ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆಂಗ್ರಿ ರಾಂಟ್‌ಮ್ಯಾನ್ ಎಂದೇ ಖ್ಯಾತರಾಗಿದ್ದ ಯೂಟ್ಯೂಬರ್ ಅಬ್ರದೀಪ್ ನಿಧನ

ಸಾಮಾಜಿಕ ಮಾಧ್ಯಮಗಳಲ್ಲಿ ಆಂಗ್ರಿ ರಾಂಟ್‌ಮಾನ್ ಎಂದೇ ಜನಪ್ರಿಯವಾಗಿದ್ದ ಯೂಟ್ಯೂಬರ್ ಅಬ್ರದೀಪ್ ಸಹಾ ಅವರು 27ನೇ ವಯಸ್ಸಿಗೆ ಸಾವನ್ನಪ್ಪಿದ್ದಾರೆ. ಅವರ ಹಠಾತ್ ಸಾವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಾಂತರನ್ನಾಗಿಸಿದೆ.
03:53 PM Apr 17, 2024 IST | Ashitha S

ಮುಂಬೈ: ಸಾಮಾಜಿಕ ಮಾಧ್ಯಮಗಳಲ್ಲಿ ಆಂಗ್ರಿ ರಾಂಟ್‌ಮಾನ್ ಎಂದೇ ಜನಪ್ರಿಯವಾಗಿದ್ದ ಯೂಟ್ಯೂಬರ್ ಅಬ್ರದೀಪ್ ಸಹಾ ಅವರು 27ನೇ ವಯಸ್ಸಿಗೆ ಸಾವನ್ನಪ್ಪಿದ್ದಾರೆ. ಅವರ ಹಠಾತ್ ಸಾವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಾಂತರನ್ನಾಗಿಸಿದೆ.

Advertisement

ಏಪ್ರಿಲ್ 16ರ ತಡರಾತ್ರಿ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅವರ ಕುಟುಂಬ ಸದಸ್ಯರು, ಬಂಧುಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವರ ಹಿಂಬಾಲಕರು ಈ ಸುದ್ದಿಯಿಂದ ಶಾಕ್‌ಗೆ ಒಳಗಾಗಿದ್ದಾರೆ.

ಅಬ್ರದೀಪ್ ಅವರು ಆಗಸ್ಟ್ 18, 2017ರಂದು ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಅಪ್‌ಲೋಡ್‌ ಮಾಡಿದ ಮೊದಲ ವಿಡಿಯೋದಲ್ಲಿ "ನಾನು ಅನ್ನಾಬೆಲ್ಲೆ ಚಲನಚಿತ್ರವನ್ನು ಏಕೆ ನೋಡುವುದಿಲ್ಲ" ಎಂದು ವಿಡಿಯೋ ಮಾಡಿದ್ದರು. ದಿ ಕಾಂಜ್ಯೂರಿಂಗ್ ನೋಡಿದ ಬಳಿಕ ಹಾರರ್ ಸಿನಿಮಾಗಳನ್ನು ನೋಡಲು ನನಗೆ ಭಯವಾಗುತ್ತದೆ ಎಂದು ಹೇಳಿದ್ದರು.

Advertisement

ಆಂಗ್ರಿ ರಾಂಟ್‌ಮ್ಯಾನ್ ಕಳೆದ ತಿಂಗಳು ಪ್ರಮುಖ ಆಪರೇಷನ್ ಮಾಡಿದ್ದರಿಂದ ಆಸ್ಪತ್ರೆಯಲ್ಲಿದ್ದಾರೆ ಎಂದು ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇತ್ತೀಚಿನ ಪೋಸ್ಟ್‌ಗಳು ತಿಳಿಸಿವೆ.

ಇನ್ನು ಕೆಜಿಎಫ್‌ ಸಿನಿಮಾ ವಿಮರ್ಶೆ ಮಾಡುವ ಮೂಲಕ ಅಬ್ರದೀಪ್ ಸಹಾ ಭಾರಿ ಹೆಸರು ಮಾಡಿದ್ದರು. ಕೆಜಿಎಫ್ ಸಿನಿಮಾವನ್ನು ಹೊಗಳಿದ್ದ ಅವರು, ಬಾಲಿವುಡ್ ಸಿನಿಮಾರಂಗವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಿನಿಮಾ ಹೇಗೆ ಮಾಡಬೇಕು ಎಂದು ದಕ್ಷಿಣ ಭಾರತೀಯ ಚಿತ್ರರಂಗ ನೋಡಿ ಕಲಿಯಿರಿ ಎಂದು ಹೇಳಿದ್ದರು.

ಅವರ ವಿಡಿಯೋ ವ್ಯಾಪಕ ವೈರಲ್ ಆಗಿತ್ತು, ಮಾಧ್ಯಮಗಳಲ್ಲಿ ಕೂಡ ಅವರ ಬಗ್ಗೆ ವರದಿಗಳು ಬಂದಿದ್ದವು, ಅದಾದ ಬಳಿಕ ಅವರನ್ನು ಆಂಗ್ರಿ ರಾಂಟ್‌ಮಾನ್ ಎಂದೇ ಎಲ್ಲರೂ ಕರೆಯಲು ಆರಂಭಿಸಿದರು.

Advertisement
Tags :
AbhradeepAngry RantmanindiaKARNATAKALatetsNewsNewsKarnatakaRIPYoutuber
Advertisement
Next Article