿ ಮಾಡಿದ ಸೌಂದರ್ಯ 31ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ಕಲಾವಿದೆ. ಈ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು, ಈಕೆಯ ಮರಣದ ನಂತರ ಬಹಿರಂಗಗೊಂಡಿತ್ತು. ಅಂಥ ವ್ಯಕ್ತಿತ್ವ ಈಕೆಯದ್ದು.

ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಬಿಟ್ಟುಹೋದ ಸೌಂದರ್ಯ ಕುರಿತು ಅವರ ಸ್ನೇಹಿತೆ ಆಗಿದ್ದ ನಟಿ ಪ್ರೇಮಾ ಈ ಸಂದರ್ಭದಲ್ಲಿ ಅಂದಿನ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅವರ 19ನೇ ಪುಣ್ಯತಿಥಿ ಸಂದರ್ಭದಲ್ಲಿ, ಪ್ರೇಮಾ ಅವರ ಈ ಸಂದರ್ಶನ ವೈರಲ್​ ಆಗುತ್ತಿದೆ. ಅಂದಹಾಗೆ, ಪ್ರೇಮಾ ಅವರು ಸೌಂದರ್ಯ ಜೊತೆ ನಾನು ನನ್ನ ಹೆಂಡ್ತೀರು, ಆಪ್ತಮಿತ್ರ ಕನ್ನಡ ಚಿತ್ರ ಸೇರಿದಂತೆ ನಾಲ್ಕು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ, ಇನ್ನೆರಡು ತೆಲುಗು ಚಿತ್ರ. ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿರುವ ಪ್ರೇಮಾ, ಕಣ್ಣಿನಿಂದಲೇ ಸಾವಿರ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ಅಪರೂಪದ ನಟಿ ಸೌಂದರ್ಯ ಎಂದಿದ್ದಾರೆ. ನಾಲ್ಕು ಚಿತ್ರಗಳಲ್ಲಿ ಒಟ್ಟಿಗೇ ನಟಿಸುವಾಗ ಸೌಂದರ್ಯ ಅವರ ಗುಣ ನನಗೆ ತುಂಬಾ ಮೆಚ್ಚುಗೆ ಆಗಿತ್ತು.

ಇನ್ನು ಅವರ ಸಾವಿನ ಸುದ್ದಿ ಬಂದ ದಿನವನ್ನು ನೆನಪಿಸಿಕೊಂಡಿರುವ ಪ್ರೇಮಾ ಕಣ್ಣೀರು ಸುರಿಸಿದರು, 'ಆ ದಿನ ನನಗೆ ಇನ್ನೂ ನೆನಪಿದೆ. ಅಂದು ನಾನು ಸೌಂದರ್ಯ ಮನೆಗೆ ಹೋಗಿದ್ದೆ. ಅಲ್ಲಿ ಸೌಂದರ್ಯ ಅವರ ಶವವನ್ನು ಬಾಕ್ಸ್‌ನಲ್ಲಿ ಇಡಲಾಗಿತ್ತು. ಅದರಲ್ಲಿ ಆಕೆಯ ಶವವಿತ್ತು. ಆದರೆ, ರುಂಡದ ಭಾಗವೇ ಇರಲಿಲ್ಲ. ನಾನು ನೋಡಿ ಬೆಚ್ಚಿಬಿದ್ದಿದ್ದೆ, ತಲೆ ತಿರುಗಿದಂತೆ ಆಯಿತು. ಆ ವೇಳೆ ಮನುಷ್ಯದ ಅದರಲ್ಲಿಯೂ ಕಲಾವಿದರ ಜೀವನ ಇಷ್ಟೇನಾ ಅಂತ ಅನಿಸಿತ್ತು ಎಂದು ಸೌಂದರ್ಯ ಅವರನ್ನು ನೆನೆದು ಪ್ರೇಮಾ ಕಣ್ಣೀರು ಹಾಕಿದರು.
ಇನ್ನು‘ಆಪ್ತಮಿತ್ರ’ ಸಿನಿಮಾದಲ್ಲಿ ಅದ್ಭುತವಾಗಿದ್ದ ನಟಿಸಿದ್ದ ಸೌಂದರ್ಯರನ್ನು ನಟ ರಮೇಶ್ ಅರವಿಂದ್ ಅವರು ‘ಮಹಾನಟಿ’ ರಿಯಾಲಿಟಿ ಶೋನಲ್ಲಿ ನೆನಪಿಸಿಕೊಂಡಿದ್ದಾರೆ.

‘ಮಹಾನಟಿ’ ಶೋನಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕಿಯರಾಗಿ ಮೆರೆದವರ ಝಲಕ್‌ಗಳನ್ನು ಅಲ್ಲಿನ ಸ್ಪರ್ಧಿಗಳು ನಟಿಸಿ ತೋರಿಸಿದ್ದರು. ಆ ವೇಳೆ ಓರ್ವ ಸ್ಪರ್ಧಿ ಪ್ರಿಯಾಂಕಾ ಅವರು ‘ಸಿಪಾಯಿ’ ಸಿನಿಮಾದಲ್ಲಿ ಸೌಂದರ್ಯ ಪಾತ್ರವನ್ನು ಮತ್ತೆ ರಿ ಕ್ರಿಯೇಟ್ ಮಾಡುವ ಪ್ರಯತ್ನಪಟ್ಟಿದ್ದಾರೆ. ಆಗ ರಮೇಶ್ ಅವರು ಸೌಂದರ್ಯರನ್ನು ನೆನಪಿಸಿಕೊಂಡಿದ್ದಾರೆ.

