ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಲಿಯನೇರ್ ಅನಂತ್ ಅಂಬಾನಿ

ಇಂದು ಮುಕೇಶ್ ಅಂಬಾನಿ ಅವರ ಮೂರನೇ ಮಗ ಅನಂತ್ ಅಂಬಾನಿ ಅವರ ಜನ್ಮದಿನ. ಅನಂತ್ ಅಂಬಾನಿ, ಭಾರತೀಯ ಬಿಲಿಯನೇರ್ ಮುಕೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿಯ ಕಿರಿಯ ಮಗ.
11:34 AM Apr 10, 2024 IST | Ashitha S

ಜಾಮ್‌ನಗರ:  ಇಂದು ಮುಕೇಶ್ ಅಂಬಾನಿ ಅವರ ಮೂರನೇ ಮಗ ಅನಂತ್ ಅಂಬಾನಿ ಅವರ ಜನ್ಮದಿನ. ಅನಂತ್ ಅಂಬಾನಿ, ಭಾರತೀಯ ಬಿಲಿಯನೇರ್ ಮುಕೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿಯ ಕಿರಿಯ ಮಗ.

Advertisement

 1995ರಲ್ಲಿ ಹುಟ್ಟಿದ ಅನಂತ್ 29 ವರ್ಷದ ಉದ್ಯಮಿ ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ. ಇದು ಮಾತ್ರವಲ್ಲದೆ, ಅನಂತ್ ಅಂಬಾನಿ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕರೂ ಆಗಿದ್ದಾರೆ.

ಅನಂತ್‌ ಅಂಬಾನಿ ಕೋಟಿ ಕೋಟಿ ಬಿಸಿನೆಸ್ ನಿರ್ವಹಿಸುವುದರ ಜೊತೆಗೆ ಲಕ್ಸುರಿಯಸ್‌ ಲೈಫ್‌ ಲೀಡ್ ಮಾಡುತ್ತಾರೆ. ದುಬಾರಿ ಕಾರುಗಳು, ವಾಚ್‌ಗಳ ಸಂಗ್ರಹವನ್ನು ಹೊಂದಿದ್ದಾರೆ. ಮಾತ್ರವಲ್ಲ ಅಂಬಾನಿ ಕಿರಿಯ ಮಗ ಕಾಸ್ಟ್ಲೀ ಬ್ರೂಚರ್‌ಗಳ ಸಂಗ್ರಹವನ್ನೂ ಹೊಂದಿದ್ದಾರೆ. ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿರುವ ಅನಂತ್, ಪ್ರಾಣಿಪ್ರಿಯರಾಗಿ ಹೆಸರುವಾಸಿಯಾಗಿರುವ ಅವರು ರಿಲಾಯನ್ಸ್​ನ ನ್ಯೂ ಎನರ್ಜಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ.

Advertisement

ಪ್ರಾಣಿಪ್ರಿಯರಾಗಿರುವ ಅವರು ಗುಜರಾತ್​ನ ಜಾಮ್​ನಗರದಲ್ಲಿ 3,000 ಎಕರೆ ಪ್ರದೇಶದಲ್ಲಿ ವಂತರಾ ಎಂಬ ತಾಣ ನಿರ್ಮಿಸುತ್ತಿದ್ದಾರೆ. ಇದರಲ್ಲಿ ಗಾಯಗೊಂಡ ಮತ್ತು ಅಸಹಾಯಕಗೊಂಡ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಪಾಲನೆ ಇತ್ಯಾದಿ ವ್ಯವಸ್ಥೆ ಇರುತ್ತದೆ. ಈ ಮೃಗಾಲಯದ ಬಗ್ಗೆ ಅನಂತ್ ಅಂಬಾನಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮೃಗಾಲಯದ ಅಭಿವೃದ್ಧಿಗೆ ನನ್ನ ತಂದೆ ತಾಯಿಯೇ ನನಗೆ ಸ್ಫೂರ್ತಿ. ಆನೆಗಳ ಆರೈಕೆ ಕೇಂದ್ರ ಸ್ಥಾಪಿಸಿದ್ದೇವೆ. ರಕ್ಷಣಾ ಕೇಂದ್ರದಲ್ಲಿ 200ಕ್ಕೂ ಹೆಚ್ಚು ಆನೆಗಳಿವೆ ಎಂದು ತಿಳಿಸಿದ್ದಾರೆ. ಮೃಗಾಲಯದಲ್ಲಿ 100ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳಿವೆ. ಅಪರೂಪದ ಪ್ರಾಣಿಗಳನ್ನು ಸಂರಕ್ಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

3,000-4,000 ಜನರನ್ನು ಇದಕ್ಕಾಗಿ ಅಂದರೆ ಪ್ರಾಣಿಗಳ ರಕ್ಷಣೆಗಾಗಿ ಟ್ರೇನ್ ಮಾಡಲಾಗಿದೆ. ಪ್ರಾಣಿಗಳು ದೇವರಿಗೂ ಪ್ರಿಯ. ಮೃಗಾಲಯದಲ್ಲಿ ಸೌರಶಕ್ತಿ ಬಳಸುತ್ತಿದ್ದೇವೆ. ಇದಕ್ಕಾಗಿ ನಾವು ಗುಜರಾತ್ ಸರ್ಕಾರದೊಂದಿಗೆ ಕೈ ಜೋಡಿಸಿದ್ದೇವೆ ಎಂದು ಹೇಳಿದ್ದಾರೆ.

