For the best experience, open
https://m.newskannada.com
on your mobile browser.
Advertisement

ಸಿನಿಮಾ ವಿಮರ್ಶಕ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ನಿಧನ

ಸೋಶಿಯಲ್ ಮೀಡಿಯಾದಲ್ಲಿ ಆ್ಯಂಗ್ರಿ ರ‍್ಯಾಂಟ್​ಮ್ಯಾನ್  ಎಂದೇ ಫೇಮಸ್ ಆಗಿದ್ದ 27 ವರ್ಷದ ಅಭ್ರದೀಪ್ ಸಾಹಾ ಅವರು ನಿಧನ ಹೊಂದಿದ್ದಾರೆ.
03:50 PM Apr 17, 2024 IST | Ashika S
ಸಿನಿಮಾ ವಿಮರ್ಶಕ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ನಿಧನ

ಸೋಶಿಯಲ್ ಮೀಡಿಯಾದಲ್ಲಿ ಆ್ಯಂಗ್ರಿ ರ‍್ಯಾಂಟ್​ಮ್ಯಾನ್  ಎಂದೇ ಫೇಮಸ್ ಆಗಿದ್ದ 27 ವರ್ಷದ ಅಭ್ರದೀಪ್ ಸಾಹಾ ಅವರು ನಿಧನ ಹೊಂದಿದ್ದಾರೆ.

Advertisement

ಸಿನಿಮಾ ವಿಮರ್ಶೆ ಮಾಡಿ ಅವರು ಫೇಮಸ್ ಆಗಿದ್ದ ಅವರಿಗೆ 4.8 ಲಕ್ಷ ಹಿಂಬಾಲಕರು ಇದ್ದರು. ಸಾಕಷ್ಟು ಜೋಶ್​ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಿದ್ದರು. ಇದರ ಜೊತೆಗೆ ಇತರ ವಿಡಿಯೋಗಳನ್ನು ಕೂಡ ಮಾಡುತ್ತಿದ್ದರು.

ಅವರು ‘ಕೆಜಿಎಫ್ 2’ ಸಿನಿಮಾದ ವಿಮರ್ಶೆ ಮಾಡಿದ್ದರು. ‘ರಾಕಿಭಾಯ್ ಪ್ರಧಾನಮಂತ್ರಿ ಆದರೆ ನಮ್ಮ ದೇಶ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಇರುತ್ತದೆ’ ಎಂದು ಕೂಗಿ ಹೇಳಿದ್ದರು. 10 ನಿಮಿಷಗಳ ಈ ವಿಡಿಯೋ ಬರೋಬ್ಬರಿ 17 ಲಕ್ಷ ವೀಕ್ಷಣೆ ಕಂಡಿತ್ತು.

Advertisement

ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು.  ಕಳೆದ ತಿಂಗಳು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 11 ದಿನಗಳ ಹಿಂದೆ ಅವರ ತಂದೆ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ್ದರು. ‘ನನ್ನ ಮಗ ಇನ್ನೂ ಐಸಿಯುನಲ್ಲೇ ಇದ್ದಾನೆ’ ಎಂದು ಹೇಳಿದ್ದರು.

ದಿನ ಕಳೆದಂತೆ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಆರೋಗ್ಯ ಹದಗೆಡುತ್ತಲೇ ಹೋಯಿತು. ಈಗ ಅವರು ನಿಧನ ಹೊಂದಿದ್ದಾರೆ ಎಂದು ವರದಿ ಆಗಿದೆ.

Advertisement
Tags :
Advertisement