“ಆಪ್ತಮಿತ್ರ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಆಪ್ತಮಿತ್ರ ಸಿನಿಮಾ ಟೈಮ್‌ನಲ್ಲಿ ರಂಗೋಲಿ ಮಧ್ಯೆ ಸೌಂದರ್ಯ ನಟಿಸುತ್ತಿದ್ದರು, ಅವರು ಪಾತ್ರದ ಪರಕಾಯ ಪ್ರವೇಶ ಮಾಡಿದ್ದರು. ಅಲ್ಲಿ ನಮಗೆ ಸೌಂದರ್ಯ ಬಿಟ್ಟು ನಾಗವಲ್ಲಿ ಕಾಣಿಸುತ್ತಿದ್ದರು, ನಾವು ಅಲ್ಲಿ ಇದ್ದು ಡಿಸ್ಟರ್ಬ್ ಮಾಡೋದು ಬೇಡ ಅಂತ ಹೊರಗಡೆ ಬಂದೆವು. ಸೌಂದರ್ಯ ಅವರಿಗೆ ಕ್ಲಾಸ್ಟ್ರೋಫೋಬಿಯಾ ಇತ್ತು, ಅವರಿಗೆ ಚಿಕ್ಕ ರೂಮ್‌, ಲಿಫ್ಟ್, ಚಿಕ್ಕ ಜಾಗದಲ್ಲಿ ಇರೋಕೆ ಆಗುತ್ತಿರಲಿಲ್ಲ. ಆ ಥರ ಮನಸ್ಥಿತಿ ಇದ್ದ ಹುಡುಗಿ ಹೆಲಿಕಾಪ್ಟರ್‌ನಲ್ಲಿ ಹೇಗೆ ಕೂತರು, ಏನಾಯ್ತು ಅಂತ ಗೊತ್ತಾಗಲಿಲ್ಲ.

ಪಂಚತಂತ್ರ ಸಿನಿಮಾ ಶೂಟಿಂಗ್‌ನಲ್ಲಿದ್ದಾಗ ಟಿವಿಯಲ್ಲಿ ಸೌಂದರ್ಯ ನಿಧನ ಅಂತ ನ್ಯೂಸ್ ಬಂತು, ನನಗೆ ನಂಬಲು ಆಗಲೇ ಇಲ್ಲ. ನಾನು ಸಾಕಷ್ಟು ಬಾರಿ ಅವರಿಗೆ ಫೋನ್ ಮಾಡುತ್ತಿದ್ದೆ, ಫೋನ್ ಎತ್ತಬಹುದು ಅಂತ ನಿರೀಕ್ಷೆ ಇತ್ತು ” ಎಂದು ನಟಿ ಸೌಂದರ್ಯ ಬಗ್ಗೆ ರಮೇಶ್ ಅರವಿಂದ್ ಅವರು ಹೇಳಿದ್ದಾರೆ.

ಕನ್ನಡದಲ್ಲಿ ವಿಷ್ಣುವರ್ಧನ್, ಅನಂತ್ ನಾಗ್, ರವಿಚಂದ್ರನ್, ಶಶಿಕುಮಾರ್, ರಮೇಶ್ ಅರವಿಂದ್, ಅವಿನಾಶ್ ಅವರ ಜೊತೆ ನಟಿಸಿದ ಸೌಂದರ್ಯ ಅವರು ‘ದ್ವೀಪ’ ಸಿನಿಮಾಗೆ ( ನಿರ್ಮಾಪಕರು ), ‘ಆಪ್ತಮಿತ್ರ’ ಸಿನಿಮಾಕ್ಕೆ ಉತ್ತಮ ನಟಿ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 2003ರಲ್ಲಿ ಸೌಂದರ್ಯ ಅವರು ಸಾಫ್ಟ್‌ವೇರ್ ಇಂಜಿನಿಯರ್ ಜಿ ಎಸ್ ರಘು ಎನ್ನುವವರನ್ನು ಮದುವೆಯಾಗಿದ್ದರು.  2004ರಲ್ಲಿ ಸೌಂದರ್ಯ ಅವರು ಚುನಾವಣಾ ಪ್ರಚಾರಕ್ಕೋಸ್ಕರ ಅವರು ಸಹೋದರ ಅಮರ್‌ನಾಥ್ ಜೊತೆಗೆ ಬೆಂಗಳೂರಿನಿಂದ ಕರಿಮ್‌ನಗರಕ್ಕೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅಲ್ಲಿ ಏರ್‌ಕ್ರ್ಯಾಶ್ ಆಗಿ ಸೌಂದರ್ಯ ಸಜೀವಹನ ಆದರು.

Advertisement
Tags :
Advertisement