ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸೋಲೇ ಯಶಸ್ಸಿನ ಮೂಲ: ಬಿ.ವಿ. ಸೂರ್ಯನಾರಾಯಣ

ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವನೆ ಹೊಂದುವುದು ಅತೀ ಅಗತ್ಯವಾಗಿದೆ. ಸೋಲೇ ಗೆಲುವಿಗೆ ಸೋಪಾನ ಎನ್ನುವಂತೆ, ಸೋಲನ್ನು ಎದುರಿಸಿ ಜೀವನದ ಒಂದು ಭಾಗ ಎಂದು ಸ್ವೀಕರಿಸಿದಾಗ ಯಶಸ್ಸು ಖಂಡಿತ ಸಾಧ್ಯ. ಕಠಿಣ ಪರಿಶ್ರಮದ ಜೊತೆಗೆ ಬುದ್ಧಿವಂತಿಕೆ ಉಪಯೋಗಿಸಿ ಕಾರ್ಯ ಸಾಧಿಸಿದಾಗ ಯಶಸ್ಸು ಲಭಿಸುತ್ತದೆ ಸಫಲರಾಗಿ ಎಂದು ವಾಗ್ಮಿ, ಸಂಪನ್ಮೂಲ ವ್ಯಕ್ತಿ, ವಿಶ್ರಾಂತ ಪ್ರಾಚಾರ್ಯ ಬಿ. ವಿ. ಸೂರ್ಯನಾರಾಯಣ ಹೇಳಿದರು.
02:56 PM Mar 16, 2024 IST | Gayathri SG

ಪುತ್ತೂರು: ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವನೆ ಹೊಂದುವುದು ಅತೀ ಅಗತ್ಯವಾಗಿದೆ. ಸೋಲೇ ಗೆಲುವಿಗೆ ಸೋಪಾನ ಎನ್ನುವಂತೆ, ಸೋಲನ್ನು ಎದುರಿಸಿ ಜೀವನದ ಒಂದು ಭಾಗ ಎಂದು ಸ್ವೀಕರಿಸಿದಾಗ ಯಶಸ್ಸು ಖಂಡಿತ ಸಾಧ್ಯ. ಕಠಿಣ ಪರಿಶ್ರಮದ ಜೊತೆಗೆ ಬುದ್ಧಿವಂತಿಕೆ ಉಪಯೋಗಿಸಿ ಕಾರ್ಯ ಸಾಧಿಸಿದಾಗ ಯಶಸ್ಸು ಲಭಿಸುತ್ತದೆ ಸಫಲರಾಗಿ ಎಂದು ವಾಗ್ಮಿ, ಸಂಪನ್ಮೂಲ ವ್ಯಕ್ತಿ, ವಿಶ್ರಾಂತ ಪ್ರಾಚಾರ್ಯ ಬಿ. ವಿ. ಸೂರ್ಯನಾರಾಯಣ ಹೇಳಿದರು.

Advertisement

ಅವರು ನಗರದ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಪಿಯು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಪ್ರಯತ್ನ ಅತೀ ಅಗತ್ಯ. ಬೆಲೆ ಬಾಳುವ ಮುತ್ತು, ರತ್ನಗಳು ಸಿಗಬೇಕಾದರೆ ಸಮುದ್ರದ ಆಳಕ್ಕೆ ಧುಮುಕಿ ಹುಡುಕಾಟ ನಡೆಸುವಂತೆ ವಿದ್ಯಾರ್ಥಿಗಳು ಕಷ್ಟಪಟ್ಟು ನಿರಂತರ ಪ್ರಯತ್ನ ನಡೆಸುವುದು ಅಗತ್ಯ. ಒಂದು ಗುರಿಯನ್ನು ನಿಗದಿಪಡಿಸಿ, ಅದನ್ನು ತಲುಪುವವರೆಗೆ ಸುಮ್ಮನೆ ಕೂರಬಾರದು. ತಾತ್ಕಾಲಿಕ ನೋವು ಚಿಂತೆಗಳನ್ನು ಪರಿಗಣಿಸಬಾರದು ಎಂದು ಕಿವಿಮಾತು ಹೇಳಿದರು.

Advertisement

ಉಪ ಪ್ರಾಚಾರ್ಯೆ ಶೈನಿ ಕೆ.ಜೆ. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಆತ್ಮಶ್ರೀ, ಮಹತಿ, ಸಾನ್ವಿ ಕಜೆ ಪ್ರಾರ್ಥಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಅಕ್ಷತಾ ಎಂ. ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ್ ಸಹಕರಿಸಿದರು.

Advertisement
Tags :
AmbikaCollegeLatestNewsNewsKannada
Advertisement
Next Article