ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜ.14 ರಂದು ಬಿಡುಗಡೆಯಾಗಲಿದೆ 'ಅರಬ್ಬರ ನಾಡಿನಲ್ಲಿ ಕನ್ನಡಿಗರು' ಪುಸ್ತಕ

ಒಮನ್ ಕನ್ನಡಿಗ ಪಿ ಎಸ್ ರಂಗನಾಥ್ ಸಂಪಾದಕತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಕನ್ನಡಿಗರು ತಮ್ಮ ಅನುಭವ ಕಥನವನ್ನು ದಾಖಲಿಸಿರುವ ಅರಬ್ಬರ ನಾಡಿನಲ್ಲಿ ಕನ್ನಡಿಗರು ಪುಸ್ತಕವು ಇದೆ ಜನವರಿ 14 ರಂದು ಬಿಡುಗಡೆಗೊಳ್ಳಲಿದೆ.
09:18 PM Jan 13, 2024 IST | Ashika S

ಬೆಂಗಳೂರು: ಒಮನ್ ಕನ್ನಡಿಗ ಪಿ ಎಸ್ ರಂಗನಾಥ್ ಸಂಪಾದಕತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಕನ್ನಡಿಗರು ತಮ್ಮ ಅನುಭವ ಕಥನವನ್ನು ದಾಖಲಿಸಿರುವ ಅರಬ್ಬರ ನಾಡಿನಲ್ಲಿ ಕನ್ನಡಿಗರು ಪುಸ್ತಕವು ಇದೆ ಜನವರಿ 14 ರಂದು ಬಿಡುಗಡೆಗೊಳ್ಳಲಿದೆ.

Advertisement

ಒಮನ್ ಕನ್ನಡಿಗರ ವೇದಿಕೆ ಮತ್ತು ಛಾಯಾ ಸಾಹಿತ್ಯ ಪ್ರಕಾಶನದ ವತಿಯಿಂದ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಲಿದೆ.

ಮುಖ್ಯವಾಗಿ ಈ ಪುಸ್ತಕವು ಒಮನ್ ನಲ್ಲಿ ಬದುಕುವ ಕನ್ನಡಿಗರ ಜೀವನ, ಬದುಕು-ಬವಣೆ,ಭಾವನೆ, ಒಮನ್ ನಲ್ಲಿರುವ ಕನ್ನಡ ಸಂಘ ಸಂಸ್ಥೆಗಳು,ಕತೆ ಕವನಗಳನ್ನು ಬರೆಯುವ ಬರಹಗಾರರು, ಕನ್ನಡ ಸಾಧಕರು, ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ಶಿಕ್ಷಕರುಗಳನ್ನು ಪರಿಚಯಿಸುವ ಒಂದು ವಿಭಿನ್ನ ಪ್ರಯತ್ನವಾಗಿದೆ. ಇಲ್ಲಿ ಬರುವ ಎಲ್ಲಾ ಲೇಖನಗಳು ಒಮನ್ ನಲ್ಲಿರುವ ಕನ್ನಡಿಗರ ಸ್ವಂತ ಅನುಭವದ ಬರಹಗಳಾಗಿವೆ.

Advertisement

ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್, ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವಿವೇಕಾನಂದ ಸರಸ್ವತಿ ಸ್ವಾಮೀಜಿ, ಅನಿವಾಸಿ ಭಾರತೀಯ ಕೋಶ ಉಪಾಧ್ಯಕ್ಷ ಡಾ. ಆರತಿ ಕೃಷ್ಣ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

Advertisement
Tags :
LatestNewsNewsKannadaಅನುಭವಒಮನ್ ಕನ್ನಡಿಕಥನಕನ್ನಡಿಗರುಪಿ ಎಸ್ ರಂಗನಾಥ್ಪುಸ್ತಕಸಂಪಾದಕತ್ವ
Advertisement
Next Article