ಈ ಕೇಂದ್ರವು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ರಿಲಯನ್ಸ್ ಫೌಂಡೇಶನ್‌ನ ನಿರ್ದೇಶಕ ಅನಂತ್ ಅಂಬಾನಿಯವರ ಕನಸಿನ ಯೋಜನೆ. ಕೇಂದ್ರವು 25,000 ಚದರ ಅಡಿ ಆನೆ ಆಸ್ಪತ್ರೆಯನ್ನು ಹೊಂದಿದೆ, ಇದು ಜಾಗತಿಕವಾಗಿ ದೊಡ್ಡದಾಗಿದೆ. ನಾವು 2008ರಲ್ಲಿ ಮೊದಲ ಆನೆಯನ್ನು ರಕ್ಷಿಸಿದ್ದೇವೆ ಎಂದು ತಿಳಿಸಿದ ಅಧಿಕಾರಿಗಳು ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಪ್ರಯತ್ನಗಳು ತೀವ್ರಗೊಂಡವು ಎಂದು ತಿಳಿಸಿದ್ದಾರೆ.

ಇನ್ನು  ಅಂಬಾನಿ ಫ್ಯಾಮಿಲಿ ಅನಂತ್ ಅಂಬಾನಿ ಬರ್ತ್‌ಡೇಯನ್ನು ಗುಜರಾತ್‌ನ ಜಾಮ್ನಾನಗರದಲ್ಲಿ ಅದ್ಧೂರಿಯಾಗಿ ಆಯೋಜಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಅಂಬಾನಿ ಫ್ಯಾನ್ಸ್ ಪೇಜ್‌ ಪ್ರಕಾರ, ಭಾರತೀಯ ಗಾಯಕ, ಸಂಗೀತ ನಿರ್ದೇಶಕ, ಸಂಯೋಜಕ ಮತ್ತು ಸಂಗೀತ ನಿರ್ಮಾಪಕ ಬಿ ಪ್ರಾಕ್, ಅನಂತ್ ಅಂಬಾನಿ ಹುಟ್ಟುಹಬ್ಬದ ಸಮಾರಂಭದಲ್ಲಿ ಲೈವ್ ಪ್ರದರ್ಶನ ನೀಡಲಿದ್ದಾರೆ.

ಜಾಮ್‌ನಗರದಲ್ಲಿ ಅನಂತ್ ಅವರ ಹುಟ್ಟುಹಬ್ಬದ ಸಮಾರಂಭದ ಸಂಪೂರ್ಣ ಸ್ಥಳವನ್ನು ದೀಪಗಳಿಂದ ಅಲಂಕರಿಸಲಾಗಿದೆ. ಅತಿಥಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಭೋಜನದ ವ್ಯವಸ್ಥೆ ಮಾಡಲಾಗಿದೆ. ಮಾತ್ರವಲ್ಲ ಸಮಾರಂಭದಲ್ಲಿ ಬಾಲಿವುಡ್‌ನ ನಟ-ನಟಿಯರು ಸಹ ಭಾಗಿಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇನ್ನು ರಾಧಿಕಾ ಮರ್ಚಂಟ್ ಜೊತೆ ನಿಶ್ಚಿತಾರ್ಥ ಆಗಿದ್ದು, ಜುಲೈನಲ್ಲಿ ಮದುವೆ ಮಹೋತ್ಸವ ನಡೆಯಲಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಪೂರ್ವ ಸಮಾರಂಭಗಳು ಜಾಮ್‌ನಗರದ ಹಳ್ಳಿಯಿಂದ ಪ್ರಾರಂಭವಾಯಿತು, ಅಲ್ಲಿ ಅಂಬಾನಿ ಕುಟುಂಬವು ಗ್ರಾಮಸ್ಥರಿಗೆ ಊಟ ಬಡಿಸಿದ್ದರು.
ಇದಾದ ಬಳಿಕ 3 ದಿನಗಳ ಕಾಲ ಅದ್ಧೂರಿ ಆಚರಣೆ ನಡೆಯಿತು. ಕುಟುಂಬ, ಸ್ನೇಹಿತರು, ರಿಲಯನ್ಸ್ ಇಂಡಸ್ಟ್ರೀಸ್ ಉದ್ಯೋಗಿಗಳು ಮತ್ತು ರಿಲಯನ್ಸ್ ಟೌನ್‌ಶಿಪ್‌ನಲ್ಲಿ ವಾಸಿಸುವ ಕುಟುಂಬಗಳು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದವು.ಅನಂತ್-ರಾಧಿಕಾ ಅವರ ವಿವಾಹ ಪೂರ್ವ ಸಮಾರಂಭ ಯಶಸ್ವಿಯಾದ ಬಗ್ಗೆ ಅಂಬಾನಿ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಸಮಾರಂಭಕ್ಕೆ ಆಗಮಿಸಿದ ಅತಿಥಿಗಳು, ಸ್ನೇಹಿತರು, ಸಂಬಂಧಿಕರು ಮತ್ತು ರಿಲಯನ್ಸ್ ಕುಟುಂಬಕ್ಕೆ ಎಲ್ಲರೂ ಕೃತಜ್ಞತೆಸಲ್ಲಿಸಿದ್ದರು.

 

Advertisement
Tags :
Anant ambanibirthdayGOVERNMENTindiaLatestNewsNewsKannadaನವದೆಹಲಿ
Advertisement
Next Article