ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಶೀಘ್ರವೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ?

ಸೆಲೆಬ್ರಿಟಿ ದಂಪತಿಗಳ ಮಧ್ಯೆ ವೈಮನಸ್ಸು ಮೂಡುವುದು, ಅವರು ವಿಚ್ಛೇದನ ಪಡೆಯುವುದು ಹೊಸದಲ್ಲ. ಈಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಂಪತಿ ಇದೇ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಇವರು ವಿಚ್ಛೇದನ ಪಡೆಯಲಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ.
01:37 PM Dec 05, 2023 IST | Ashitha S

ಮುಂಬೈ:  ಸೆಲೆಬ್ರಿಟಿ ದಂಪತಿಗಳ ಮಧ್ಯೆ ವೈಮನಸ್ಸು ಮೂಡುವುದು, ಅವರು ವಿಚ್ಛೇದನ ಪಡೆಯುವುದು ಹೊಸದಲ್ಲ. ಈಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಂಪತಿ ಇದೇ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಇವರು ವಿಚ್ಛೇದನ ಪಡೆಯಲಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ.

Advertisement

ಐಶ್ವರ್ಯಾ ಮತ್ತು ಅಭಿಷೇಕ್ ಕಳೆದ ಹಲವು ದಿನಗಳಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಐಶ್ವರ್ಯಾ ರೈ ಹುಟ್ಟುಹಬ್ಬವಿತ್ತು. ಆಗ ಐಶ್ವರ್ಯಾ ಜೊತೆಗಿದ್ದಿದ್ದು ಅವರ ತಾಯಿ ಮತ್ತು ಮಗಳು ಮಾತ್ರ. ಅವರ ಬರ್ತ್​ಡೇ ದಿನ ಅಭಿಷೇಕ್ ಅವರು ಐಶ್ವರ್ಯಾ ಅವರ ಫೋಟೋನ ಗೂಗಲ್​ನಲ್ಲಿ ಹುಡುಕಿ ಡೌನ್​ಲೋಡ್​ ಮಾಡಿ ಪೋಸ್ಟ್ ಮಾಡಿದ್ದರು. ಹ್ಯಾಪಿ ಬರ್ತ್​ಡೇ ಎಂದಷ್ಟೇ ಬರೆದಿದ್ದರು. ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇಬ್ಬರು ಎಂಗೇಜ್‌ ಮೆಂಟ್‌ ರಿಂಗ್‌ ಕೂಡ ಧರಿಸದೇ ಇತ್ತಿಚೇಗೆ ಪಾರ್ಟಿವೊಂದರಲ್ಲಿ ಅಭಿಷೇಕ್‌ ಕಾಣಿಸಿಕೊಂಡಿದ್ದರು. ಈ ಎಲ್ಲಾ ಕಾರಣಗಳಿಂದ ವಿಚ್ಚೇದನ ವಿಚಾರ ಸಖತ್‌ ಸೌಂಡ್‌ ಮಾಡುತ್ತಿದೆ.

ಸ್ವಘೋಷಿತ ಚಿತ್ರ ವಿಶ್ಲೇಷಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದರು. ‘ಅಭಿಷೇಕ್-ಐಶ್ವರ್ಯಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ’ ಎಂದು ಉಮೈರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರು ಪೋಸ್ಟ್ ಮಾಡುವ ಬಹುತೇಕ ಎಲ್ಲಾ ಟ್ವೀಟ್​ಗಳು ಫೇಕ್ ಆಗಿರುತ್ತವೆ.

Advertisement

Advertisement
Tags :
GOVERNMENTindiaLatestNewsNewsKannadaಅಭಿಷೇಕ್ ಬಚ್ಚನ್ಐಶ್ವರ್ಯಾ ರೈಬೆಂಗಳೂರುವಿಚ್ಛೇದನ
Advertisement
Next Article