ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪುಟಿನ್​ ವಿರೋಧಿ ಅಲೆಕ್ಸಿ ಜೈಲಲ್ಲೇ ಮೃತ್ಯು: ವರದಿ !

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ನಡೆ, ನಿರ್ಧಾರವನ್ನು ಟೀಕಿಸುತ್ತಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆರೋಗ್ಯಕ್ಕೀಡಾಗಿದ್ದ ಅಲೆಕ್ಸಿ ಸಾವು ಇದೀಗ ಹಲವು ಅನುಮಾಗಳಿಗೆ ಎಡೆಮಾಡಿದೆ. ಇಷ್ಟೇ ಅಲ್ಲ ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ರಿಶಿ ಸುನಕ್ ಸೇರಿದಂತೆ ಹಲವು ಪ್ರಮುಖ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.
09:16 PM Feb 16, 2024 IST | Gayathri SG

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ನಡೆ, ನಿರ್ಧಾರವನ್ನು ಟೀಕಿಸುತ್ತಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆರೋಗ್ಯಕ್ಕೀಡಾಗಿದ್ದ ಅಲೆಕ್ಸಿ ಸಾವು ಇದೀಗ ಹಲವು ಅನುಮಾಗಳಿಗೆ ಎಡೆಮಾಡಿದೆ. ಇಷ್ಟೇ ಅಲ್ಲ ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ರಿಶಿ ಸುನಕ್ ಸೇರಿದಂತೆ ಹಲವು ಪ್ರಮುಖ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.

Advertisement

ಆರ್ಕಿಟಿಕ್ಟ್ ಜೈಲಿನಲ್ಲಿ ಅಲೆಕ್ಸಿ ನಿಧನರಾಗಿದ್ದಾರೆ ಎಂದು ರಷ್ಯಾದ ಫೆಡರಲ್ ಪೆನಿಟೆನ್ಶಿಯರಿ ತಿಳಿಸಿದೆ. ಜೈಲಿನಲ್ಲಿ ಅಲೆಕ್ಸಿ ಅಸ್ವಸ್ಥಗೊಂಡಿದ್ದು, ತಕ್ಷಣವೇ ಕುಸಿದು ಬಿದ್ದಿದ್ದಾರೆ. ವೈದ್ಯರ ತಂಡ ಕೂಡಲೇ ಅವರ ನೆರವಿಗೆ ಧಾವಿಸಿದೆ. ಬಳಿಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲೆಕ್ಸಿ ಬದುಕುಳಿಯಲಿಲ್ಲ. ಅವರ ಸಾವಿನ ಕುರಿತು ರಷ್ಯಾದ ತನಿಖಾ ಸಂಸ್ಥೆ ತನಿಖೆ ನಡೆಸುವುದಾಗಿ ಹೇಳಿದೆ.

47 ವರ್ಷದ ಅಲೆಕ್ಸಿ ವಿರೋಧ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಪುಟಿನ್ ಪುತಿನ್ ಭ್ರಷ್ಟಾಚಾರ, ದುರಾಡಳಿತದ ವಿರುದ್ದ ಬಹಿರಂಗವಾಗಿ ಟೀಕೆ ವ್ಯಕ್ತಪಡಿಸಿದ್ದರು. ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಪುತಿನ್ ವಿರುದ್ದ ಟೀಕೆ, ಆಕ್ರೋಶ ಹೊರಹಾಕತ್ತಲೇ ಇದ್ದರು. 2021ರಲ್ಲಿ ಜರ್ಮನಿಯಿಂದ ಮರಳುತ್ತಿದ್ದಂತೆ ಅಲೆಕ್ಸಿಯನ್ನು ಬಂಧಿಸಲಾಗಿತ್ತು. 2021ರಲ್ಲಿ ಅಲೆಕ್ಸಿ ಮೇಲೆ ಹಲವು ಆರೋಪಗಳನ್ನು ಹೊರಿಸಿ ಬಂಧಿಸಲಾಗಿತ್ತು. ಇಷ್ಟೇ ಅಲ್ಲ 19 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿತ್ತು.

Advertisement

ಜೈಲಿನಿಂದ ಬಿಡುಗಡೆಯಾಗಲು ಕಾನೂನು ಹೋರಾಟ ತೀವ್ರಗೊಳಿಸಿದ್ದ ಅಲೆಕ್ಸಿಗೆ ಹಂತ ಹಂತವಾಗಿ ಗೆಲುವು ಸಿಕ್ಕಿತ್ತು. ಇದರ ನಡುವೆ ದಿಢೀರ್ ಸಾವು ಇದೀಗ ಹಲವು ಅನುಮಾನಗಳನ್ನು ಮೂಡಿಸಿದೆ.

Advertisement
Tags :
LatestNewsNewsKannadaಪುಟಿನ್
Advertisement
Next Article